ಲಖನೌ:ಕರೊನಾ ಮಹಾಮಾರಿ ಜನರ ಪ್ರಾಣವನ್ನು ಬಲಿ ತೆಗೆದುಕೊಳ್ಳಲು ಆರಂಭಿಸಿದೆ. ಆಸ್ಪತ್ರೆಗಳ ಒಳಗೆ ಮತ್ತು ಹೊರಗೆ ಜನರು ನರಳಾಡುತ್ತಿರುವ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ. ಹೆಂಡತಿ ಸಾಯುತ್ತಿದ್ದಾಳೆ, ದಯಮಾಡಿ ಸಹಾಯ ಮಾಡಿ ಎಂದು ಅಂಗಲಾಚುತ್ತಿದ್ದ ಗಂಡನ ತೋಳಿನಲ್ಲೇ ಹೆಂಡತಿ ಪ್ರಾಣ ಬಿಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಅಂಬೇಡ್ಕರ್​ ನಗರದಲ್ಲಿ ಇಂತದ್ದೊಂದು ಮನ ಕಲಕುವ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಹೆಂಡತಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುತ್ತಾನೆ. ಹೆಂಡತಿ ನಡೆದುಕೊಂಡು ಹೋಗಲಾಗದ ಪರಿಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಅಲ್ಲೇ ಮೆಟ್ಟಲ ಮೇಲೆ ಆಕೆಯನ್ನು ತೋಳಿನಲ್ಲಿ ಮಲಗಿಸಿಕೊಂಡು ವೈದ್ಯರಿಗಾಗಿ ಕರೆಯಲಾರಂಭಿಸುತ್ತಾನೆ. ಸುಮಾರು ಒಂದು ಗಂಟೆಗಳ ಕಾಲ ಸಹಾಯಕ್ಕಾಗಿ ಬೇಡಿಕೊಂಡ ನಂತರ ಸಿಬ್ಬಂದಿ ಅವನಿಗೆ ಪ್ರತಿಕ್ರಿಯಿಸಲು ಮುಂದಾಗುತ್ತಾರೆ. ಆದರೆ ಆತನ ಗೋಳು ಕೇಳಲು ಆಸ್ಪತ್ರೆಯ ಸಿಬ್ಬಂದಿ ಬರುವಷ್ಟರಲ್ಲಿ ಹೆಂಡತಿ ಪ್ರಾಣ ಬಿಟ್ಟಿದ್ದಾಳೆ.
ಈ ಆಕ್ರಂದನಕ್ಕೆ ಕೊನೆ ಎಂದು? ಕಣ್ಣೀರು ತರಿಸುವ ದೃಶ್ಯ
ಉತ್ತರ ಪ್ರದೇಶದ ಅಂಬೇಡ್ಕರ್​ ನಗರದ ಜಿಲ್ಲಾಸ್ಪತ್ರೆಯ ಎದುರು ಮಹಿಳೆಯೊಬ್ಬಳು ತನ್ನ ಗಂಡನ ತೋಳಿನಲ್ಲೇ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಹೆಂಡತಿಯನ್ನು ಮೆಟ್ಟಿಲಲ್ಲೇ ಮಲಗಿಸಿಕೊಂಡು ಡಾಕ್ಟರ್​ಗಾಗಿ ಗಂಡ ಕೂಗುವ ದೃಶ್ಯ ಕಣ್ಣೀರು ತರಿಸುವಂತಿದೆ.pic.twitter.com/jmYcDyxvzN
— Vijayavani (@VVani4U)May 7, 2021

ಗಂಡನ ತೋಳಿನಲ್ಲೇ ಹೆಂಡತಿ ಪ್ರಾಣ ಬಿಟ್ಟಿದ್ದಾಳೆ. ಈ ದೃಶ್ಯದ ವಿಡಿಯೋವನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. (ಏಜೆನ್ಸೀಸ್)
ಒಂದೇ ತಿಂಗಳಲ್ಲಿ 1,100 ಅಂತ್ಯ ಸಂಸ್ಕಾರ ಮಾಡಿಸಿದ ಪೊಲೀಸ್​ ಅಧಿಕಾರಿ! ಇವರು ನಿಜವಾದ ಹೀರೋ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 4 =
Remember me
