ಜೈಪುರ:ಹೆಂಡತಿ ತವರು ಮನೆಗೆ ಹೋಗಿ ಎರಡು ವರ್ಷವಾದರೂ ಮರಳಿ ಬರುತ್ತಿಲ್ಲವೆಂದು ಮುನಿಸಿಕೊಂಡ ಗಂಡನೊಬ್ಬ ಮರವೇರಿ ಕುಳಿತ ಘಟನೆ ರಾಜಸ್ಥಾನದ ಧೋಲ್ಪುರದಲ್ಲಿ ನಡೆದಿದೆ. ಆತನನ್ನು ಇಳಿಸಲು ನಗರ ಪಾಲಿಕೆಯ ಅಧಿಕಾರಿಗಳು ಸಾಕಷ್ಟು ಪರದಾಡಿದ್ದಾಗಿ ವರದಿಯಾಗಿದೆ.
ಪಾಡ ಪ್ರದೇಶದ ನಿವಾಸಿ ಲಾಹೋರೆಮ್ ಭದೌರಿಯಾ ಮರವೇರಿದ ಪತಿರಾಯ. ಈತನ ಪತ್ನಿ ಸಂಗೀತಾ ಎರಡು ವರ್ಷಗಳ ಹಿಂದೆ ತವರು ಮನೆಗೆ ಹೋದವಳು ಇನ್ನೂ ಮರಳಿ ಬಂದಿಲ್ಲವಂತೆ. ಆಕೆಯ ತಂದೆ ಅವಳನ್ನು ವಾಪಾಸು ಕಳುಹಿಸುತ್ತಿಲ್ಲವಂತೆ. ಈ ವಿಚಾರವಾಗಿ ಆತ ಪೊಲೀಸ್​ ಠಾಣೆಯ ಮೆಟ್ಟಿಲನ್ನೂ ಹತ್ತಿದ್ದಾನಂತೆ. ಆದರೆ ಇದುವರೆಗೆ ಯಾರೊಬ್ಬರೂ ಆತನ ಸಹಾಯಕ್ಕೆ ಬಂದಿಲ್ಲ. ಅದೇ ಕಾರಣದಿಂದ ಆತ ಹೊಸ ನಾಟಕವನ್ನು ಮಾಡಿದ್ದಾನೆ.
ಧೋಲ್ಪುರ ನಗರದಲ್ಲಿರುವ ಮರವೊಂದನ್ನು ಲಾಹೋರೆಮ್ ಹತ್ತಿ ಕುಳಿತಿದ್ದಾನೆ. ಸುಮಾರು 50 ಅಡಿಯಿರುವ ಮರವನ್ನು ಹತ್ತಿ ಕುಳಿತು ತನ್ನ ಕಾಲುಗಳನ್ನು ಕಟ್ಟಿದ್ದಾನೆ. ಇದನ್ನು ಕಂಡ ಸ್ಥಳೀಯರು ಗಾಬರಿಗೊಂಡ, ಆತನನ್ನು ಕೆಳಗಿಳಿಯುವಂತೆ ಕೋರಿದ್ದಾರೆ. ಎಷ್ಟು ಕೇಳಿದರೂ ಆತ ಕೆಳಗಿಳಿಯದಿದ್ದಾಗ ನಗರ ಪಾಲಿಕೆಯವರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಬಂದ ಪಾಲಿಕೆ ಅಧಿಕಾರಿಗಳು ಆತನ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಆತ ಅದಕ್ಕೆ ಒಪ್ಪಿಲ್ಲ. ನಂತರ ಮರದ ಕೆಳಗೆ ಹಾಸಿಗೆಗಳನ್ನು ಹಾಸಲಾಗಿದೆ. ಕ್ರೇನ್​ ತರಿಸಿ ಅದರ ಸಹಾಯದಿಂದ ಆತನನ್ನು ಕೆಳಗಿಳಿಸಲಾಗಿದೆ.
ಮರದಿಂದ ಕೆಳಗಿಳಿದ ಲಾಹೋರೆಮ್ ತನ್ನ ಹೆಂಡತಿ ಮನೆಗೆ ಬಾರದ ನೋವಿನಲ್ಲೇ ಮರವೇರಿದ್ದಾಗಿ ಹೇಳಿಕೊಂಡಿದ್ದಾನೆ. ಹೀಗೆ ಮಾಡಿದರೆ ಹೆಂಡತಿ ಬರಬಹುದು ಎನ್ನುವ ನಂಬಿಕೆಯಲ್ಲಿ ಮಾಡಿದೆ ಎಂದು ತಿಳಿಸಿದ್ದಾನೆ. (ಏಜೆನ್ಸೀಸ್​)
ಗಂಡನ ಎದುರೇ ಹೆಂಡತಿಯ ಗ್ಯಾಂಗ್​ ರೇಪ್​! ವಿಡಿಯೋ ಚಿತ್ರೀಕರಿಸಿಕೊಂಡು ಎಸ್ಕೇಪ್​ ಆದ ಕಿರಾತಕರು​!

ಏಡಿ ಮೊಟ್ಟೆ ಇಡೋದನ್ನೇ ಕಾಯ್ತಾವೆ ಜಲಚರಗಳು! ಅಚ್ಚರಿ ಮೂಡಿಸುವ ವಿಚಾರಗಳಿವು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + sixteen =
Remember me
