ಲಖನೌ:ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಗಂಡ-ಹೆಂಡಿರ ಜಗಳ ನಾಲಗೆ ತುಂಡಾಗುವ ತನಕ ಎಂಬಂತಾಗಿದೆ. ವಾಪಸ್ ಬಾ ಎಂದು ಕರೆಯಲು ತವರಿಗೆ ಬಂದ ಪತಿಯ ನಾಲಗೆಯನ್ನೇ ಪತ್ನಿ ಕಚ್ಚಿ ತುಂಡರಿಸಿದ್ದಾಳೆ.
ಉತ್ತರಪ್ರದೇಶದ ಲಖನೌದಲ್ಲಿನ ಠಾಕೂರ್​ಗಂಜ್ ಪ್ರದೇಶದಲ್ಲಿನ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಪತಿ ಮುನ್ನಾ ಮತ್ತು ಪತ್ನಿ ಸಲ್ಮಾ ನಡುವಿನ ಜಗಳದಲ್ಲಿ ಈ ಅವಘಡ ಉಂಟಾಗಿದೆ. ಈ ದಂಪತಿ ಮಧ್ಯೆ ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯವಿದ್ದು, ಇಬ್ಬರ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಒಂದು ದಿನ ಜಗಳವಾಡಿಕೊಂಡ ಪತ್ನಿ ಸಲ್ಮಾ, ಮಕ್ಕಳೊಂದಿಗೆ ಸೀದಾ ತವರು ಮನೆಗೆ ಬಂದು ನೆಲೆಸಿದ್ದಳು. ಈಕೆಯನ್ನು ವಾಪಸ್ ಬಾ ಎಂದು ಕರೆಯಲು ಪತಿ ಮುನ್ನಾ ಶುಕ್ರವಾರ ಪತ್ನಿಯ ತವರು ಮನೆಗೆ ಬಂದಿದ್ದ.
ಪತಿ ತನ್ನೊಂದಿಗೆ ಬಾ ಎಂದು ಒತ್ತಾಯಿಸುತ್ತಿದ್ದಾಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಅದು ವಿಕೋಪಕ್ಕೆ ಹೋಗಿ ಜಗಳವಾಗಿದೆ. ಎಷ್ಟು ಹೇಳಿದರೂ ಪತಿ ಸುಮ್ಮನಾಗದಿದ್ದಾಗ ಕೊನೆಗೊಮ್ಮೆ ರೊಚ್ಚಿಗೆದ್ದ ಪತ್ನಿ ಪತಿಯ ಮೇಲೆರಗಿ ಆತನ ನಾಲಗೆಗೇ ಕಚ್ಚಿದ್ದಾಳೆ. ಅದರ ತೀವ್ರತೆಗೆ ನಾಲಗೆ ತುಂಡಾಗಿ ಕೆಳಕ್ಕೆ ಬಿದ್ದಿದೆ. ಮುನ್ನಾ ಕೂಡ ನೋವಿನಿಂದ ಆಯತಪ್ಪಿ ಕೆಳಕ್ಕೆ ಬಿದ್ದಿದ್ದು, ಆತನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪತಿಗೆ ಚಿಕಿತ್ಸೆ ನಡೆಯುತ್ತಿದ್ದು, ಪತ್ನಿಯನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗಂಡ-ಹೆಂಡಿರ ಜಗಳ ಚೂರಿ ಇರಿಯುವ ತನಕ; ಟೀ ಕೇಳಿದ್ದಕ್ಕೆ ಪತಿಗೆ ಚಾಕು ಚುಚ್ಚಿದ ಪತ್ನಿ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
