ಅಹಮದಾಬಾದ್​:ಗಂಡನ ದೇಹದಲ್ಲಿ ಲವ್​ ಬೈಟ್​ ಕಂಡ ಹೆಂಡತಿ, ಅವನೊಂದಿಗೆ ಜಗಳಕ್ಕೆ ನಿಂತಿದ್ದು, ಇದೀಗ ಗಂಡ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ತನ್ನ ಅಮ್ಮ ಮತ್ತು ಸಹೋದರನೇ ಆತನ ಮೇಲೆ ಹಲ್ಲೆ ಮಾಡಿದ್ದಾಗಿ ಆತ ದೂರು ದಾಖಲಿಸಿದ್ದಾನೆ.
ಅಹಮದಾಬಾದ್​ನ ವಾಸ್ನಾದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಜೀತು ಓಡ್​ ದೂರು ಸಲ್ಲಿಸಿರುವ ಪತಿ. ಈತ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದಾನೆ. ಇತ್ತೀಚೆಗೆ ಒಂದು ದಿನ ಈತನ ಕೈನಲ್ಲಿ ಲವ್​ ಬೈಟ್​ ಇರುವುದನ್ನು ಹೆಂಡತಿ ಕಂಡಿದ್ದಾಳೆ. ಇದು ಬೇರೆಯ ಹೆಂಗಸಿಂದಲೇ ಆಗಿರುವ ಲವ್​ ಬೈಟ್​ ಎಂದು ಆರೋಪಿಸಿದ್ದಾಳೆ. ಅದೇ ವಿಚಾರವಾಗಿ ಗಂಡನ ಜತೆ ಜಗಳಕ್ಕೆ ನಿಂತಿದೆ.
ಗಂಡ ಹೆಂಡತಿ ಜಗಳದ ಮಧ್ಯೆ ಹೆಂಡತಿಯ ಚಿಕ್ಕಪ್ಪನೂ ಹೋಗಿದ್ದಾನೆ. ನೀನು ನಿನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಚಿಕ್ಕಪ್ಪ ಆರೋಪಿಸಿದ್ದಾನೆ. ಈ ವಿಚಾರವಾಗಿ ಅವರಿಬ್ಬರ ನಡುವೆ ಜಗಳವಾಗಿದೆ. ಜೀತು ಮೇಲೆ ಹೆಂಡತಿಯ ಚಿಕ್ಕಪ್ಪ ಹಲ್ಲೆ ಮಾಡಿದನಂತೆ. ಆ ಕಾರಣವಿಟ್ಟುಕೊಂಡು ಜೀತು ಪೊಲೀಸ್​ ಠಾಣೆಯ ಮೆಟ್ಟಿಲೇರಿ, ದೂರು ದಾಖಲಿಸಿದ್ದಾನೆ.
ಈ ರೀತಿ ದೂರನ್ನಿತ್ತು ಮನೆಗೆ ಬಂದ ಜೀತುಗೆ ಆತನ ತಾಯಿ ಮತ್ತು ಸಹೋದರ ಬೈದಿದ್ದಾರೆ. ಇಬ್ಬರೂ ಸೇರಿ ಆತನ ಮೇಲೆ ಹಲ್ಲೆ ಮಾಡಿದ್ದಾರಂತೆ. ಎರಡನೇ ಬಾರಿಗೆ ಪೊಲೀಸ್​ ಠಾಣೆಯ ಮೆಟ್ಟಿಲೇರಿದ ಜೀತು ತನ್ನ ತಾಯಿ ಮತ್ತು ಸಹೋದರನ ವಿರುದ್ಧವೂ ದೂರು ದಾಖಲಿಸಿ ಬಂದಿದ್ದಾನೆ. (ಏಜೆನ್ಸೀಸ್​)
VIDEO| ಬಾಡಿ ಬಿಲ್ಡ್​ ಮಾಡುವವರೇ ಹುಷಾರ್​! ಚೂರು ಹೆಚ್ಚು ಕಡಿಮೆಯಾದರೂ ನಿಮ್ಮ ಜೀವಕ್ಕೇ ಕುತ್ತು!

ವಾಷಿಂಗ್​ ಮಷಿನ್​​ ಒಳಗೆ ಸೇರಿಕೊಂಡ ಹಾವು! ಸ್ವಿಚ್​ ಆನ್​ ಮಾಡಿದ ಮಹಿಳೆ.. ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + thirteen =
Remember me
