ವಿಜಯವಾಡ:ಪತ್ನಿಯ ನಿರ್ಲಕ್ಷ್ಯದಿಂದಾಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಯರ್ರಮಸೆಟ್ಟಿ ವೆಂಕಟ ರವಿಕುಮಾರ್​ (28) ಮೃತ ದುರ್ದೈವಿ.
ವೆಂಕಟ ರವಿಕುಮಾರ್​, ಪುಷ್ಪಶಿವರನ್ನು ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು. ವೃತ್ತಿಯಲ್ಲಿ ಮೇಸನ್​ ಆಗಿರುವ ವೆಂಕಟ ರವಿಕುಮಾರ್​ ಪೂರ್ವ ಗೋದಾವರಿಯ ಮಂಡಿಕುಡುರು ಮಂಡಲದ ಪೆದ್ದಪಟ್ನಂ ಗ್ರಾಮದಲ್ಲಿ ವಾಸವಾಗಿದ್ದರು.
ಇದನ್ನೂ ಓದಿ:‘ಅವರು ಪೀಠದಲ್ಲಿ ಕೂರಿಸಿದ್ರು, ಇವರು ಪೀಠದಿಂದ ಎಳೆದೊಯ್ದರು-ನಾನೇನು ಮಾಡಲಿ?’
ದಂಪತಿ ಕಳೆದ ಭಾನುವಾರ ರಾತ್ರಿ 11 ಗಂಟೆಯವರೆಗೂ ಟಿವಿ ವೀಕ್ಷಣೆ ಮಾಡಿದ್ದಾರೆ. ರಾತ್ರಿ ಇಬ್ಬರ ನಡುವೆ ಏನು ನಡೆಯಿತೋ ಯಾರಿಗೂ ತಿಳಿದಿಲ್ಲ. ಆದರೆ, ಬೆಳಗಾಗುವಷ್ಟರಲ್ಲಿ ರವಿಕುಮಾರ್​ ಪತ್ನಿ ಪುಷ್ಪಶಿವ ಮನೆಯಲ್ಲಿ ಇರಲಿಲ್ಲ. ಇದರಿಂದ ಆತಂಕಗೊಂಡ ಆತ ಮನೆಯೆಲ್ಲ ಹುಡುಕಾಡಿದ್ದಾನೆ. ಎಲ್ಲಿ ಹೋಗಿರಬಹುದೆಂದು ನೋಡಲು ಹೊರ ಹೋಗಿದ್ದಾನೆ. ಈ ವೇಳೆ ಗೋದಾವರಿ ನದಿ ದಡದಲ್ಲಿ ಪತ್ನಿಯ ಚಪ್ಪಲಿಗಳು ಇರುವುದನ್ನು ನೋಡಿ ಅದನ್ನು ತೆಗೆದುಕೊಂಡು ಬಂದು ತನ್ನ ತಾಯಿಗೆ ತೋರಿಸಿದ್ದಾನೆ. ಆತನ ಪತ್ನಿಯದ್ದೇ ಎಂದು ತಾಯಿ ಖಚಿತಪಡಿಸಿದಾಗ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ರವಿಕುಮಾರ್​ ಮತ್ತಷ್ಟು ಆತಂಕಕ್ಕೆ ಒಳಗಾಗುತ್ತಾನೆ.
ಬಳಿಕ ಬೈಕ್​ ತೆಗೆದುಕೊಂಡು ಮನೆಯಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಪಸ್ಸರ್ಲಪುಡಿಯ ಸೇತುವೆ ಬಳಿ ಹೋಗಿದ್ದಾನೆ. ನಂತರ ಬೈಕ್​ ನಿಲ್ಲಿಸಿ ಪತ್ನಿಯನ್ನು ಕಾಪಾಡುವ ಉದ್ದೇಶದಿಂದ ಗೋದಾವರಿ ನದಿಗೆ ಜಿಗಿದಿದ್ದು, ಅದನ್ನು ಸ್ಥಳೀಯ ಮೀನುಗಾರರು ಸಹ ನೋಡಿ ರಕ್ಷಣೆಗೂ ಯತ್ನಿಸಿದ್ದಾರೆ. ಆದರೆ, ರವಿಕುಮಾರ್​ ಸುಳಿವು ಸಿಗಲಿಲ್ಲ.
