ಅಹಮದಾಬಾದ್:ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಎನ್ನುವ ಗಾದೆಯಿದೆ. ಆದರೆ ಇಲ್ಲೊಬ್ಬ ಪತ್ನಿ, ತನ್ನ ಗಂಡ ತನಗೆ ಒಲ್ಲ ಎಂದು ಮೊದಲು ವಿಷ ಹಾಕಿದಳು, ಆಗಲೂ ಸಾಯಲಿಲ್ಲ ಎಂದು ಇರಿದು ಕೊಂದಳು!
ಇಂಥದ್ದೊಂದು ಆಘಾತಕಾರಿ ಘಟನೆ ನಡೆದಿರುವುದು ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ. ಕಳೆದ ಮಂಗಳವಾರ ಈ ಘಟನೆ ಸಂಭವಿಸಿದೆ. 23 ವರ್ಷದ ವಕ್ಜಿ ಪಟೇಲ್ ಮೃತಪಟ್ಟವರು. ಕೊಲೆ ಮಾಡಿರುವ ಆರೋಪ ಹೊತ್ತಾಕೆ ಉಮಿಯಾ ಪಟೇಲ್‌.
ದಂಪತಿಗೆ ಮದುವೆಯಾಗಿ ಎರಡು ವರ್ಷಗಳಾಗಿದ್ದರೂ ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಇರಲಿಲ್ಲ. ಗಂಡನನ್ನು ಕಂಡರೆ ಈಕೆಗೆ ಆಗುತ್ತಿರಲಿಲ್ಲ. ಮೃತ ವಕ್ಜಿ ಗಾಂಧಿನಗರದ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಉಮಿಯಾ ತನ್ನ ಹೆತ್ತವರೊಂದಿಗೆ ಬನಸ್ಕಂತ ಜಿಲ್ಲೆಯ ಮಾಂಗ್ರೋಲ್ ಗ್ರಾಮದಲ್ಲಿ ವಾಸಿಸುತ್ತಿದ್ದಳು. ಆಗಾಗ ತಾರಾದ್‌ನಲ್ಲಿರುವ ತನ್ನ ಗಂಡನ ಮನೆಯಲ್ಲಿಯೇ ಇರುತ್ತಿದ್ದಳು.
ಇದನ್ನೂ ಓದಿ:ಶಿಕ್ಷಕರು, ಶಿಕ್ಷಕೇತರರಿಗೆ ವರ್ಕ್‌ ಫ್ರಮ್‌ ಹೋಮ್‌: ಸರ್ಕಾರದ ಆದೇಶದಲ್ಲಿ ಏನಿದೆ?
ಹೇಗಾದರೂ ಮಾಡಿ ಗಂಡನನ್ನು ಕೊಲೆ ಮಾಡುವ ಸಂಚು ರೂಪಿಸಿದ್ದಳು ಉಮಿಯಾ. ಆದ್ದರಿಂದ ಆತನಿಗೆ ಮೊದಲು ವಿಷ ಕೊಟ್ಟಿದ್ದಾಳೆ. ವಿಷ ತಿಂದರೂ ಸಾಯದ ಕಾರಣ ಇರಿದು ಕೊಂದಿದ್ದಾರೆ.
ತನ್ನ ಗಂಡ ವಿಷ ಸೇವಿಸಿದ್ದ. ಆ ನಂತರ ತಾನು ಆತನನ್ನು ಇರಿದು ಕೊಂದಿರುವುದಾಗಿ ಪೊಲೀಸರಿಗೆ ಹೇಳಿದ್ದಳು. ಆದರೆ ವಿಚಾರಣೆ ವೇಳೆ ಈಕೆಯೇ ಆತನಿಗೆ ವಿಷ ಉಣಿಸಿರುವ ಬಗ್ಗೆ ತಿಳಿದುಬಂದಿದೆ. ವಿಷ ಸೇವಿಸಿದರೂ ಆತ ಸಾಯಲಿಲ್ಲ ಎನ್ನುವ ಕಾರಣಕ್ಕೆ ತಾನೇ ಇರಿದು ಕೊಂದಿರುವುದಾಗಿ ಒಪ್ಪಕೊಂಡಿದ್ದಾರೆ.ಆರೋಪಿ ಮಹಿಳೆಯನ್ನು ಬಂಧಿಸುವ ಪೂರ್ವದಲ್ಲಿ ಕರೊನಾ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಗಾಂಧಿನಗರದ ಎಸ್‌ಪಿ ಮಯೂರ್‌ ಚಾವಡಾ ಹೇಳಿದ್ದಾರೆ.
ಕರೊನಾ ಚಿಕಿತ್ಸೆನೂ ಕೊಟ್ಟರು, ಕೋಟಿ ಶುಲ್ಕನೂ ಬಿಟ್ಟರು, ವಿಮಾನಕ್ಕೂ ಕಳುಹಿಸಿದರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen + eighteen =
Remember me
