ನವದೆಹಲಿ:ಮಾನವರು ಆಧುನಿಕವಾಗಿ ಎಷ್ಟೇ ಮುಂದುವರಿದರೂ ಇಂದಿಗೂ ಕೆಲವೊಂದು ನಂಬಿಕೆಗಳ ಹಿಂದೆ ಬಿದ್ದಿದ್ದಾರೆ. ಈ ನಂಬಿಕೆಗಳು ಕೇಳಲು ಒಂದು ರೀತಿ ವಿಚಿತ್ರ ಎನಿಸಿದರೂ ಸಹ ಅದರ ಹಿಂದಿನ ಕಾರಣ ತಿಳಿದರೆ ನಿಜಕ್ಕೂ ನಮ್ಮನ್ನು ಅಚ್ಚರಿಗೆ ದೂಡುತ್ತದೆ. ಅಂಥದ್ದೆ ಒಂದು ಅಚ್ಚರಿಯ ನಂಬಿಕೆಯನ್ನು ನಾವಿಂದು ನಿಮಗೆ ಪರಿಚಯಿಸುತ್ತೇವೆ.
ದೇಶದಲ್ಲಾಗಿರಲಿ ಅಥವಾ ವಿದೇಶಗಳಲ್ಲಾಗಿರಲಿ ಕೆಲವೆಡೆ ಹೋಟೆಲ್​ಗಳಲ್ಲಿ 13ನೇ ನಂಬರ್​ನ ಮಹಡಿಯಾಗಲಿ ಅಥವಾ ರೂಮ್​ ಆಗಲಿ ಇರುವುದಿಲ್ಲ. 15 ರಿಂದ 20 ಅಂತಸ್ತು ಕಟ್ಟಡಗಳಿದ್ದರೂ ಅಲ್ಲಿ 13ನೇ ನಂಬರ್ ಅನ್ನು ನಮೂದಿಸುವುದಿಲ್ಲ. 11, 12ರ ಬಳಿಕ 13ರ ಬದಲಾಗಿ 14 ಎಂದು ಹೋಟೆಲ್​ ರೂಮ್​ಗಳಲ್ಲಿ ಅಥವಾ ಮಹಡಿಗಳಲ್ಲಿ ನಮೂದಿಸಿರುತ್ತಾರೆ.
ಅನೇಕ ವಿಮಾನಯಾನ ಸಂಸ್ಥೆಗಳು ಮತ್ತು ಇತರ ವ್ಯವಹಾರಗಳು ಕೂಡ 13 ನಂಬರ್ ಬಳಸುವುದನ್ನು ತಪ್ಪಿಸುತ್ತವೆ. ಅನೇಕ ಗಗನಚುಂಬಿ ಕಟ್ಟಡಗಳು 13ನೇ ಮಹಡಿಯನ್ನು ಹೊಂದಿರುವುದಿಲ್ಲ ಮತ್ತು ಎಲಿವೇಟರ್‌ಗಳು ಸಹ ಆಗಾಗ 12 ಮತ್ತು 14ನೇ ಮಹಡಿಗಳ ನಡುವೆ ಜಿಗಿಯುತ್ತವೆ. ಆಸ್ಪತ್ರೆಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಸಾಧ್ಯವಿರುವಲ್ಲೆಲ್ಲಾ 13 ಸಂಖ್ಯೆಯನ್ನು ತಪ್ಪಿಸಲಾಗುತ್ತದೆ. ಏಕೆ ಹೀಗೆ ಎಂಬ ಪ್ರಶ್ನೆ ನಿಮಗೆ ಮೂಡಬಹುದು ಅದರ ಹಿಂದಿನ ಅಚ್ಚರಿಯ ಕಾರಣ ಮುಂದಿದೆ ಓದಿ.
13ನೇ ನಂಬರ್​ ಬಳಸದೇ ಇರುವುದಕ್ಕೆ ಟ್ರೈಸ್ಕೈಡೆಕಾಫೋಬಿಯಾ ಎಂದು ಕರೆಯುತ್ತಾರೆ. ಇದರರ್ಥ 13ನೇ ನಂಬರ್​ ಮೇಲಿನ ಭಯ ಎಂಬುದಾಗಿದೆ. ಅಂದರೆ, 13ನೇ ನಂಬರ್​ ದುರಾದೃಷ್ಟ ಅಥವಾ ಸಾವಿನ ಸಂಖ್ಯೆ ಎಂಬ ನಂಬಿಕೆ ಜನರಲ್ಲಿದೆ.
