ಕರ್ನೂಲ್:ಪತ್ನಿಯೊಬ್ಬಳು ಉದ್ದೇಶಪೂರ್ವಕವಾಗಿ ತನ್ನ ಪತಿಯ ನಾಲಿಗೆಯನ್ನು ಕಚ್ಚಿದ ವಿಲಕ್ಷಣ ಘಟನೆ ಆಂಧ್ರಪ್ರದೇಶದ ಕರ್ನೂಲ್‌ನ ತುಗ್ಗಲಿ ಮಂಡಲದ ಯಲ್ಲಮ್ಮಗುಟ್ಟ ತಾಂಡಾದಲ್ಲಿ ನಡೆದಿದೆ.ಇದನ್ನೂ ಓದಿ:ಬಾಲಿವುಡ್ ನಟನಿಗೆ 1.55 ಕೋಟಿ ರೂ. ವಂಚನೆ: ನಂಬಿದವರಿಂದಲೇ ಮೋಸ..?ತಾಂಡಾದ ನಿವಾಸಿಯಾಗಿರುವ ಚಂದು ನಾಯ್ಕ್ ಎಂಬಾತನ ನಾಲಿಗೆಗೆ ಗಾಯಗಳಾಗಿದ್ದು, ಆತನ ಪುಷ್ಪಾವತಿವೇ ಈ ಕೃತ್ಯವನ್ನು ಎಸಗಿದ್ದಾಳೆ. ಚಂದು ನಾಯ್ಕ ಹಾಗೂ ಆತನ ಪರಸ್ಪರ ಪ್ರೀತಿಸಿ 2015ರಲ್ಲಿ ಮದುವೆಯಾಗಿದ್ದು, ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿಯ ನಡುವೆ ಹೊಂದಾಣಿಕೆಯ ಸಮಸ್ಯೆಗಳಿದ್ದು, ಕಳೆದ ಎರಡು ವರ್ಷಗಳಿಂದ ಆಗಾಗ್ಗೆ ಜಗಳವಾಡುತ್ತಿದ್ದರು.ಶುಕ್ರವಾರದಂದು ಚಂದು ಮದ್ಯ ಸೇವಿಸಿದ ನಂತರ ಪತಿಗೆ ಮುತ್ತು ನೀಡಲು ಯತ್ನಿಸಿದ್ದಾನೆ, ಆದರೆ ಈ ವೇಳೆ ಆತನ ಪತ್ನಿ ನಿರಾಕರಿಸಿದ್ದಾಳೆ. ಕೊನೆಗೆ ಚಂದು ಬಲವಂತವಾಗಿ ಚಂದು ತನ್ನ ಹೆಂಡತಿಗೆ ಮುತ್ತು ಕೊಡಲು ಮುಂದಾಗಿದ್ದು, ಈ ವೇಳೆ ಆಕೆ ಆತನ ನಾಲಿಗೆಯನ್ನು ಕಚ್ಚಿದ್ದಾಳೆ. ಘಟನೆಯಿಂದಾಗಿ ಚಂದುವಿನ ನಾಲಿಗೆ ಗಂಭೀರವಾಗಿ ಗಾಯವಾಗಿದ್ದು ಕೂಡಲೇ ಆತನನನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.ಇದನ್ನೂ ಓದಿ:ಜನರ ಬದುಕೇ ಹಾಲಾಹಲ, ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿತನ್ನ ಇಚ್ಛೆಗೆ ವಿರುದ್ಧವಾಗಿ ಹಲ್ಲೆ ನಡೆಸಿ, ಬಲವಂತವಾಗಿ ಮುತ್ತು ನೀಡಿದ್ದರಿಂದ ಹೀಗೆ ಮಾಡಿರುವುದಾಗಿ ಪುಷ್ಪಾವತಿ ಜೊನ್ನಗಿರಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೇ ವೇಳೆ ಆಕೆ ಉದ್ದೇಶಪೂರ್ವಕವಾಗಿ ನಾಲಿಗೆ ಕಚ್ಚಿದ್ದಾಳೆ ಎಂದು ತಾರಾಚಂದ್ ನಾಯ್ಕ್ ಆರೋಪಿಸಿದ್ದಾನೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 15 =
Remember me
