ಪುಣೆ:ಪತಿ ತನ್ನನ್ನು ಮನೆಯಿಂದ ಹೊರಹಾಕಿದ ಕಾರಣಕ್ಕೆ ಮಹಿಳೆಯೊಬ್ಬಳು ಮನೆಯ ಮೆಟ್ಟಿಲ ಬಳಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಪುಣೆ ಬಳಿ ನಡೆದಿದೆ.ಇದನ್ನೂ ಓದಿ:ಕಾಡಿನಿಂದ ನಾಡಿಗೆ ಬಂದ ಚಿರತೆ: ಮೈದಡವಿ, ಸೆಲ್ಫಿ ತೆಗೆದುಕೊಂಡ ಗ್ರಾಮಸ್ಥರು..!
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಸುಲಭಾ ಸುರೇಂದ್ರ ಪೂಜಾರಿ (42) ಎಂದು ಗುರುತಿಸಲಾಗಿದ್ದು, ವೈಷ್ಣವ್ ಅಪಾರ್ಟ್‌ಮೆಂಟ್​ನಲ್ಲಿ ತನ್ನ ಗಂಡನೊಡನೆ ವಾಸಿಸುತ್ತಿದ್ದಳು ಎಂದು ಹೇಳಲಾಗಿದೆ. ಘಟನೆ ಸಂಬಂಧ ಮಹಿಳೆಯ ಸಹೋದರನ ದೂರಿನ ಮೇರೆಗೆ ಆಕೆಯ ಪತಿ ಸುರೇಂದ್ರ ರವೀಂದ್ರ ಪೂಜಾರಿ (42), ಧೀರ ಸಮೀರ್ ಹಾಗೂ ಅತ್ತೆ ರಜನಿ ವಿರುದ್ಧ ಫರಸ್ಖಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪತಿ ಹಾಗೂ ಆತನ ಕುಟುಂಬದವರು ಮಹಿಳೆಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಪತಿ ಆಕೆಯನ್ನು ಮನೆಯಿಂದ ಹೊರಹಾಕಿದ್ದ. ಆದರೆ ಮಹಿಳೆ ಅಪಾರ್ಟ್​ಮೆಂಟ್​ನ ಮೆಟ್ಟಿಲ ಬಳಿಯೇ ಮೂರು ದಿನಗಳಿಂದ ವಾಸಿಸುತ್ತಿದ್ದು ಆಕೆ ಹಸಿವಿನಿಂದ ಬಳಲುತ್ತಿದ್ದಳು. ಕೊನೆಗೆ ಮಹಿಳೆಯು ಮೆಟ್ಟಿಲು ಪಕ್ಕದ ಕಿಟಕಿಗೆ ಹಗ್ಗ ಬಿಗಿದು ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + five =
Remember me
