ಬಿಜಾಪುರ್​(ಛತ್ತೀಸ್​ಗಢ):ಮಾವೋವಾದಿಗಳ ವಶದಲ್ಲಿದ್ದ ಪೇದೆಯನ್ನು ಬಿಡಿಸಿಕೊಂಡು ಬರಲು ಆತನ ಪತ್ನಿ ಮಾಡಿದ ಸಾಹಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದಿಟ್ಟ ಮಹಿಳೆಯು ನಕ್ಸಲರ ಮನವೊಲಿಸುವ ಮೂಲಕ ಪತಿಯ ಜೀವವನ್ನು ಉಳಿಸಿ, ಆಧುನಿಕ ಸತಿ ಸಾವಿತ್ರಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ:700 ಕಿ.ಮೀ. ದೂರದ ಸ್ವಗ್ರಾಮಕ್ಕೆ ಗರ್ಭಿಣಿ ಪತ್ನಿ, ಮಗಳ ಹೊತ್ತು ಸಾಗಿದ್ದೇ ರೋಚಕ ಕಥೆ!
ಸುನಿತಾ ಕಟ್ಟಮ್​ ಅವರ ಪತಿ ಸಂತೋಷ್​ ಕಟ್ಟಮ್​(48) ಬಿಜಾಪುರದ ಭೋಪಾಲ್​ಪಟ್ನಂ ಪೊಲೀಸ್​ ಠಾಣೆಯ ಪೊಲೀಸ್​ ಕಾನ್ಸ್​ಟೇಬಲ್​. ಆಹಾರ ಪದಾರ್ಥ ಕೊಂಡು ಬರುತ್ತೇನೆಂದು ಮೇ 4ರಂದು ಸಂಜೆ ಮನೆಯಿಂದ ಹೊರ ಹೋದ ಪತಿ ಮರಳಿ ಬರಲೇ ಇಲ್ಲ. ಅನೇಕ ಬಾರಿ ನನಗೆ ಹೇಳದೇ ಅವರು ಮನೆಯಿಂದ ಹೊರಟು ಹೋದಂತ ಉದಾಹರಣೆಗಳಿವೆ. ಇದು ಹಾಗೇ ಅಂದುಕೊಂಡು ಸುಮ್ಮನಿದ್ದೆ. ಆದರೆ, ಮಾವೋವಾದಿಗಳ ಕಿಡ್ನ್ಯಾಪ್​ ಮಾಡಿದ್ದಾರೆಂದು ಎರಡು ದಿನಗಳ ಬಳಿಕ ನನಗೆ ತಿಳಿಯಿತು. ಬಳಿಕ ಪೊಲೀಸ್​ ಠಾಣೆಗೆ ಮಾಹಿತಿ ನೀಡಿದೆ. ಅಲ್ಲದೆ, ನಾನೂ ಕೂಡ ನನ್ನ ಪರಿಚಯಸ್ಥರ ಬಳಿ ನನ್ನ ಗಂಡನ ಕುರಿತು ವಿಚಾರಿಸಿದೆ ಎನ್ನುತ್ತಾರೆ ಸುನಿತಾ.
ಈ ಬಗ್ಗೆ ಹೆಚ್ಚಿಗೆ ಯೋಚಿಸುವುದು ಪ್ರಯೋಜನ ಇಲ್ಲವೆಂದು ಅರಿತು ನಾನೇ ನನ್ನ ಪತಿಯ ಬಿಡುಗಡೆಗೆ ಪ್ರಯತ್ನಿಸಲು ನಿರ್ಧರಿಸಿದೆ ಎಂದು ಸುನಿತಾ ತಿಳಿಸಿದ್ದಾರೆ. ಮೊದಲೇ ಆಕೆಯ ಕುಟುಂಬ ಮಾವೋವಾದಿಗಳ ತಾಣ ಸುಕ್ಮಾ ಜಿಲ್ಲೆಯ ಜಗರ್ಗುಂಡಾ ಏರಿಯಾದಲ್ಲಿ ಇರುವುದರಿಂದ ಅವರಿಗೆ ನಕ್ಸಲರ ಉಪಟಳ ಹೊಸದೇನಲ್ಲ.
