ಬದೌನ್​:ಮಲಗಿದ್ದ ಹಸುಳೆಯನ್ನು ಬೆಕ್ಕೊಂದು ಕದ್ದು ಕೊಂಡು ಹೋಗಿ ಛಾವಣಿಯಿಂದ ಬಿಸಾಕಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬದೌನ್​ ಎಂಬಲ್ಲಿ ನಡೆದಿದೆ.
ಬದೌನ್‌ನ ಉಸಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಮೃತ ಮಗು ಕೇವಲ 15 ದಿನದ್ದಾಗಿತ್ತು. ನಗರದ ಮೊಹಲ್ಲಾ ಹಕಿಂಬದ ನಿವಾಸಿ ಹಸನ್​​- ಆಸ್ಮಾ ದಂಪತಿಗಳು ಕೆಲ ದಿನಗಳ ಹಿಂದೆ ಗಂಡು ಮತ್ತು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಇದನ್ನೂ ಓದಿ: VIDEO | ಹೆಂಡತಿಯೊಂದಿಗೆ ಕಲಹ, ಕುಡಿದ ಮತ್ತಿನಲ್ಲಿ ವಿದ್ಯುತ್ ಕಂಬವೇರಿದ ಭೂಪ
ಸೋಮವಾರ ರಾತ್ರಿ ದಂಪತಿಗಳು ಮನೆಯ ಟೆರೇಸ್ ಮೇಲೆ ಮಲಗಿದ್ದರು. ಈ ವೇಳೆ ಅಸ್ಮಾಳ ಹತ್ತಿರ ಮಲಗಿದ್ದ ರಿಹಾನ್‌ನನ್ನು ಬೆಕ್ಕು ಹೊತ್ತೊಯ್ದಿದ್ದು ಆಕೆ ಗಲಾಟೆ ಮಾಡಿ ಕಿರುಚಾಡಿದ್ದಾಳೆ. ತಕ್ಷಣವೇ ಪತಿಯು ಬೆಕ್ಕನ್ನು ಬೆನ್ನಟ್ಟಿದ್ದು, ಆಗ ಮಗುವನ್ನು ಛಾವಣಿಯಿಂದ ಬೀಳಿಸಿದ ಬೆಕ್ಕು ಅಲ್ಲಿಂದ ಪರಾರಿಯಾಗಿದೆ. ಪರಿಣಾಮವಾಗಿ ಮಗು ಸಾವನ್ನಪ್ಪಿದ್ದು. ಬಳಿಕ ಕುಟುಂಬಸ್ಥರು ಮಗುವಿನ ಶವವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ. ಅವಳಿ ಮಕ್ಕಳು ಹುಟ್ಟಿದಾಗಿನಿಂದ ಪ್ರತಿದಿನ ಮನೆಯಲ್ಲಿ ಬೆಕ್ಕು ಕಾಣಿಸಿಕೊಳ್ಳುತ್ತಿತ್ತು. ಕುಟುಂಬಸ್ಥರು ಆಗಾಗ ಓಡಿಸುತ್ತಿದ್ದರು ಹಸನ್ ಪೊಲೀಸರಿಗೆ ತಿಳಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + ten =
Remember me
