ಜೈಪುರ:ಮದುವೆಯಾಗಿ ಮೊದಲನೇ ಹೆಂಡತಿಗೆ ವಿಚ್ಛೇದನ ಕೊಡದೆಯೇ ಇನ್ನೊಬ್ಬಳನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯೊಬ್ಬ ತನ್ನ ಎರಡನೇ ಹೆಂಡತಿ ಜತೆ ಸೇರಿ ಮೊದಲನೇ ಹೆಂಡತಿಯನ್ನೇ ಕೊಲೆಮಾಡಿರುವ ಘಟನೆ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ನಡೆದಿದೆ.
ಕಾಂಜಿ ಹೆಸರಿನ ವ್ಯಕ್ತಿ ಲಲಿತಾ ಹೆಸರಿನ ಮಹಿಳೆಯನ್ನು ಮದುವೆಯಾಗಿದ್ದು, ಪ್ರಾಯದ ಮಗಳಿದ್ದಾಳೆ. ಆದರೆ ಆತ ಕೆಲ ತಿಂಗಳ ಹಿಂದೆ ಮನಿಷಾ ಹೆಸರಿನ ಮಹಿಳೆಯನ್ನು ಮದುವೆಯಾಗಿ ಮನೆಗೆ ಕರೆದುಕೊಂಡು ಬಂದಿದ್ದು, ಅದಾದ ನಂತರ ಲಲಿತಾ ಮನೆ ಬಿಟ್ಟು ಹೋಗಿದ್ದಳು. ಅದಾದ ನಂತರ ಇತ್ತೀಚೆಗೆ ಮನೆಗೆ ವಾಪಸು ಬಂದಿದ್ದಳು.
ಲಲಿತಾ ಮನೆಗೆ ಬಂದ ಮಾರನೇ ದಿನವೇ ಕಾಂಜಿ ಆಕೆಯೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿದ್ದು, ಕಾಂಜಿ ಮತ್ತು ಮನಿಷಾ ಇಬ್ಬರೂ ಸೇರಿ ಲಲಿತಾಳನ್ನು ಕೊಲೆ ಮಾಡಿದ್ದಾರೆ. ಆಕೆಯ ಮೃತ ದೇಹವನ್ನು ತನ್ನದೇ ಜಮೀನಿನಿಲ್ಲಿ ಹುಗಿದು ಬಂದಿದ್ದಾರೆ. ಅಮ್ಮ ಕಾಣೆಯಾದ ವಿಚಾರದಲ್ಲಿ ಲಲಿತಾಳ ಮಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಂಜಿಯ ಮನೆಗೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಜಮೀನಿನಲ್ಲಿ ಉಬ್ಬಿದ್ದ ಮೃತದೇಹವೊಂದು ಭೂಮಿಯಿಂದ ಹೊರಗೆ ಬಂದಂತೆ ಕಂಡಿದೆ. ಅದಾಗಲೇ ದುರ್ವಾಸನೆ ಹುಟ್ಟಿದ್ದ ದೇಹವನ್ನು ಹೊರತೆಗೆದು ನೋಡಿದಾಗ ಅದು ಲಲಿತಾಳದ್ದೇ ಮೃತದೇಹ ಎನ್ನುವುದು ಗೊತ್ತಾಗಿದೆ.
ಆ ವೇಳೆಗಾಗಲೇ ಊರು ಬಿಟ್ಟಿದ್ದ ಕಾಂಜಿ ಮತ್ತು ಮನಿಷಾ ಇಂಡೋರ್​ನಲ್ಲಿ ದಿನಗೂಲಿ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದರು. ಆರೋಪಿಗಳಿಗಾಗಿ ಬಲೆ ಬೀಸಿದ ಪೊಲೀಸರು ಇದೀಗ ಅವರನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)
ಬಹುಭಾಷಾ ನಟಿ ಕವಿತಾ ಮನೆಯಲ್ಲಿ ಮತ್ತೆ ಸಾವಿನ ಸೂತಕ! ಮಗ ಸತ್ತ ಬೆನ್ನಲ್ಲೇ ಮತ್ತೊಂದು ಶಾಕ್

ಯಮುನಾ ನದಿಗೆ ಹಾರಿದ ಸೋಶಿಯಲ್ ಮೀಡಿಯಾ ಸ್ಟಾರ್! ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಆತ್ಮಹತ್ಯೆಯ ದೃಶ್ಯ

11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × four =
Remember me