ಇದನ್ನೂ ಓದಿ:VIDEO| ಅಥಣಿಯಲ್ಲಿ ಕ್ವಾರಂಟೈನ್​ ಇಂಕ್​​ ಕಂಡು ಕಂಗಾಲಾದ ಜನ
ಮೇ 6ರಂದು ಸುನಿತಾ ಅವರು ತನ್ನ 14 ವರ್ಷದ ಮಗಳೊಂದಿಗೆ ಸ್ಥಳೀಯ ಪತ್ರಕರ್ತ ಹಾಗೂ ಕೆಲವು ಗ್ರಾಮಸ್ಥರ ಸಹಾಯದಿಂದ ಪತಿಯನ್ನು ಹುಡುಕಲು ಅರಣ್ಯ ಪ್ರದೇಶಕ್ಕೆ ಪ್ರವೇಶ ನೀಡುತ್ತಾರೆ. ಇದಕ್ಕೂ ಮುನ್ನ ಬಿಜಾಪುರ ಠಾಣಾ ವ್ಯಾಪ್ತಿಯಲ್ಲಿ ಬರುವ ಅಜ್ಜಿ ಮನೆಯಲ್ಲಿ ತನ್ನಿಬ್ಬರು ಮಕ್ಕಳನ್ನು ಬಿಟ್ಟು ಗಂಡನ ರಕ್ಷಣೆಗೆ ಮುಂದಾಗುತ್ತಾಳೆ. ಮಾವೋವಾದಿಗಳನ್ನು ಪತ್ತೆ ಹಚ್ಚುವ ಮುನ್ನ ಬರೋಬ್ಬರಿ ನಾಲ್ಕು ದಿನಗಳ ಕಾಲ ಬೈಕ್​ ಮತ್ತು ಕಾಲ್ನಡಿಗೆಯಲ್ಲಿ ಕಾಡನ್ನೆಲ್ಲಾ ಅಲೆಯುತ್ತಾರೆ.
ಮಾವೋವಾದಿಗಳು ಸಂತೋಷ್​ ಹಣೆಬರಹ ನಿರ್ಧರಿಸಲು ನಾಳೆ ಜನ್​ ಅದಾಲತ್​ (ಪೀಪಲ್​ ಕೋರ್ಟ್​) ಹಮ್ಮಿಕೊಂಡಿರುವ ಹಿಂದಿನ ದಿನವೇ ಸುನಿತಾ ಬರೋಬ್ಬರಿ 6 ದಿನಗಳ ನಂತರ ತನ್ನ ಪತಿಯನ್ನು ಕಾಣುತ್ತಾಳೆ. ಬಳಿಕ ಗ್ರಾಮಸ್ಥರು ಮತ್ತು ಸುನಿತಾ ಸೇರಿಕೊಂಡು ಮಾವೋವಾದಿಗಳ ಮನವೊಲಿಸಿ ಬಿಡಿಸಿಕೊಂಡು ಬರುತ್ತಾರೆ.
ಬಿಡುಗಡೆಗೂ ಮುನ್ನ ಪೊಲೀಸ್​ ಸೇವೆ ಹೀಗೆ ಮುಂದುವರಿದರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂತೋಷ್​ಗೆ ಮಾವೋವಾದಿಗಳು ಎಚ್ಚರಿಕೆ ಕೊಟ್ಟು ಕಳುಹಿಸುತ್ತಾರೆ.
ಇದನ್ನೂ ಓದಿ:PHOTOS| ಪಾಕ್​ ಹಿಂದುಗಳ ನೆರವಿಗೆ ನಿಂತ ಮಾಜಿ ಕ್ರಿಕೆಟರ್​ ಶಾಹೀದ್ ಅಫ್ರಿದಿ!
ಪತಿಯ ರಕ್ಷಣೆ ಹೇಗೆ ಸಾಧ್ಯವಾಯಿತು ಎಂದು ಸುನಿತಾ ಬಳಿ ಕೇಳಿದಾಗ, ಪತಿಯ ರಕ್ಷಣೆಯಂತ ಬಂದಾಗ ಮಹಿಳೆಯೊಬ್ಬಳು ಎಷ್ಟು ದೂರವಾದರೂ ಹೋಗಲು ಸಿದ್ಧಳಾಗಿರುತ್ತಾಳೆ ಎಂದು ಉತ್ತರಿಸಿದ್ದಾರೆ.
ಸದ್ಯ ಸಂತೋಷ್​ ಹಿತದೃಷ್ಟಿಯಿಂದ ಮಾವೋವಾದಿಗಳ ಶೋಧಕ್ಕೆ ಪೊಲೀಸರು ಮುಂದಾಗಿಲ್ಲ. ಆದರೆ, ಜಾಡು ಹಿಡಿಯವ ಪ್ರಯತ್ನಕ್ಕೆ ಪೊಲೀಸ್​ ಇಲಾಖೆ ಮುಂದಾಗಿದೆ. ಸಂತೋಷ್​ರಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದ್ದು, ಆತನ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಪೊಲೀಸ್​ ಮಹಾ ನಿರ್ದೇಶಕರು ತಿಳಿಸಿದ್ದಾರೆ.(ಏಜೆನ್ಸೀಸ್​)
ಐದು ಬಾಲಕಿಯರ ವಿರುದ್ಧ ಕಂಪ್ಲೇಂಟ್​ ಕೊಟ್ಟ ಎಂಟರ ಪೋರ! ಕಾರಣ ಕೇಳಿ ನಕ್ಕೂ ನಕ್ಕೂ ಸುಸ್ತಾದ ಪೊಲೀಸರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 12 =
Remember me
