ಭೋಪಾಲ್​:ಸದಾ ಜಗಳವಾಡುತ್ತಿದ್ದ ಪತಿರಾಯ ಅವತ್ತೊಂದಿನ ಮೀನು ಹಿಡಿಯೋಕೆ ಬಾ ಎಂದು ಹೆಂಡತಿಯನ್ನು ಕರೆದಿದ್ದಾನೆ. ಜಗಳದ ಮುನಿಸಿನಲ್ಲಿದ್ದ ಪತ್ನಿ ಮೀನು ಹಿಡಿಯೋಕೆ ಬರಲು ಒಪ್ಪದಿದ್ದಾಗ ಆತ ಮಾಡಿದ್ದು ಎಂದೆಂದಿಗೂ ಸರಿಪಡಿಸಲಾಗದ ತಪ್ಪು.
ಇದನ್ನೂ ಓದಿ:‘ಕ್ರಿಸ್​ಮಸ್​ಗೆ ಚರ್ಚ್​ಗೆ ಹೋಗುವ ಹಿಂದೂಗಳಿಗೆ ಥಳಿಸುತ್ತೇವೆ’ ಭಜರಂಗದಳ ನಾಯಕನ ಎಚ್ಚರಿಕೆ
ಮಧ್ಯಪ್ರದೇಶದ ಚಿಂದ್ವಾರಾದ ಜಿಲ್ಲೆಯ ಡೆಲಖಾರಿ ಗ್ರಾಮದ ದಂಪತಿಯ ಕಥೆಯಿದು. ಗಂಡ ಬಾಲಿ ಕಹಾರ್​ ಮತ್ತು ಹೆಂಡತಿ ಗೊಮತಿ ಬಾಯಿ ಯಾವಾಗಲೂ ಜಗಳವಾಡುತ್ತಿದ್ದರು. ಗುರುವಾರವೂ ಅದೇ ರೀತಿ ಜಗಳವಾಗಿದೆ. ಜಗಳ ತಣ್ಣಗಾದ ನಂತರ ಹೆಂಡತಿಗೆ ಮೀನು ಹಿಡಿಯಲು ಬಾ ಎಂದು ಗಂಡ ಕರೆದಿದ್ದಾನೆ. ಆದರೆ ಆಕೆ ಒಪ್ಪಿಲ್ಲ.
ಇದನ್ನೂ ಓದಿ:ಮೂರು ಹೆಣ್ಣು ಮಕ್ಕಳಿಂದ ನಡೆದಿತ್ತು ಅಪ್ಪನ ಕೊಲೆ! ಕಣ್ಣೀರು ತರಿಸುತ್ತೆ ಕೊಲೆಯ ಹಿಂದಿನ ನೋವಿನ ಕಥೆ
ಹೆಂಡತಿ ತನ್ನೊಡನೆ ಬರಲಿಲ್ಲವೆಂದು ಗಂಡನಿಗೆ ಸಿಟ್ಟು ಹೆಚ್ಚಿದೆ. ಮನೆಯಲ್ಲಿದ್ದ ಪೆಟ್ರೋಲನ್ನು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳೀಯರು ನೋಡುವಷ್ಟರಲ್ಲಿ ಮಹಿಳೆಯ ದೇಹ ಬಹುತೇಕ ಸುಟ್ಟಿದೆ. ತಕ್ಷಣವೇ ಆಕೆಯನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಕಳುಹಿಸಲಾಗಿದೆ ಆದರೂ ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೆಂಡತಿಯನ್ನು ಸಜೀವವಾಗಿ ದಹನ ಮಾಡಿದ ಪತಿರಾಯ ಇದೀಗ ಜೈಲು ಪಾಲಾಗಿದ್ದಾನೆ. (ಏಜೆನ್ಸೀಸ್​)
https://www.vijayavani.net/bride-leaves-from-marriage-hall/
ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
