ಔರಂಗಾಬಾದ್​:ಪತ್ನಿಯೊಬ್ಬಳು ಎಕ್ಸಿಕ್ಯೂಟಿವ್ ಇಂಜಿನಿಯರ್ ಪತಿಗೆ ಬಹಿರಂಗವಾಗಿಯೇ ಚಪ್ಪಲಿ, ದೊಣ್ಣೆಯಿಂದ ಥಳಿಸಿದ ಆಘಾತಕಾರಿ ಘಟನೆ ಬಿಹಾರದ ಔರಂಗಾಬಾದ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಹೆಂಡತಿಯನ್ನು ವೈದ್ಯೆಯನ್ನಾಗಿಸಿದ ಕಾರ್ಮಿಕ ಪತಿ: ಕೊನೆಗೆ ಆತನಿಂದ ವಿಚ್ಛೇದನ ಪಡೆಯಲು ಮುಂದಾದ ಪತ್ನಿ..ಇಡೀ ಪ್ರಕರಣವು ಔರಂಗಾಬಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧಿಸಿದ್ದು, ಇಲ್ಲಿನ ಲೋಕಲ್ ಏರಿಯಾ ಇಂಜಿನಿಯರಿಂಗ್ ಸಂಸ್ಥೆಯ (LAEO) ಕಾರ್ಯನಿರ್ವಾಹಕ ಎಂಜಿನಿಯರ್ ವಿನೋದ್ ರಂಜನ್​ ಚೇಂಬರ್‌ಗೆ ಪ್ರವೇಶಿಸಿದ ಪತ್ನಿ ಆತನಿಗೆ ಥಳಿಸಿದ್ದಾರೆ. ಈ ವೇಳೆ ವಿನೋದ್ ಚೇಂಬರ್​ನಿಂದ ಹೊರಗೆ ಓಡಿ ಬಂದಿದ್ದು, ಪತ್ನಿ ಅಲ್ಲಿಗೂ ಬಂದು ಪ್ಲಾಸ್ಟಿಕ್ ಪೈಪ್‌ ಹಾಗೂ ದೊಣ್ಣೆಗಳಿಂದ ಬಹಿರಂಗವಾಗಿಯೇ ಥಳಿಸಿದ್ದಾರೆ.
ಈ ಘಟನೆಯಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಸ್ವಲ್ಪ ಹೊತ್ತಿನಲ್ಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಪತಿಗೆ ಥಳಿಸುವ ವೇಳೆ ಎಂಬಿಬಿಎಸ್ ಓದುತ್ತಿರುವ ಮಗಳೂ ಅಲ್ಲಿದ್ದರು. ದಾನಿ ಬಿಘಾದಲ್ಲಿರುವ LAEO ಕಚೇರಿ ಮತ್ತು ಆವರಣದಲ್ಲಿ ಈ ಸಂಪೂರ್ಣ ಘಟನೆ ನಡೆದಿದೆ.ಇದನ್ನೂ ಓದಿ:ಯುವಕರಿಗೆ ಥಳಿಸಿ, ವಿವಸ್ತ್ರಗೊಳಿಸಿ ಮರಕ್ಕೆ ತಲೆಕೆಳಗಾಗಿ ಹಾಕಿದ ದುರುಳರು..
ಈ ಘಟನೆಯ ನಂತರ ಎಂಜಿನಿಯರ್ ಪತ್ನಿ ಮತ್ತು ಪುತ್ರಿ ಸೃಷ್ಟಿಕುಮಾರಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಎಸ್​.ಪಿ.ಗೆ ದೂರು ನೀಡಿದ್ದು, ತನ್ನ ತಾಯಿ ಮತ್ತು ತಾನೂ ಕಿರುಕುಳಕ್ಕೆ ಬಲಿಯಾಗಿರುವುದಾಗಿ ತಿಳಿಸಿದ್ದಾರೆ. ತನ್ನ ತಂದೆ ವಿನೋದ್ ಕುಮಾರ್ ರಂಜನ್ ಔರಂಗಾಬಾದ್‌ನಲ್ಲಿ ನೇಮಕಗೊಂಡಿದ್ದು, ಕಳೆದ ಎರಡು ವರ್ಷಗಳಿಂದ ತಮಗೆ ಚಿತ್ರಹಿಂಸೆ ನೀಡುವುದರ ಜತೆಗೆ ಅಸಭ್ಯವಾಗಿ ವರ್ತಿಸುತ್ತಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ದುಡಿದ ಹಣವನ್ನೆಲ್ಲಾ ಖರ್ಚು ಮಾಡುತ್ತಾರೆ, ಒಂದು ಪೈಸೆಯೂ ಸಿಗುತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ತನಗೆ ಹಾಗೂ ಮಕ್ಕಳಿಗೆ ನಿರ್ವಹಣೆ ಕಷ್ಟವಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
