ಡೆಹ್ರಾಡೂನ್​: ನನ್ನ ಪತಿ ಹಾಗೂ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುತ್ತಿರುವ ಮಹಿಳೆ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಬಿಜೆಪಿ ಶಾಸಕ ಮಹೇಶ್​ ನೇಗಿ ಅವರ ಪತ್ನಿ ಉತ್ತರಾಖಂಡ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಹೇಶ್​ ನೇಗಿ ಅವರ ಪತ್ನಿ ಈ ರೀತಿ ಮನವಿ ಮಾಡಿ ಪತ್ರ ಬರೆದಿದ್ದಾಗಿ ಪೊಲೀಸರೇ ತಿಳಿಸಿದ್ದಾರೆ. ಎಂಎಲ್​ಎ ಹಾಗೂ ಅವರ ವಿರುದ್ಧ ಆರೋಪ ಮಾಡುತ್ತಿರುವ ಮಹಿಳೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಶಾಸಕರ ಪತ್ನಿ ಪತ್ರ ಬರೆದಿದ್ದಾರೆ. ಹಾಗೇ, ಮಹಿಳಾ ಮತ್ತು ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದಲೂ ಪತ್ರ ಬಂದಿದೆ. ಆದರೆ ಸಂತ್ರಸ್ತ ಮಹಿಳೆಯ ಪತಿಯ ಹೇಳಿಕೆ ಇನ್ನೂ ದಾಖಲಾಗಿಲ್ಲ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಡಿಎಸ್​ಪಿ ಅನೂಜ್​ ಕುಮಾರ್​ ತಿಳಿಸಿದ್ದಾರೆ.ಇದನ್ನೂ ಓದಿ:100ಕ್ಕೂ ಹೆಚ್ಚು ತಾಸುಗಳು ಕಳೆದುಹೋದವು..’: ಕಂಗನಾಗೆ ಬಿಜೆಪಿ ಮುಖಂಡನ ಬೆಂಬಲ
ನನ್ನನ್ನು ಶಾಸಕ ಮಹೇಶ್​ ನೇಗಿ ಎರಡು ವರ್ಷಗಳಿಂದಲೂ ದೈಹಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಹಿಳೆಯೋರ್ವಳು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳ ತಂದೆ ಶಾಸಕನೇ ಹೊರತು, ನನಗೆ ತಾಳಿಕಟ್ಟಿದ ಪತಿಯಲ್ಲ. ಬೇಕಿದ್ದರೆ ಡಿಎನ್​ಎ ಟೆಸ್ಟ್​ ಮಾಡಿಸಬಹುದು ಎಂದೂ ಆಕೆ ಗಂಭೀರವಾಗಿ ಸವಾಲು ಹಾಕಿದ್ದಾರೆ. ಸದ್ಯ ಪೊಲೀಸರು ಆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಮಹಾಮಳೆಗೆ 8 ಮಂದಿ ಬಲಿ; ಹೆಚ್ಚುತ್ತಲೇ ಇದೆ ‘ನರ್ಮದಾ’ ಅಬ್ಬರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
