ವಿಜಯವಾಡ:ಇತ್ತೀಚೆಗೆ ಸಮಾಜದಲ್ಲಿ ಪತಿ-ಪತ್ನಿಯರ ನಡುವೆ ಹಲವಾರು ಕಾರಣಗಳಿಂದಾಗಿ ಜಗಳಗಳು ನಡೆಯುತ್ತಿವೆ. ಆದರೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಈ ಜಗಳವು ತಾರಕಕ್ಕೇರಿದ್ದು, ಕೋಪಗೊಂಡ ಹೆಂಡತಿ ಮಲಗಿದ್ದ ಗಂಡನ ಮೇಲೆ ಬೀಸಿ ನೀರನ್ನು ಸುರಿದಿರುವ ಅಮಾನವೀಯ ಘಟನೆ ನಡೆದಿದೆ.
ದುರ್ಗಾರಾವ್ ಮತ್ತು ಆತನ ಪತ್ನಿ ಶ್ರಾವಣಿ ವಿಜಯವಾಡದ ಚಿಟ್ಟಿ ನಗರದಲ್ಲಿ ವಾಸಿಸುತ್ತಿದದ್ದು, ಸುಸೂತ್ರವಾಗಿ ಸಾಗುತ್ತಿದ್ದ ಇವರ ಜೀವನದಲ್ಲಿ ಕೆಲವೇ ದಿನಗಳಲ್ಲಿ ಜಗಳ ಶುರುವಾಗಿದೆ. ಆದರೆ ನಿನ್ನೆ ಮತ್ತೆ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿದ್ದು, ಕೋಪದಲ್ಲಿ ಒಬ್ಬರಿಗೊಬ್ಬರ ನಡುವೆ ವಾಗ್ವಾದ ನಡೆದಿದೆ. ಬಳಿಕ ಹೆಂಡತಿಯೊಂದಿಗೆ ಜಗಳವಾಡಿದ ನಂತರ ಪತಿ ನಿದ್ರೆಗೆ ಜಾರಿದ್ದಾನೆ.
ಇದನ್ನೂ ಓದಿ:ಪ್ರೀತಿಗೆ ಅಡ್ಡಿ, ಪ್ರಿಯಕರನ ನೆರವಿನಿಂದ 4 ವರ್ಷದ ಮಗನ ಪ್ರಾಣ ತೆಗೆದ ತಾಯಿ..ಆದರೆ ಜಗಳದ ಮುಗಿದ ಬಳಿಕವೂ ಪತ್ನಿಗೆ ಗಂಡನ ಮೇಲೆ ಕೋಪ ತಣ್ಣಗಾಗಿರಲಿಲ್ಲ. ಶಾಂತವಾಗಿ ಮಲಗಿದ್ದ ಕಂಡ ಆಕೆ ಕೂಡಲೇ ನೀರನ್ನು ಚೆನ್ನಾಗಿ ಕುದಿಸಿದ್ದು, ಆ ನೀರನ್ನು ತಂದು ಮಲಗಿದ್ದ ಗಂಡನ ಮೇಲೆ ಸುರಿದಿದ್ದಾಳೆ. ಕೂಡಲೇ ಆತನ ದೇಹಕ್ಕ ಬೆಂಕಿ ಹೊತ್ತಿಕೊಂಡಂತೆ ಅನುಭವವಾಗಿ ಎದ್ದು ಕುಳಿತಿದ್ದಾನೆ. ಬಿಸಿ ನೀರಿನ ಪರಿಣಾಮದಿಂದಾಗಿ ಆತನ ದೇಹವು 40ರಷ್ಟ ಸುಟ್ಟಿದ್ದು, ಆತ ಸಂಬಂಧಿಕರಿಗೆ ಕರೆ ಮಾಡಿ ನಡೆದ ಘಟನೆ ಬಗ್ಗೆ ತಿಳಿಸಿದ್ದಾನೆ.
ಆ ಬಳಿಕ ಸಂಬಂಧಿಕರು ಮನೆಗೆ ಬಂದು ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಪೊಲೀಸರು ಆತನ ಪತ್ನಿ ಶ್ರಾವಣಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಆತನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.(ಏಜೆನ್ಸೀಸ್)
ATM ಕಾರ್ಡ್ ಗಾತ್ರದಲ್ಲಿ ಮದುವೆ ಆಮಂತ್ರಣ ಪತ್ರಿಕೆ: ಅದರಲ್ಲೂ ಇದೆ ಒಂದು ಟ್ವಿಸ್ಟ್​​…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
