ನವದೆಹಲಿ:ಸೈನಿಕರೊಬ್ಬರ ಪತ್ನಿ ಹಾಗೂ ಪುತ್ರಿ ಸೇನಾ ಕ್ವಾರ್ಟರ್ಸ್​ನಲ್ಲಿ ಸಾವಿಗೀಡಾಗಿದ್ದು, ಇಬ್ಬರ ಶವವೂ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದೆ. ರಾಜಸ್ಥಾನದ ಜೋಧಪುರದಲ್ಲಿರುವ ಸೇನಾ ವಸತಿಗೃಹದಲ್ಲಿ ಈ ಸಾವು ಸಂಭವಿಸಿದೆ.
ಸೈನಿಕ ರಾಮ್​ಪ್ರಸಾದ್ ಎಂಬವರ ಪತ್ನಿ ರುಕ್ಮೀನಾ (25) ಮತ್ತು ಆಕೆಯ ಪುತ್ರಿ ರಿಧಿಮಾ ಸಾವಿಗೀಡಾದವರು. ಇವರಿಬ್ಬರ ಶವ ಹಾಸಿಗೆ ಮೇಲೆ ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಶಾರ್ಟ್ ಸರ್ಕ್ಯೂಟ್​ನಿಂದಾದ ಬೆಂಕಿ ತಗುಲಿ ಅವರು ಸಾವಿಗೀಡಾಗಿದ್ದಾರೆ ಎಂದು ರಾಮ್​ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಸಿಕ್ಕಿಂ ಮೂಲದ ರಾಮ್​ಪ್ರಸಾದ್ ಮೂರು ವರ್ಷಗಳ ಹಿಂದೆ ನೇಪಾಳ ಮೂಲದ ರುಕ್ಮೀನಾಳನ್ನು ಮದುವೆಯಾಗಿದ್ದರು. ಎರಡು ವರ್ಷಗಳ ಹಿಂದೆ ಜೋಧಪುರಕ್ಕೆ ಬಂದ ರಾಮ್​ಪ್ರಸಾದ್, ಅಲ್ಲಿನ ಸೇನಾ ವಸತಿಗೃಹದಲ್ಲಿ ಸಂಸಾರಸಮೇತ ನೆಲೆಸಿದ್ದರು.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಇಂದು ಬೆಳಗ್ಗೆ ಐದು ಗಂಟೆ ಸುಮಾರಿಗೆ ಈ ಪ್ರಕರಣ ನಡೆದಿದ್ದು, ಆ ಸಮಯದಲ್ಲಿ ರಾಮ್​ಪ್ರಸಾದ್ ಕೂಡ ಮನೆಯಲ್ಲಿದ್ದು, ಅವರ ಕೈಯಲ್ಲಿ ಸುಟ್ಟಗಾಯಗಳಾಗಿವೆ. ರಾಮ್​ಪ್ರಸಾದ್ ಪತ್ನಿ ಪುತ್ರಿಯನ್ನು ಬಚಾವ್ ಮಾಡಲು ಯತ್ನಿಸಿದ್ದರೂ ಸಾಧ್ಯವಾಗಿಲ್ಲ ಎಂಬುದು ತಿಳಿದುಬಂದಿದೆ. ಅಷ್ಟಕ್ಕೂ ಪ್ರಕರಣ ಕುರಿತು ಈಗಲೇ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅದನ್ನಾಧರಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. –ಏಜೆನ್ಸೀಸ್
ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seven =
Remember me
