ಹೈದರಾಬಾದ್​:ಕಳೆದ ತಿಂಗಳು ಲಡಾಖ್​ನ ಗಲ್ವಾನ್​ ಕಣಿವೆಯಲ್ಲಿ ನಡೆದ ಚೀನಾ ಯೋಧರ ವಿರುದ್ಧದ ಘರ್ಷಣೆಯಲ್ಲಿ ತೆಲಂಗಾಣ ಮೂಲದ ಕರ್ನಲ್ ಸಂತೋಷ್​ ಬಾಬುರವರು ಹುತಾತ್ಮರಾಗಿದ್ದರು. ದೇಶಕ್ಕಾಗಿ ಬಲಿದಾನ ಮಾಡಿದ ಸಂತೋಷ್​ ಸ್ಮರಣಾರ್ಥವಾಗಿ ಅವರ ಪತ್ನಿಗೆ ತೆಲಂಗಾಣ ಸರ್ಕಾರ ಒಳ್ಳೆಯ ಸರ್ಕಾರಿ ಹುದ್ದೆಯನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ:ಫೇಸ್​ಬುಕ್​ ಲೈವ್​ ಹೋಗಿ ಪತ್ನಿ ಎದುರಲ್ಲೇ ವ್ಯಕ್ತಿ ನೇಣಿಗೆ ಶರಣು: ಡೆತ್​ನೋಟ್​ನಲ್ಲಿತ್ತು ನೋವಿನ ಮಾತು
ಡೆಪ್ಯುಟಿ ಕಲೆಕ್ಟರ್​ ಆಗಿ ಸಂತೋಷ್​ ಅವರ ಪತ್ನಿ ಸಂತೋಷಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ನಿನ್ನೆಯಷ್ಟೇ ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ ನೇಮಕಾತಿ ಪತ್ರವನ್ನು ಸಂತೋಷಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಹಿರಿಯ ಅಧಿಕಾರಿಗಳು ಮತ್ತು ಸಚಿವರು ಉಪಸ್ಥಿತರಿದ್ದರು.
ನೇಮಕ ಬೆನ್ನಲ್ಲೇ ಕಲೆಕ್ಟರ್​ ಶ್ವೇತಾ ಮೊಹಾಂತಿ ಅವರು ಹೈದರಾಬಾದ್​ನ ಬಂಜಾರ ಹಿಲ್ಸ್ ಏರಿಯಾದಲ್ಲಿನ 711 ಸ್ಕ್ವೇರ್​ ಯಾರ್ಡ್​ ಮನೆ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂತೋಷಿ ಅವರಿಗೆ ಹಸ್ತಾಂತರಿಸಿದರು.
ಸಂತೋಷಿ ಅವರ ಬಗ್ಗೆ ಮಾತನಾಡಿದ ಚಂದ್ರಶೇಖರ್​ ರಾವ್​, 4 ವರ್ಷದ ಮಗ ಮತ್ತು 8 ವರ್ಷದ ಮಗಳಿರುವ ಸಂತೋಷಿ ಅವರನ್ನು ಹೈದರಾಬಾದ್ ಸುತ್ತಮುತ್ತ ಏರಿಯಾದಲ್ಲೇ ಪೋಸ್ಟಿಂಗ್​ ಹಾಕಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ಹುದ್ದೆಗೆ ಸಂಬಂಧಿಸಿದಂತೆ ಸೂಕ್ತ ತರಬೇತಿ ನೀಡಲು ಸಹ ತಿಳಿಸಿದ್ದಾರೆ. ಯಾವಾಗಲೂ ಸರ್ಕಾರ ಕರ್ನಲ್​ ಬಾಬು ಕುಟುಂಬದ ಪರವಾಗಿ ನಿಲ್ಲುವುದಾಗಿ ರಾವ್​ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಕನ್ನಡತಿ ಎಂಆರ್​ ಪೂವಮ್ಮ ಜಯಿಸಿದ್ದ ಏಷ್ಯಾಡ್​ ರಜತಕ್ಕೆ ಈಗ ಸ್ವರ್ಣ ಪದಕದ ಗೌರವ
39 ವರ್ಷದ ಕರ್ನಲ್​ ಸಂತೋಷ್​ ಬಾಬು ಸೇರಿದಂತೆ ಭಾರತೀಯ ಸೇನೆಯ 20 ಯೋಧರು ಪೂರ್ವ ಲಡಾಖ್​ನ ಗಲ್ವಾನ್​ ಕಣಿವೆಯಲ್ಲಿ ಜೂನ್​ 15 ರಂದು ಚೀನಾ ಯೋಧರೊಂದಿಗೆ ನಡೆದ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು. 2004ರಲ್ಲಿ ಸೇನೆಗೆ ಸೇರಿದ್ದ ಸಂತೋಷ್​ 16 ಬಿಹಾರ್​ ರೆಜಿಮೆಂಟ್​ನಲ್ಲಿ ಕಮ್ಯಾಂಡಿಂಗ್​ ಅಧಿಕಾರಿಯಾಗಿದ್ದರು.(ಏಜೆನ್ಸೀಸ್​)
ಶಾಲೆ ಶುರುವಾಗುವವರೆಗೂ ಶುಲ್ಕ ವಸೂಲಿ ಬೇಡ: ಹೀಗೆ ಹೇಳಿದ ರಾಜ್ಯ ಯಾವುದು ಗೊತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − three =
Remember me
