ಕೊಯಮತ್ತೂರು: ಗಂಡ ತನ್ನನ್ನು ಭೇಟಿಯಾಗಲು ಬರಲಿಲ್ಲವೆಂದು ನೊಂದ ಮಹಿಳೆಯೊಬ್ಬಳು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಸೂಳೂರು ಬ್ಲಾಕ್ ಗ್ರಾಮದಲ್ಲಿ ಆಗಸ್ಟ್ 18 ರಂದು ನಡೆದಿದೆ.ಆತ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್​ಪಿಎಫ್) ಸಿಬ್ಬಂದಿ. ನಾಗಾಲ್ಯಾಂಡ್​​ನಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಆತನ ಹೆಂಡತಿ ಸಂಗೀತಾ ಮೃತಪಟ್ಟವಳು.
ಇದನ್ನೂ ಓದಿ:ತಾಯಿ- ಮಗಳ ಲವ್ವರ್ ಆ ಕೊಲೆ ಮಾಡಿದ್ದೇಕೆ? ರೀಲು ಬಿಟ್ಟ ತಾಯಿ.. ಕಥೆಯಲ್ಲಿದೆ ರೋಚಕ ಟ್ವಿಸ್ಟ್…
2017ರಲ್ಲಿ ಸಿಆರ್​ಪಿಎಫ್ ಪೇದೆ ರಾಜ್​​ಕುಮಾರ್ ಚೆನ್ನೈನಲ್ಲಿ ಕೆಲಸಮಾಡುತ್ತಿದ್ದಾಗ ಅವರಿಬ್ಬರ ನಡುವೆ ಪ್ರೇಮಾಂಕುರವಾಯಿತು. ಅದೇ ವರ್ಷ ಅವರಿಬ್ಬರೂ ಮದುವೆಯಾದರೂ. ಸೂಳುರು ಪಟ್ಟಣ ಸಮೀಪ ಮುಥುಗೌಂಡೆನ್​ಪುರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆಮೇಲೆ ವರ್ಗಾವಣೆಗೊಂಡ ಆತ ಆಕೆಯನ್ನು ಅಲ್ಲೇ ಬಿಟ್ಟು ನಾಗಾಲ್ಯಾಂಡ್ ಗೆ ಹೋದ.ಏತನ್ಮಧ್ಯೆ ಜನವರಿಯಲ್ಲಿ 20 ದಿನ ರಜೆ ಪಡೆದು ಪತ್ನಿ ಬಳಿ ಬಂದಿದ್ದ. ಆತ ವಾಪಸ್ ನಾಗಾಲ್ಯಾಂಡ್​ಗೆ ತೆರಳಿದಾಗ ಪತಿ, ಪತ್ಮಿ ಇಬ್ಬರೂ ಫೋನ್, ವಿಡಿಯೋ ಕಾಲ್​ ಮೂಲಕ ಸಂಪರ್ಕದಲ್ಲಿದ್ದರು. ಲಾಕ್ ಡೌನ್ ಜಾರಿಯಾದ ನಂತರ ಕೆಲ ದಿನಗಳ ಕಾಲ ಊರಿಗೆ ಬರಬೇಕೆಂದು ಆತನಿಗೆ ಹೇಳಿದಳು. ಆದರೆ ಕರೊನಾ ವೈರಸ್ ಹೆಚ್ಚಾಗಿರುವುದರಿಂದ ಅಧಿಕಾರಿಗಳು ಸಿಬ್ಬಂದಿಗೆ ರಜೆ ನೀಡುವುದಿಲ್ಲ ಎಂದು ಆತ ಪರಿಸ್ಥಿತಿ ಕುರಿತು ಆಕೆಗೆ ವಿವರಿಸಿದ್ದಾನೆ.
ಇದರಿಂದ ತೀವ್ರ ನೊಂದ ಆಕೆ ಆಗಸ್ಟ್ 18 ರಂದು ಆಕೆ ಆತನಿಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತ ತಾನು ಏಕತಾನತೆಯಿಂದ, ಒಬ್ಬಂಟಿತನದಿಂದ ಬಳಲುತ್ತಿದ್ದು, ಕೆಲ ದಿನಗಳ ಕಾಲ ಆತ ಬರಬೇಕೆಂದು ಪುನಃ ವಿನಂತಿಸಿ ಕೊಂಡಿದ್ದಾಳೆ. ಆದರೆ ಆತ ತನ್ನ ಅಸಹಾಯಕ ಪರಿಸ್ಥಿತಿ ಕುರಿತು ಹೇಳಿಕೊಂಡಾಗಲೂ ಆಕೆ ತನ್ನ ಬದುಕು ಕೊನೆಗೊಳಿಸಿಕೊಳ್ಳುವುದಾಗಿ ಹೇಳಿ ಫೋನ್ ಸಂಪರ್ಕ ಕಡಿತಗೊಳಿಸಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಣಬ್​ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 1 =
Remember me
