ಗ್ವಾಲಿಯರ್​:ಮದುವೆಯಾಗಿ ಹೊಸ ಬದುಕು ಆರಂಭಿಸಿದ ವ್ಯಕ್ತಿಯ ಬಾಳಲ್ಲಿ ಯಾರೂ ಊಹಿಸಿದ ಘಟನೆಯೊಂದು ನಡೆದಿದೆ. ತಾನು ಅಂದುಕೊಂಡಿದ್ದೇ ಒಂದು ಆದರೆ, ಆಗಿದ್ದೇ ಇನ್ನೊಂದು. ಕೊನೆಗೆ ಮದುವೆಯೇ ರದ್ದಾಗಿದೆ. ಈ ವಿಚಿತ್ರ ಪ್ರಕರಣದ ಕಂಪ್ಲೀಟ್​ ಮಾಹಿತಿ ಇಲ್ಲಿದೆ ನೋಡಿ.
ಈ ಪ್ರಕರಣ ನಡೆದಿರುವುದು ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ. ವ್ಯಕ್ತಿಯೊಬ್ಬ 2014ರ ಜುಲೈನಲ್ಲಿ ಮದುವೆಯಾಗಿದ್ದ. ಅಂದಿನಿಂದ ಪ್ರತಿದಿನ ಪತ್ನಿಯ ಜತೆಗೆ ಲೈಂಗಿಕ ಕ್ರಿಯೆಗೆ ಹವಣಿಸುತ್ತಿದ್ದ. ಆದರೆ, ಪತ್ನಿ ಮಾತ್ರ ಪ್ರತಿ ಬಾರಿ ಒಂದಲ್ಲ ಒಂದು ಕಾರಣ ಹೇಳಿ ರತಿಕ್ರೀಡೆಯಿಂದ ತಪ್ಪಿಸಿಕೊಳ್ಳುತ್ತಿದ್ದಳು. ಇಂದಲ್ಲ, ನಾಳೆ ಸರಿ ಹೋಗುತ್ತಾಳೆ ಎಂಬ ಭರವಸೆ ಕಳೆಗುಂದಿದಾಗ ಅನುಮಾನಗೊಂಡ ಪತಿ, ಕೊನೆಯ ಆಯ್ಕೆ ಎಂಬಂತೆ ವೈದ್ಯರ ಸಮಾಲೋಚನೆ ಮಾಡುತ್ತಾರೆ.
ಹೇಗೋ ಮಾಡಿ ವೈದ್ಯರ ಬಳಿ ತನ್ನ ಪತ್ನಿಯನ್ನು ಕರೆದುಕೊಂಡು ಹೋಗುತ್ತಾನೆ. ಪರೀಕ್ಷೆ ಮಾಡಿದ ಬಳಿಕ ವೈದ್ಯರು, ನೀವು ಮದುವೆಯಾಗಿರುವುದು ಮಹಿಳೆಯನ್ನಲ್ಲ ಓರ್ವ ತೃತೀಯ ಲಿಂಗಿಯನ್ನು ಎಂದು ಹೇಳಿದ್ದನ್ನು ಕೇಳಿ ಪತಿರಾಯ ಒಂದು ಕ್ಷಣ ಶಾಕ್​ ಆಗುತ್ತಾನೆ.
ಜೀವನದಲ್ಲಿ ಎಂಥಾ ಮಿಸ್ಟೇಕ್​ ಆಯ್ತು ಎಂದು ಬಹಳ ಚಿಂತೆ ಮಾಡುವ ಸಂತ್ರಸ್ತ ಪತಿ ಕೊನೆ ಒಂದು ನಿರ್ಧಾರಕ್ಕೆ ಬರುತ್ತಾನೆ. ಮದುವೆಯಾದ ಒಂದೇ ವರ್ಷಕ್ಕೆ ಡಿವೋರ್ಸ್​ ಪಡೆಯಲು ನಿರ್ಧಾರ ಮಾಡುತ್ತಾನೆ. ಆದರೆ, ಅತ್ತೆಯ ಮನೆಯವರು ಪರಿಹಾರ ಹಣಕ್ಕೆ ಬೇಡಿಕೆ ಇಟ್ಟಾಗ, ಮತ್ತೊಮ್ಮೆ ಯೋಚಿಸಿ, ವಕೀಲರ ಜತೆ ಚರ್ಚಿಸಿ, ಮದುವೆಯನ್ನೇ ರದ್ದುಮಾಡಲು ನಿರ್ಧರಿಸುತ್ತಾರೆ.
ಸಂತ್ರಸ್ತ ಪತಿ ವಿಚ್ಛೇದನ ಪ್ರಕರಣವನ್ನು ಹಿಂತೆಗೆದುಕೊಂಡು, ಮದುವೆಯನ್ನು ರದ್ದುಗೊಳಿಸುವಂತೆ 2016ರಲ್ಲಿ ಅರ್ಜಿ ಸಲ್ಲಿಸುತ್ತಾರೆ. ಗುರುತನ್ನು ಮರೆಮಾಚಿ ವಿವಾಹವಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ವಿವಾಹವನ್ನು ರದ್ದುಗೊಳಿಸುವಂತೆ ಇದೀಗ ನ್ಯಾಯಾಲಯ ಆದೇಶಿಸಿದೆ.(ಏಜೆನ್ಸೀಸ್​)
ಶೀಘ್ರದಲ್ಲೇ ಮಾರ್ಕ್​ ಜುಕರ್​ಬರ್ಗ್ ಸಾವಾಗಬಹುದು! ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಮೆಟಾ ಕಂಪನಿ

ದಿಂಬಿನ ಡ್ರೆಸ್​​ ತೊಟ್ಟು ಬಂದ ಉರ್ಫಿ; ದಿನಕ್ಕೊಂದು ವೇಷ ನಿಂದು, ಹಾಸಿಗೆ ಎಲ್ಲಿ? ಎಂದ್ರು ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 6 =
Remember me