ಇದನ್ನೂ ಓದಿ:ವಿಜೆ ಚಿತ್ರಾ ಪತಿ ಅರೆಸ್ಟ್​: ಗಂಡನ ವರ್ತನೆಗೆ ಬೇಸತ್ತು ಆತ್ಮಹತ್ಯೆ ದಾರಿ ಹಿಡಿದರಾ ಕಲಾವಿದೆ?
ಇತ್ತ ಪತ್ನಿ ಪುಷ್ಪಶಿವ ಯಾರಿಗೂ ಮಾಹಿತಿ ನೀಡದೇ ಪಲಕೋಲ್​ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದಾಳೆ. ಆದರೆ, ಪತ್ನಿಯ ಬಗ್ಗೆ ಮಾಹಿತಿ ತಿಳಿಯದೇ ನದಿಯ ದಡದಲ್ಲಿ ಆಕೆಯ ಚಪ್ಪಲಿಗಳು ಇರುವುದನ್ನು ನೋಡಿ ಚಿಂತೆಯಿಂದಲೇ ಆಕೆಯನ್ನು ಉಳಿಸಿಕೊಳ್ಳವ ಪ್ರಯತ್ನದಿಂದ ರವಿಕುಮಾರ್​ ನದಿಗೆ ಹಾರಿದ್ದ. ಇದೀಗ ಪತ್ನಿಯ ನಿರ್ಲಕ್ಯದಿಂದಾಗಿ ರವಿಕುಮಾರ್​ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಇಬ್ಬರ ವೈವಾಹಿಕ ಜೀವನದ ಸಾಕ್ಷಿಯಾಗಿ 11 ತಿಂಗಳ ಗಂಡು ಮಗು ಇದೆ. ತಿರುಪತಿಗೆ ಮುಡಿಕೊಡಲು ಜನವರಿ 20ಕ್ಕೆ ಟಿಕೆಟ್​ ಸಹ ಬುಕ್​ ಆಗಿದೆ. ಆದರೆ, ಅದಕ್ಕೂ ಮುನ್ನವೇ ದುರಂತವೇ ನಡೆದುಹೋಗಿದ್ದು, ರವಿಕುಮಾರ್​ ಮೃತದೇಹಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಇದನ್ನೂ ಓದಿ:ಸಹೋದ್ಯೋಗಿಗಳ ಸ್ನಾನದ ದೃಶ್ಯವನ್ನು ಆ ನರ್ಸ್​ ಚಿತ್ರೀಕರಿಸಿ ರವಾನಿಸುತ್ತಿದ್ದುದೇಕೆ?
ಮತಾಂತರ ಆಗಿಹೋಗಿದೆ, ಮೂರು ತಿಂಗಳ ಗರ್ಭಿಣಿ: ಗಂಡನನ್ನು ಬಿಟ್ಟುಬಿಡಿ ಎಂದ ಯುವತಿ!

ಅಪ್ಪನ ಅಣ್ಣನಿಗೆ ಮಕ್ಕಳಿಲ್ಲದಿದ್ದರೆ ಅವರ ಆಸ್ತಿಗೆ ನಾವೇ ಹಕ್ಕುದಾರರು ಅಲ್ಲವೆ?

ಅಪರಾತ್ರಿಯಲ್ಲಿ ಬೆತ್ತಲಾಗಿ ವಿಡಿಯೋ ಕರೆಮಾಡ್ತಾರೆ ಯುವತಿಯರು- ಎಚ್ಚರ ತಪ್ಪಿದ್ರೆ ಆಪತ್ತು ಗ್ಯಾರೆಂಟಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + eight =
Remember me