ಕಾರಣವೇನು?ಈ 13ನೇ ಸಂಖ್ಯೆಯ ಮೇಲಿರುವ ಭಯವು ಕೇವಲ 13ನೇ ಶುಕ್ರವಾರದಂದು ಜನರು ಹೊರಗೆ ಹೋಗುವುದನ್ನು ತಪ್ಪಿಸಲು ಇರುವ ಸಣ್ಣ ಸಮಯದ ಭಯವಲ್ಲ. ಯಾವಾಗೆಲ್ಲ 13ನೇ ನಂಬರ್​ ಕಿವಿಗೆ ಬೀಳುತ್ತದೋ ಆಗೆಲ್ಲ ಜನರು ಹೆದರುತ್ತಾರೆ. ಕಾರಣ ಏನೆಂದರೆ, 13ನೇ ನಂಬರ್​ ಸಾವಿನ ನಂಬರ್​ ಅಂತೆ. ಕಿಶ್ಚಿಯನ್ನರ ದೇವರು ಜೀಸಸ್​ ಶುಕ್ರವಾರ 13ನೇ ತಾರೀಖಿನಂದು ಮೃತಪಟ್ಟರು. ಹೀಗಾಗಿ ಈ ಸಂಖ್ಯೆಯನ್ನು ದುರಾದೃಷ್ಟ ಮತ್ತು ಅಪಶಕುನ ಎಂದು ಕರೆಯಲಾಗುತ್ತದೆ. ಹೀಗಾಗಿ ಕಟ್ಟಡದ 13ನೇ ಮಹಡಿಯನ್ನು ಅನೇಕ ಹೋಟೆಲ್​ಗಳಲ್ಲಿ ಸ್ಕಿಪ್ ಮಾಡುವ ಮೂಲಕ ಭಯವನ್ನು ಹೋಗಲಾಡಿಸುವ ಪ್ರಯತ್ನ ಮಾಡಲಾಗುತ್ತದೆ.
ಇನ್ನೂ 1800ರ ದಶಕದ ಉತ್ತರಾರ್ಧದಲ್ಲಿ, ಓಜಾ ಬೋರ್ಡ್‌ಗಳು ಹುಟ್ಟಿಕೊಂಡವು. ಸತ್ತವರೊಂದಿಗೆ ಸಂಪರ್ಕ ಸಾಧಿಸಲು ಮಾರ್ಗವನ್ನು ಹುಡುಕುತ್ತಿರುವವರಿಗೆ 13ನೇ ಸಂಖ್ಯೆಯು ಒಂದು ಪೋರ್ಟಲ್ ಆಗಿತ್ತು ಎಂದು ನಂಬಲಾಗಿದೆ. ವಾಸ್ತವವಾಗಿ, ಇದು ಒಬ್ಬರ ಆರೋಗ್ಯದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ಕಂಡುಕೊಂಡಿವೆ. 13ನೇ ಸಂಖ್ಯೆಯಿಂದ ಭಯಭೀತರಾಗಿರುವ ಜನರು ಹೆಚ್ಚಿನ ಮಟ್ಟದ ಉದ್ವೇಗ ಮತ್ತು ಆತಂಕವನ್ನು ಹೊಂದಿರುತ್ತಾರೆ ಎಂದು ಸಾಬೀತಾಗಿದೆ.
ನ್ಯೂಯಾರ್ಕ್ ನಗರದ ಅನೇಕ ಕಟ್ಟಡಗಳು 13ನೇ ಮಹಡಿಯನ್ನು “12B” ಅಥವಾ “14A” ಎಂದು ಉಲ್ಲೇಖಿಸುತ್ತವೆ. ಸಮೀಕ್ಷೆಯೊಂದರ ಪ್ರಕಾರ 13ಕ್ಕೂ ಹೆಚ್ಚಿನ ಮಹಡಿಗಳಿರುವ 629 ಕಟ್ಟಡಗಳಲ್ಲಿ ಕೇವಲ 55 ಮಾತ್ರ ಕಟ್ಟಡಗಳಲ್ಲಿ ಮಾತ್ರ 13ನೇ ಮಹಡಿ ಎಂದು ನಮೂದಿಸಲಾಗಿದೆ. ಆದರೆ, ಬಹುತೇಕ ಕಟ್ಟಡಗಳಲ್ಲಿ 13ನೇ ನಂಬರ್​ ಇಲ್ಲ.
ಭಾರತದಲ್ಲಿಯೂ ಕೆಲವು ಕಟ್ಟಡಗಳು ಮತ್ತು ಹೋಟೆಲ್‌ಗಳಲ್ಲಿ ಕೊಠಡಿ ಸಂಖ್ಯೆ 13 ಕಂಡುಬಂದಿಲ್ಲ. ಅದೇ ರೀತಿ, ಜಪಾನ್‌ನಲ್ಲಿ 9, ಇಟಲಿಯಲ್ಲಿ 17 ಮತ್ತು ಚೀನಾದಲ್ಲಿ 4 ಅನ್ನು ದುರದೃಷ್ಟಕರವೆಂದು ಪರಿಗಣಿಸಲಾಗುತ್ತದೆ.(ಏಜೆನ್ಸೀಸ್​)
ಕಾಟೇರ ಸಕ್ಸಸ್​ ಬೆನ್ನಲ್ಲೇ ವಿರೋಧಿಗಳಿಗೆ ಖಡಕ್​ ಎಚ್ಚರಿಕೆ​ ಕೊಟ್ಟ ನಟ ದರ್ಶನ್

ಹೆತ್ತ ಮಗನನ್ನೇ ಕೊಂದ ಸಿಇಓ ಸುಚನಾ ಪ್ರಕರಣ| ಜ.6 ರಂದು ಏನಾಯಿತು, ಹತ್ಯೆಯ ಹಿಂದಿನ ನಿಜವಾದ ಉದ್ದೇಶವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 2 =
Remember me
