ಲಖನೌ:ಗಂಡನನ್ನು ಹಾಸಿಗೆಯಲ್ಲಿ ಕಟ್ಟಿಹಾಕಿ, ಬೆತ್ತಲೆಗೊಳಿಸಿ ಆತನ ಖಾಸಗಿ ಅಂಗವನ್ನು ಸಿಗರೇಟ್​ನಿಂದ ಸುಟ್ಟು, ವಿಕೃತಿ ಮೆರೆದ ಆರೋಪದ ಮೇಲೆ ಮಹಿಳೆಯೊಬ್ಬಳನ್ನು ಉತ್ತರ ಪ್ರದೇಶ ಪೊಲೀಸರು ಬಂಧನ ಮಾಡಿದ್ದಾರೆ. ಇದೀಗ ಆರೋಪಿ ಮಹಿಳೆಯ ಭಯಾನಕ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಭಾರಿ ಟೀಕೆಗೆ ಗುರಿಯಾಗಿದೆ.
ವಿಡಿಯೋದಲ್ಲಿ ಏನಿದೆ?ಜೀನ್ಸ್​ ಪ್ಯಾಂಟ್​ ಮತ್ತು ಟೀಶರ್ಟ್​ ಧರಿಸಿರುವ ಮಹಿಳೆ, ತನ್ನ ಗಂಡನನ್ನು ಬೆತ್ತಲೆಗೊಳಿಸಿ, ಎರಡೂ ಕೈಗಳು ಮತ್ತು ಕಾಲುಗಳನ್ನು ಮಂಚಕ್ಕೆ ಕಟ್ಟಿ, ಆತನ ಮೇಲೆ ಕುಳಿತು ಹಲ್ಲೆ ಮಾಡುವ ಮೂಲಕ ಚಿತ್ರಹಿಂಸೆ ನೀಡುತ್ತಾಳೆ. ಪಾನ್​ ಮಸಾಲ ಹಾಕಿಕೊಳ್ಳುವುದಲ್ಲದೆ, ಸಿಗರೇಟ್​ ಸೇದುತ್ತಾ ಅದರಿಂದ ಗಂಡನ ಖಾಸಗಿ ಅಂಗವನ್ನು ಸುಡುವ ಮೂಲಕ ವಿಕೃತಿ ಮೆರೆಯುತ್ತಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ.
భర్తను చిత్రహింసలు పెట్టిన భార్య.. వీడియో చూసి షాక్ అయిన పోలీసులు.
ఉత్తరప్రదేశ్ – బిజ్నోర్ జిల్లాలో మన్నన్, మెహెర్ ప్రేమ వివాహం చేసుకున్నారు.. మెహెర్‌కి సిగరెట్, మందు అలవాటు ఉండడంతో బలవంతం పెట్టి సెపరేట్‌గా కాపురం పెట్టించింది.
భర్త మన్నన్ చెడు అలవాట్లు మానుకోమని, తన…pic.twitter.com/DavaXFEz0T
— Telugu Scribe (@TeluguScribe)May 7, 2024

