ಉತ್ತರಪ್ರದೇಶ:ಎಂದಿನಂತೆ ಪತ್ನಿಗೆ ಒಂದು ಕಪ್ ಟೀ ಮಾಡಿಕೊಡು ಎಂದು ಕೇಳುವ ಪತಿ ಅಂದು ಕೂಡ ಒಂದು ಲೋಟ ಚಹಾ ಕೊಡು ಎಂದಿದ್ದಾನೆ. ಇದನ್ನು ಕೇಳಿಸಿಕೊಂಡ ಪತ್ನಿ ಗಂಡನ ಕಣ್ಣಿಗೆ ಕತ್ತರಿಯಿಂದ ತಿವಿದು, ಸ್ಥಳದಿಂದ ಪರಾರಿಯಾದ ಭಯಾನಕ ಘಟನೆ ಉತ್ತರಪ್ರದೇಶದ ಬಾಗ್‌ಪತ್ ಜಿಲ್ಲೆಯಲ್ಲಿ ವರದಿಯಾಗಿದೆ.
ಇದನ್ನೂ ಓದಿ:ರಾಮಲಲ್ಲಾ ಪ್ರತಿಷ್ಠಾಪನೆ ಸಂಪರ್ಕ ಅಭಿಯಾನ; ಪ್ರತಿ ಮನೆಗೆ ಶ್ರೀರಾಮಾಕ್ಷತೆ
ಪತಿಯ ಕಣ್ಣಿಗೆ ಕತ್ತರಿಯಿಂದ ತಿವಿದ ಹೆಂಡತಿ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾಳೆ. ಕಣ್ಣುಗಳಿಗೆ ಬಲವಾದ ಪೆಟ್ಟು ಬಿದ್ದ ಕಾರಣ, ವ್ಯಕ್ತಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಸದ್ಯ ಈ ಪ್ರಕರಣ ಇದೀಗ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಘಟನೆಯ ವಿವರ:ಗಂಭೀರ ಗಾಯಕ್ಕೊಳಗಾದ ವ್ಯಕ್ತಿಯನ್ನು ಅಂಕಿತ್ ಎಂದು ಗುರುತಿಸಲಾಗಿದ್ದು, ಮೂರು ವರ್ಷಗಳ ಹಿಂದಷ್ಟೇ ಆರೋಪಿ ಮಹಿಳೆಯನ್ನು ಮದುವೆಯಾಗಿದ್ದನು. ಆದಾಗ್ಯೂ, ಸ್ವಲ್ಪ ಸಮಯದ ಬಳಿಕ ದಂಪತಿಗಳು ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಪದೇ ಪದೇ ಜಗಳವಾಡುತ್ತಿದ್ದರು. ಈ ಘಟನೆ ನಡೆಯುವ ಮೂರು ದಿನಗಳ ಮೊದಲು ಅಂಕಿತ್ ಪತ್ನಿ, ಗಂಡ ಮತ್ತು ಆತನ ಕುಟುಂಬದ ವಿರುದ್ಧ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಶೀಘ್ರವೇ ಬರಲಿದೆ ದಳಪತಿ ವಿಜಯ್​ ನಟನೆಯ ‘ಲಿಯೋ 2’? ನಿರ್ದೇಶಕ ಲೋಕೇಶ್ ಕೊಟ್ರು ಸುಳಿವು!
ಅಂದು ಮನೆಗೆ ಬಂದ ಅಂಕಿತ್ ಪತ್ನಿಗೆ ಒಂದು ಕಪ್ ಟೀ ಕೇಳಿದ್ದು, ಇದರಿಂದ ಕೋಪಗೊಂಡ ಹೆಂಡತಿ ಆತನ ಕಣ್ಣಿಗೆ ಕತ್ತರಿಯಿಂದ ಇರಿದಿದ್ದಾಳೆ. ಈ ವೇಳೆ ಅಂಕಿತ್​ನ ಕಿರುಚಾಟ ಆಲಿಸಿದ ಅತ್ತಿಗೆ ಮತ್ತು ಮಕ್ಕಳು ತಮ್ಮ ಮನೆಯಿಂದ ಓಡಿ ಬಂದು ಶೀಘ್ರವೇ ಆಸ್ಪತ್ರೆಗೆ ಸಾಗಿಸಿದ್ದು, ಘಟನೆಯ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆದ್ರೆ, ಸ್ಥಳಕ್ಕೆ ಪೊಲೀಸರು ಬರುವಷ್ಟರೊಳಗೆ ಆಕೆ ಅಲ್ಲಿಂದ ಪರಾರಿಯಾಗಿದ್ದಾಳೆ. ಇದೀಗ ಮಹಿಳೆಯ ಪತ್ತೆಗೆ ತಂಡಗಳನ್ನು ರಚಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ,(ಏಜೆನ್ಸೀಸ್).
31ಕ್ಕೆ ನಂದಿ ಬೆಟ್ಟ ಪ್ರವೇಶ ನಿರ್ಬಂಧ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − one =
Remember me
