ಆಗ್ರಾ:ಜಿಲ್ಲೆಯ ಮೈದಾನವೊಂದರಲ್ಲಿ ನವಜಾತ ಶಿಶುವೊಂದು ಜನಿಸಿದ ಕೂಡಲೇ ಅದನ್ನು ಕಾಡು ಪ್ರಾಣಿಯೊಂದು ಎಳೆದೊಯ್ದ ಹೃದಯ ವಿದ್ರಾವಕ ಘಟನೆ ಇತ್ತೀಚೆಗೆ ನಡೆದಿದೆ.ಜೋಧಪುರದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ಶಿಲ್ಪಿ ಚೌಹಾನ್ ಎಂಬಾಕೆಯೇ ನವಜಾತ ಶಿಶುವಿನ ತಾಯಿ. ಆಕೆ ಬಯಲಿನಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಲು ಹೋಗಿದ್ದಳು. ಆತಂಕಕಾರಿ ಸಂಗತಿಯೆಂದರೆ, ಈ ಗ್ರಾಮವನ್ನು ಸರ್ಕಾರವು ಬಯಲು ಶೌಚ ಮುಕ್ತ ಎಂದು ಘೋಷಿಸಿದೆ.
ಇದನ್ನೂ ಓದಿ:ಚೀನಾದ ಕುತಂತ್ರ ನಡೆಗೆ ಕೊನೆ ಎಂದು?
ಹೆರಿಗೆಯಾದ ಕೂಡಲೇ ಚಂಬಲ್ ಕಂದರ ಬಳಿ ಆಕೆ ಪ್ರಜ್ಞೆ ತಪ್ಪಿದ್ದಾಳೆ. ಬುಧವಾರ ರಾತ್ರಿಯವರೆಗೆ ಮಗುವಿನ ಯಾವುದೇ ಸುಳಿವೂ ಇರಲಿಲ್ಲ.ಹೊರ ಹೋದ ಮಹಿಳೆ ಹಲವು ಗಂಟೆಗಳ ನಂತರವೂ ಮನೆಗೆ ತಲುಪದ ಕಾರಣ ಕುಟುಂಬ ಸದಸ್ಯರು ಆಕೆಯನ್ನು ಹುಡುಕಲಾರಂಭಿಸಿದ್ದಾರೆ. ನಂತರ ಆಕೆ ರಕ್ತದ ಮಡುವಿನಲ್ಲಿ ಮಲಗಿರುವುದನ್ನು ಅವರು ಕಂಡು ತಕ್ಷಣವೇಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ಆಡಿನ ತಂದೆ ಯಾರು ಎಂದು ತಿಳಿಯಲು ಕೋರ್ಟ್‌ ಮೊರೆ ಹೋಗಿರುವ ಮಹಿಳೆ!
“ನಾನು ಬಯಲಿನಲ್ಲಿ ವಿಶ್ರಾಂತಿಗಾಗಿ ಹೋದಾಗ ನನಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಆಗ ನಾನು ಗಂಡು ಮಗುವಿಗೆ ಜನ್ಮ ನೀಡಿದೆ. ಹೆರಿಗೆಯ ನಂತರ ಪ್ರಜ್ಞೆ ತಪ್ಪಿದೆ. ಎರಡು ಗಂಟೆಗಳ ನಂತರ ನನ್ನ ಕುಟುಂಬ ನನ್ನನ್ನು ಹುಡುಕುತ್ತ ಬಂದಾಗ ಮಗು ಕಾಣೆಯಾಗಿರುವುದು ಗೊತ್ತಾಯಿತು” ಎಂದು ಶಿಲ್ಪಿ ಹೇಳಿದರು.ಮಹಿಳೆಯ ಪತಿ ಸುನಿಲ್ ಚೌಹಾನ್ ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿ, ಗ್ರಾಮದ ಪ್ರತಿ ಮನೆಯಲ್ಲೂ ಸರ್ಕಾರದ ಧನ ಸಹಾಯದಿಂದ ಶೌಚಾಲಯ ನಿರ್ಮಿಸಲಾಗಿದೆ.
ಆದರೆ, ನಾನು ಆರ್ಥಿಕ ಧನ ಸಹಾಯ ಯಾಚಿ ಗ್ರಾಮದ ಮುಖ್ಯಸ್ಥರ ಬಳಿಗೆ ಹೋದಾಗ, ಅವರು ಆಧಾರ್ ಕಾರ್ಡ್‌ನಲ್ಲಿ ನನ್ನ ವಿಳಾಸ ರಘುನಾಥಪುರದ್ದಾಗಿರುವುದರಿಂದ ಸಹಾಯ ನಿರಾಕರಿಸಿದರು. ನಂತರ ಜೋಧಪುರದಲ್ಲಿರುವ ನನ್ನ ಪೂರ್ವಜರ ಆಸ್ತಿಯ ದಾಖಲೆಗಳನ್ನು ನಾನು ಅವರಿಗೆ ತೋರಿಸಿದಾಗ್ಯೂ ಕಾರಣಾಂತರಗಳಿಂದ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಲ್ಲಿ ಸುನೀಲ್ ತಿಳಿಸಿದ್ದಾರೆ.ಮೂರು ವರ್ಷಗಳ ಹಿಂದೆ ದಂಪತಿ ರಘುನಾಥಪುರದಿಂದ ತಮ್ಮ ಪೂರ್ವಜರ ಮನೆಗೆ ಮರಳಿದ್ದಾರೆ.
ಇದನ್ನೂ ಓದಿ:ಭಾರತ, ಚೀನಾ, ದಕ್ಷಿಣ ಆಫ್ರಿಕಾಕ್ಕೆ ಸಂಬಂಧಪಟ್ಟ ಆತಂಕಕಾರಿ ಸುದ್ದಿ ಇದು; ಅಧ್ಯಯನವೊಂದರ ವರದಿ
ಘಟನೆಯ ನಂತರ ಬಾಹ್ ದಂಡಾಧಿಕಾರಿ (ಎಸ್‌ಡಿಎಂ) ಮತ್ತು ಕ್ಷೇತ್ರ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ಭೇಟಿಯಾದರು.ಸುನೀಲ್ ಅವರ ಆಧಾರ್ ಕಾರ್ಡ್ ನವೀಕರಿಸಿದ ನಂತರ, ಸ್ಥಳೀಯ ಅಧಿಕಾರಿಗಳು ಶೌಚಾಲಯ ನಿರ್ಮಿಸಲು ಅವರ ಅರ್ಜಿಯನ್ನು ಪ್ರಕ್ರಿಯೆಗೊಳಿಸುತ್ತಾರೆ ಎಂದು ಬಾಹ್ ಎಸ್‌ಡಿಎಂ ಅಬ್ದುಲ್ ಬಸಿತ್ ಹೇಳಿದರು.
ಗಮನ ಬೇರೆಡೆ ಸೆಳೆಯಲು ಪಾಕ್​ ಮೇಲೆ ದಾಳಿಗೆ ಭಾರತದ ಹುನ್ನಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
