ಬಿಹಾರ:ಮಹಿಳೆಯೊಬ್ಬರು ತನ್ನ ಪತಿ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬುದನ್ನು ಅರಿತ ಬೆನ್ನಲ್ಲೇ ಆತ ಕೆಲಸ ಮಾಡುವ ಕಛೇರಿಗೆ ನುಗ್ಗಿ, ಚಪ್ಪಲಿಯಿಂದ ಮನಬಂದಂತೆ ಥಳಿಸಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆ ಬಿಹಾರದ ಔರಂಗಾಬಾದ್​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:I.N.D.I.A. ಮೈತ್ರಿಕೂಟದ ಪರ ಪ್ರಧಾನಿ ಅಭ್ಯರ್ಥಿ ‘ಇವರೇ’ ಎಂದ ರಾಜಸ್ಥಾನ ಸಿಎಂ..!
ಮಹಿಳೆ ತನ್ನ ಗಂಡ, ಆತ ಕೆಲಸ ಮಾಡುವ ಕಛೇರಿಯಲ್ಲೇ ಕಾರ್ಯನಿರ್ವಹಿಸುವ ಮಹಿಳಾ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ದೂರಿದ್ದಾರೆ. ಈ ಹಿನ್ನೆಲೆ ಕಛೇರಿಗೆ ನುಗ್ಗಿದ ಪತ್ನಿ, ಪತಿಯನ್ನು ಎಳೆದಾಡಿ, ಚಪ್ಪಲಿಯಿಂದ ಥಳಿಸಿದ್ದಾರೆ. ಪತ್ನಿಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಿಸಿದ ಪತಿಗೆ, ಬೆಂಬಿಡದೆ ಹೊಡೆದ ಮಹಿಳೆ, ತನಗೆ ಮತ್ತು ಮಕ್ಕಳಿಗೆ ಹಣ ಕೊಡದೆ ಪರದಾಡಿಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:Minister B. Nagendra Hits Back At Gali Janardhan Reddy|ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದ ಬಿ. ನಾಗೇಂದ್ರ
ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆ, “ನನ್ನ ಪತಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷದಿಂದ ನಾನು ಹೆತ್ತವರ ಮನೆಯಲ್ಲಿಯೇ ಇದ್ದೇನೆ. ನನಗೆ ಮತ್ತು ಮಕ್ಕಳಿಗೆ ಹಣ ನೀಡದ ಕಾರಣ ನಾನು ತುಂಬ ನೊಂದಿದ್ದೇನೆ. ಪತಿ ತನ್ನ ಅಕ್ರಮ ಸಂಬಂಧಕ್ಕಾಗಿ ಎಲ್ಲಾ ಹಣವನ್ನು ಪೋಲು ಮಾಡುತ್ತಿದ್ದಾನೆ. ಇದರಿಂದ ನಮಗೆ ಆರ್ಥಿಕ ಬೆಂಬಲವಿಲ್ಲ” ಎಂದು ಆರೋಪಿಸಿರುವುದಾಗಿ ವರದಿ ತಿಳಿಸಿದೆ,(ಏಜೆನ್ಸೀಸ್).
ಅಭಿನಯಿಸಿದ 2 ಸಿನಿಮಾಗಳು ಫ್ಲಾಪ್​!; ನಟಿಗೆ ಫ್ಯಾನ್ಸ್ ಕೊಟ್ಟ ಸಲಹೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + two =
Remember me
