ನವದೆಹಲಿ:ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಅವರ ಫ್ಲೈಯಿಂಗ್​ ಕಿಸ್ ವಿಚಾರವೂ​ ವಿವಾದದ ಕಿಡಿ ಹೊತ್ತಿಸಿದ್ದು, ಇದಕ್ಕೆ ಬಿಹಾರದ ಕಾಂಗ್ರೆಸ್​ ಶಾಸಕಿ ನೀತು ಸಿಂಗ್​ ಅವರು ತಮ್ಮ ಮಾತುಗಳ ಮೂಲಕ ತುಪ್ಪ ಸುರಿದಿದ್ದಾರೆ.
ರಾಹುಲ್​ ಅವರಿಗೆ ಯುವತಿಯರ ಕೊರತೆ ಇಲ್ಲದಿರುವಾಗ 50 ವರ್ಷದ ಮಹಿಳೆಗೆ ಫ್ಲೈಯಿಂಗ್​ ಕಿಸ್​ ಏಕೆ ಕೊಡುತ್ತಾರೆ ಎಂದು ನೀತು ಸಿಂಗ್​ ಅವರು ಮಾತನಾಡಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಇದು ಹೊಸ ವಿವಾದವನ್ನು ಹುಟ್ಟುಹಾಕಿದೆ. ಇದಲ್ಲದೆ ಬಿಹಾರದ ಹಿಸುವಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಫ್ಲೈಯಿಂಗ್​ ಕಿಸ್​ ವಿವಾದದ ಬಗ್ಗೆ ಮಾತನಾಡಿ, ರಾಹುಲ್​ ಗಾಂಧಿ ಅವರ ಹೆಸರನ್ನು ಕೆಡಿಸುವ ಬಿಜೆಪಿಯ ಪ್ರಯತ್ನ ಇದು ಎಂದು ಕಿಡಿಕಾಡಿದ್ದಾರೆ.
ನಮ್ಮ ನಾಯಕ ರಾಹುಲ್​ ಗಾಂಧಿಗೆ ಯುವತಿಯರ ಕೊರತೆ ಇಲ್ಲ. ಇಂದು ವೇಳೆ ಫ್ಲೈಯಿಂಗ್ ಕಿಸ್ ಕೊಡುವುದಾದರೆ ಅದನ್ನು ಒಂದು ಯುವತಿಗೆ ಕೊಡುತ್ತಾರೆ ಹೊರತು ಸ್ಮೃತಿ ಇರಾನಿಯಂತಹ 50 ವರ್ಷ ವಯಸ್ಸಾದ ಮಹಿಳೆಗೆ ಏಕೆ ಕೊಡುತ್ತಾರೆ. ರಾಹುಲ್​ ವಿರುದ್ಧದ ಎಲ್ಲ ಆರೋಪಗಳು ನಿರಾಧಾರ ಎಂದು ನೀತು ಸಿಂಗ್​ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಮಂಡ್ಯದಲ್ಲಿ ರೀಲ್ಸ್​ ಗೀಳಿಗೆ ಯುವತಿ ಬಲಿ! ಗಂಡನಿಂದಲೇ ನಡೆಯಿತು ಘೋರ ಕೃತ್ಯ, ಅಳಿಯನಿಗೆ ಸಾಥ್​ ಕೊಟ್ಟ ಮಾವ
ಇದೇ ಸಂದರ್ಭದಲ್ಲಿ ನೀತು ಸಿಂಗ್ ಅವರ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಬಿಜೆಪಿ ಪಕ್ಷದ ವಕ್ತಾರ ಗೌರವ್​​ ಭಾಟಿಯಾ ಟ್ವೀಟ್​ ಮಾಡಿದ್ದು, ಸ್ಮೃತಿ ಇರಾನಿಯ ಬಗ್ಗೆ ನೀತು ಸಿಂಗ್​ ಆಡಿರುವ ಮಾತು ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.
ಭಾಟಿಯಾ ಅವರ ಮಾತಿಗೆ ಧ್ವನಿಗೂಡಿಸಿದ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಕಾಂಗ್ರೆಸ್ ‘ಮಹಿಳಾ ವಿರೋಧಿ ಪಕ್ಷ’ ಮತ್ತು ಅದು ತನ್ನ ನಾಯಕ ರಾಹುಲ್ ಗಾಂಧಿಯನ್ನು ರಕ್ಷಿಸಲು ಯಾವುದೇ ಹಂತಕ್ಕೂ ಹೋಗಬಹುದು ಎಂಬುದನ್ನು ನಿರೂಪಿಸಿದೆ ಎಂದು ಕಿಡಿಕಾರಿದರು.
ಬುಧವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯ ವೇಳೆ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಊದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸ್ಮೃತಿ ಇರಾನಿ, ಅವರನ್ನು ಸ್ತ್ರೀದ್ವೇಷವಾದಿ ಎಂದು ಕರೆದರು. ಸದನವು ಇಂತಹ ಅಸಭ್ಯ ಕೃತ್ಯವನ್ನು ಹಿಂದೆಂದೂ ನೋಡಿಲ್ಲ ಎಂದು ಹೇಳಿದರು. ಅಲ್ಲದೆ, ಸದನದಲ್ಲಿ ಬಿಜೆಪಿ ಮಹಿಳಾ ಸದಸ್ಯರು ಸ್ಪೀಕರ್​ ಓಂ ಬಿರ್ಲಾ ಅವರ ಬಳಿ ಹೋಗಿ ರಾಹುಲ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. 20ಕ್ಕೂ ಹೆಚ್ಚು ಮಹಿಳಾ ಸಂಸದರು ಸಹಿ ಮಾಡಿದ ದೂರಿನಲ್ಲಿ, ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸದನದಲ್ಲಿ ಮಾತನಾಡುತ್ತಿದ್ದಾಗ ರಾಹುಲ್​ ಗಾಂಧಿ ಇರಾನಿ ಕಡೆಗೆ “ಅನುಚಿತ ಸನ್ನೆ” ಮಾಡಿದರು ಎಂದು ಆರೋಪಿಸಲಾಗಿದೆ.(ಏಜೆನ್ಸೀಸ್​)
10 ತಿಂಗಳ ಮಗುವಿನ ತಲೆ ಮೇಲೆ ಕುಸಿದು ಬಿತ್ತು ಅಂಗನವಾಡಿ ಛಾವಣಿ! ಮಾಸದ ನಗು…

ಮಂಡ್ಯದಲ್ಲಿ ರೀಲ್ಸ್​ ಗೀಳಿಗೆ ಯುವತಿ ಬಲಿ! ಗಂಡನಿಂದಲೇ ನಡೆಯಿತು ಘೋರ ಕೃತ್ಯ, ಅಳಿಯನಿಗೆ ಸಾಥ್​ ಕೊಟ್ಟ ಮಾವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 10 =
Remember me