ಏನಿದು ಪ್ರಕರಣ?ಬಂಧಿತಳನ್ನು ಮೆಹೆರ್​ ಜಹಾನ್​ ಎಂದು ಗುರುತಿಸಲಾಗಿದೆ. ಈಕೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಸಿಯೋಹರಾ ಚಕ್ ಮಹಮೂದ್ ಸಾನಿ ಗ್ರಾಮದ ನಿವಾಸಿ. ಸಂತ್ರಸ್ತ ಗಂಡನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಪತ್ನಿಯ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಮನ್ನನ್​​ ಸೈದಿ ಎಂದು ಗುರುತಿಸಲಾಗಿದೆ. ಮನೆಯಲ್ಲಿ ರಹಸ್ಯವಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾ ಮೂಲಕ ಪತ್ನಿಯ ದೌರ್ಜನ್ಯ ಬಯಲಾಗಿದೆ. 2023ರ ನವೆಂಬರ್ 17ರಂದು ಮುಸ್ಲಿಂ ಪದ್ಧತಿಯಂತೆ ಇಬ್ಬರೂ ವಿವಾಹವಾದರು. ಮದುವೆಯ ನಂತರ ತನ್ನ ಪತ್ನಿ ಮದ್ಯ, ಸಿಗರೇಟು ಸೇವನೆ ಮಾಡುತ್ತಿರುವುದು ಪತ್ತೆಯಾಗಿದೆ. ಇದನ್ನು ಪತಿ ವಿರೋಧಿಸಿದಾಗ, ಮೆಹೆರ್ ಜಗಳವಾಡಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಿ ಕೊಲ್ಲಲು ಪ್ರಯತ್ನಿಸಿದಳು ಎನ್ನಲಾಗಿದೆ.
ಕುಡಿದ ಅಮಲಿನಲ್ಲಿ ಪತಿ ಮನ್ನನ್​ಗೆ ಮೆಹೆರ್ ಹಲವು ಬಾರಿ ಕಿರುಕುಳ ನೀಡಿದ್ದಾಳೆ. ಪತ್ನಿಯ ಮುಖವಾಡವನ್ನು ಎಲ್ಲರ ಎದರು ಬಿಚ್ಚಿಡಬೇಕೆಂಬ ಉದ್ದೇಶದಿಂದಲೇ ಮನ್ನನ್ ಸೈದಿಯ ರಹಸ್ಯವಾಗಿ ಮನೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದ. ಏಪ್ರಿಲ್ 29 ಮತ್ತು 24ರಂದು ಮೆಹೆರ್, ತನ್ನ ಪತಿಗೆ ಡ್ರಗ್ಸ್ ನೀಡಿ ಎರಡೂ ಕೈಗಳನ್ನು ಕಟ್ಟಿ ತನ್ನ ಗಂಡನ ಖಾಸಗಿ ಅಂಗವನ್ನು ಸಿಗರೇಟಿನಿಂದ ಸುಟ್ಟಿದ್ದಾಳೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಹೆರ್​ ಕೃತ್ಯ ಇಷ್ಟಕ್ಕೆ ನಿಲ್ಲುವುದಿಲ್ಲ, ತನ್ನ ಬಳಿಯಿದ್ದ ಚಾಕುವಿನಿಂದ ಪತಿಯ ಮೇಲೆ ಅನೇಕ ಬಾರಿ ಹಲ್ಲೆ ಮಾಡಿದ್ದಾಳೆ. ನೋವಿನಿಂದ ಪತಿ ಕಿರುಚಿಕೊಂಡರೂ ಬಿಡದ ಮೆಹೆರ್ ಗಂಡನನ್ನು ಕ್ರೂರವಾಗಿ ನಡೆಸಿಕೊಂಡು ಗಾಯಗೊಳಿಸಿದ್ದಾಳೆ. ಸದ್ಯ ಮನ್ನನ್ ಅವರ ಕುಟುಂಬ ಸದಸ್ಯರು ಮೆಹೆರ್ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.(ಏಜೆನ್ಸೀಸ್​)
ಶತಕ ಬಾರಿಸಿದ್ರೂ, ಗೆದ್ರೂ ಸುನೀಲ್​ ನಾರಾಯಣ್​ ನಗುವುದಿಲ್ಲ ಏಕೆ? ಅಸಲಿ ಕಾರಣ ಬಿಚ್ಚಿಟ್ಟ ಆಂಡ್ರೆ ರಸೆಲ್!

ಗಂಡನಿಂದ ಡಿವೋರ್ಸ್ ಪಡೆಯಲು​ ಸಲಹೆ ಕೇಳಿದ ಯುವತಿಗೆ ಚಿರಂಜೀವಿ ಪುತ್ರಿ ಕೊಟ್ಟ ಉತ್ತರ ವೈರಲ್​!

ನಿನಗೆ ಯಾವ ಬೂಟಿನಲ್ಲಿ ಹೊಡೆಯಲಿ ಎಂದು ಕೇಳಿದ ನೆಟ್ಟಿಗನಿಗೆ ನಟಿ ರಶ್ಮಿ ಕೊಟ್ಟ ಉತ್ತರ ವೈರಲ್​!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two + eighteen =
Remember me
