ತಮಿಳುನಾಡು:ಕೊಯಮತ್ತೂರಿನ ವಸತಿ ಪ್ರದೇಶದಲ್ಲಿ ಅಪರೂಪದ ಬಿಳಿ ನಾಗರಹಾವು ಪತ್ತೆಯಾಗಿದೆ. ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್​ನ ಸ್ವಯಂಸೇವಕರು ಬಿಳಿ ನಾಗರಹಾವನ್ನು ಸಂರಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಇದನ್ನೂ ಓದಿ:ಮುದ್ದಿನ ನಾಯಿ ಕಾಣೆಯಾದ ಚಿಂತೆಯಲ್ಲಿ ರಮ್ಯಾ; ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ ನಟಿ
ಕುರಿಚಿ ಎಂಬಲ್ಲಿ ಬಿಳಿ ನಾಗರಹಾವು ಕಾಣಿಸಿಕೊಂಡಿದೆ. ಕೂಡಲೇ ಎಚ್ಚೆತ್ತ ಸ್ಥಳೀಯ ನಿವಾಸಿಗಳು ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಟ್ರಸ್ಟ್‌ನ ಸ್ವಯಂಸೇವಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಸ್ವಯಂಸೇವಕರು ಬಿಳಿ ನಾಗರಹಾವನ್ನು ರಕ್ಷಿಸಿದ್ದಾರೆ. ಬಳಿಕ ಅರಣ್ಯಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿ, ಸುರಕ್ಷಿತವಾಗಿ ಕಾಡಿಗೆ ಬಿಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಸ್ಕೂಟರ್​​ನಲ್ಲಿ ತೆರಳುವಾಗ ಸೀಟ್ ಬೆಲ್ಟ್ ಧರಿಸಿಲ್ಲವೆಂದು ಫೈನ್; ಚಲನ್ ನೋಡಿ ಗೊಂದಲಕ್ಕೊಳಗಾದ ಸವಾರ!
ಬಿಳಿ ನಾಗರಹಾವು ಅತ್ಯಂತ ಅಪರೂಪದ್ದಾಗಿದೆ. ಅನುವಂಶಿಕ ರೂಪಾಂತರದಿಂದ ಕೆಲವೇ ಕೆಲವು ನಾಗರಹಾವುಗಳಲ್ಲಿ ಬಿಳಿ ಬಣ್ಣ ಕಂಡು ಬರುತ್ತದೆ. ಇದನ್ನು ಅಲ್ಬಿನೋಸ್ ಎಂದು ಕರೆಯಲಾಗುತ್ತದೆ. ಬಿಳಿ ನಾಗರಹಾವಿನಲ್ಲೂ ವಿಷದ ಅಂಶ ಇದ್ದು, ಮನುಷ್ಯರಿಗೆ ಕಚ್ಚಿದಲ್ಲಿ ಜೀವಕ್ಕೆ ಆಪತ್ತು ಎದುರಾಗಬಹುದು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
