ಸೂರತ್​:ತೂಕ ಹೆಚ್ಚಿಸುವುದು ಮತ್ತು ತೂಕ ಇಳಿಸುವುದು ಎರಡೂ ಬಹುದೊಡ್ಡ ಕಷ್ಟದ ಕೆಲಸಗಳೇ. ತೂಕ ಇಳಿಸಲು ಅನೇಕರು ಏರೋಬಿಕ್ಸ್​, ಭೌಷಧ, ಡಾಕ್ಟರ್​ ಮೊರೆ ಹೋಗುತ್ತಾರೆ. ಅದೇ ರೀತಿ ತೂಕ ಇಳಿಸುವುದಕ್ಕೆಂದು ವೈದ್ಯರ ಮೊರೆ ಹೋದ ಮಹಿಳೆಯೊಬ್ಬಳು ತೂಕ ಇಳಿಸಿಕೊಳ್ಳಲು ವಿಫಲವಾಗಿದ್ದಕ್ಕೆ ಆಕೆಯ ಪತಿರಾಯ ವೈದ್ಯನ ಕಥೆಯನ್ನೇ ಮುಗಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಮದರಸಾದೊಳಗೆ ಬಾಲಕನನ್ನು ಕಟ್ಟಿ ಹಾಕಿ ಚಿತ್ರಹಿಂಸೆ! ಬಾಲಕ ಬಚಾವಾಗಿದ್ದು ಹೇಗೆ ಗೊತ್ತಾ?
ಗುಜರಾತ್​ನ ಸೂರತ್​ನ ಶಾಲಾ ಶಿಕ್ಷಕ ಮನೋಜ್​ ಧುಧಗರ ಅವರ ಪತ್ನಿ ಕೆಲ ತಿಂಗಳ ಹಿಂದೆ ಡಾ.ಅಜಯ್​ ಮೊರಾಡಿಯಾ ಬಳಿ ಚಿಕಿತ್ಸೆ ಪಡೆದಿದ್ದರು. ತೂಕ ಇಳಿಸುವುದಕ್ಕಾಗಿ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿರೀಕ್ಷೆಯಷ್ಟು ತೂಕ ಇಳಿಕೆಯಾಗಿಲ್ಲ. ಇದರಿಂದ ಬೇಸತ್ತ ಮನೋಜ್​ ವೈದ್ಯನ ಬಳಿ ಮತ್ತೆ ಬಂದಿದ್ದಾನೆ. ನಾವು ಕೊಟ್ಟ ಹಣವನ್ನು ವಾಪಾಸು ಕೊಡು ಎಂದು ಒತ್ತಾಯಿಸಿದ್ದಾನೆ. ಆದರೆ ಹಣ ವಾಪಾಸು ಮಾಡಲು ವೈದ್ಯ ಒಪ್ಪಿಲ್ಲ.
ಇದನ್ನೂ ಓದಿ:ಐದು ವರ್ಷದ ಮಗನ ಎದುರೇ ಹೋಯಿತು ಅಮ್ಮ, ಅಕ್ಕನ ಪ್ರಾಣ! ಕೊಲೆ ಮಾಡಿದ್ದು ಯಾರು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ
ವೈದ್ಯನ ಮೇಲೆ ದ್ವೇಷ ಬೆಳೆಸಿಕೊಂಡ ಮನೋಜ್​ ವೈದ್ಯನ ಮೇಲೆ ಬ್ಲೇಡ್​ನಿಂದ ಹಲ್ಲೆ ಮಾಡಿದ್ದಾನೆ. ವೈದ್ಯನ ಕುತ್ತಿಗೆಯನ್ನು ಬ್ಲೇಡ್​ನಿಂದ ಕೊಯ್ದಿದ್ದಾನೆ. ಆತನ ವ್ಯಾಲೆಟ್​ನಲ್ಲಿದ್ದ 1500 ರೂಪಾಯಿಯನ್ನು ತೆಗೆದುಕೊಂಡು ಮನೋಜ್​ ಪರಾರಿಯಾಗಿದ್ದಾನೆ. ವೈದ್ಯನ ಕುತ್ತಿಗೆಯಲ್ಲಿ ರಕ್ತ ಹರಿಯುತ್ತಿರುವುದನ್ನು ಕಂಡು ತಕ್ಷಣ ಆತನನ್ನು ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯನ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿಸಲಾಗಿದೆ. ಮನೋಜ್​ಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ. (ಏಜೆನ್ಸೀಸ್​)
ಅತ್ತಿಗೆ ಮೈದುನನ ಲವ್ವಿ ಡವ್ವಿ! ಮೈದುನ ಮದುವೆಯಾಗ್ತಾನೆ ಅಂತ ತಿಳಿದಾಕ್ಷಣ ಅತ್ತಿಗೆ ಹೀಗಾ ಮಾಡೋದು!?

ಕಾಡಿನ ಗುಡಿಸಲಿನಲ್ಲಿ ಕೂಡಿ 14 ದಿನ ಅತ್ಯಾಚಾರ ಮಾಡಿದ! ಕಾಮುಕನಿಂದ ಬಚಾವಾಗಿದ್ದೇ ಒಂದು ರೋಚಕ ಕಥೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
