ಬೆಂಗಳೂರು:ವಿಚ್ಛೇದನದ ನಂತರ ಮಹಿಳೆಯೊಬ್ಬರು ತನ್ನ ಮಾಜಿ ಪತಿ ಜೀವನಾಂಶ ಸಾಕಾಗುವುದಿಲ್ಲ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದು, ಜೀವನಾಂಶ ಲಿಸ್ಟ್ ನೋಡಿ ಜಡ್ಜ್ ಆಕೆಯ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸದ್ಯ ಆಕೆಯ ಮಾಜಿ ಪತಿ ರೂ.50 ಸಾವಿರ ಜೀವನಾಂಶ ನೀಡುತ್ತಿದ್ದು, ಇದನ್ನು 6 ಲಕ್ಷ ರೂ.ಗೆ ಹೆಚ್ಚಿಸುವಂತೆ ಮಹಿಳೆಯ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದು, ನ್ಯಾಯಾಲಯ ಅವರ ಮನವಿ ತಿರಸ್ಕರಿಸಿದೆ.
ಇದನ್ನೂ ಓದಿ:ಟ್ರಾಯ್ ಎಚ್ಚರಿಕೆ.. ವೈಯಕ್ತಿಕ ಮಾಹಿತಿ ಕೇಳುವ ಮೋಸದ ಕರೆಗಳಿಗೆ ಮರುಳಾಗಬೇಡಿ!
ಮುನುಕುಂಟ್ಲ ರಾಧಾ ಮತ್ತು ನರಸಿಂಹ ಈ ಹಿಂದೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಿಂದ ವಿಚ್ಛೇದನ ಪಡೆದಿದ್ದರು. ಕಳೆದ ಸೆಪ್ಟೆಂಬರ್ 30 ರಂದು ರಾಧಾ ಅವರಿಗೆ ಜೀವನಾಂಶವಾಗಿ ಮಾಸಿಕ 50 ಸಾವಿರ ರೂ. ನಿಗದಿಪಡಿಸಲಾಗಿತ್ತು. ಆದರೆ ಈ ಜೀವನಾಂಶ ತನಗೆ ಸಾಕಾಗುವುದಿಲ್ಲ ಎಂದು ರಾಧಾ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ನ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಆ. 20ರಂದು ಈ ಅರ್ಜಿ ವಿಚಾರಣೆಗೆ ಬಂದಿತ್ತು.
ನರಸಿಂಹ ಅವರಿಂದ ತಿಂಗಳಿಗೆ 6ಲಕ್ಷ 16 ಸಾವಿರ ರೂ. ಜೀವನಾಂಶವನ್ನು ರಾಧಾ ಕೇಳಿದ್ದಾರೆ. ಇದರಲ್ಲಿ ಯಾವುದಕ್ಕೆ ಎಷ್ಟು ಎಂಬ ಲಿಸ್ಟ್ ಕೂಡ ನೀಡಿದ್ದಾರೆ. ಮೊಣಕಾಲು ನೋವು, ಫಿಸಿಯೋಥೆರಪಿಗೆ ತಿಂಗಳಿಗೆ 4 ರಿಂದ 5 ಲಕ್ಷ, ಶೂ ಹಾಗೂ ಉಡುಪುಗಳಿಗೆ ತಿಂಗಳಿಗೆ 15,ಸಾವಿರ ರೂ. ಮನೆಯೊಳಗಿನ ಆಹಾರಕ್ಕಾಗಿ ತಿಂಗಳಿಗೆ 60ಸಾವಿರ ರೂ. ಹಾಗೂ ಮನೆಯ ಹೊರಗೆ ಊಟಕ್ಕೆ ಸಾವಿರಾರು ರೂ.ಗಳು ಬೇಕಾಗಿದೆ ಎಂದು ವಿವರಿಸಿದ್ದಾರೆ.
ರಾಧಾ ನೀಡಿರುವ ಜೀವನಾಂಶ ಲಿಸ್ಟ್ ನೋಡಿ ಜಡ್ಜ್ ಆಕೆಯ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಬ್ಬ ಮನುಷ್ಯನಿಗೆ ಇಷ್ಟೊಂದು ಹಣದ ಅವಶ್ಯಕತೆ ಇರುತ್ತಾ? ಮಹಿಳೆಯೊಬ್ಬರು ತಿಂಗಳಿಗೆ ಇಷ್ಟೊಂದು ಹಣ ಖರ್ಚು ಮಾಡುತ್ತಾರಾ? ಆಕೆ ಇಷ್ಟೊಂದು ಹಣ ಖರ್ಚು ಮಾಡುತ್ತಾರೆ ಎಂದಾದರೆ ಆಕೆಯೇ ಸಂಪಾದನೆ ಮಾಡಲಿ. ಆಕೆಯೇ ದುಡಿದು ತಿನ್ನಲಿ. ನಮಗೆ ನಿಜವಾದ ಅಂಕಿ ಬೇಕೇ ಹೊರತು ಈ ರೀತಿಯ ಅಂಕಿ ಬೇಡ ಎಂದು ಛೀಮಾರಿ ಹಾಕಿದ್ದಾರೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ಈ ವಾದಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಸ್ ಗೆ ಟ್ಯಾಂಕರ್ ಡಿಕ್ಕಿ.. ಐವರು ಮೃತ್ಯು- 20 ಮಂದಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
