ನವದೆಹಲಿ:ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಟೀಕಿಸುವ ಭರದಲ್ಲಿ ಪಾಕಿಸ್ತಾನದ ಮಾಜಿ ಆಲ್ ರೌಂಡರ್ ರಝಾಕ್, ಈಗ ಐಶ್ವರ್ಯಾ ರೈ ಅವರನ್ನು ಮದುವೆ ಆಗಬೇಕು, ಸುಂದರವಾದ ಮಗು ಬೇಕು ಅಂದ್ರೆ ಅದು ಆಗುತ್ತಾ ಎಂದು ರಝಾಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಕುರಿತಾಗಿ ಆಕ್ರೋಶ ವ್ಯಕ್ತವಾಗುತ್ತಿದೆ. ಬಾಲಿವುಡ್ ತಾರೆ ಐಶ್ವರ್ಯಾ ರೈ ಅವರ ಮೇಲಿನ ಲೈಂಗಿಕ ಟೀಕೆಗೆ ಕ್ಷಮೆಯಾಚಿಸಲು ತನ್ನ ಮಾಜಿ ಸಹ ಆಟಗಾರ ಅಬ್ದುಲ್ ರಜಾಕ್ ಅವರನ್ನು ಕೇಳುವುದಾಗಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮಂಗಳವಾರ ಹೇಳಿದ್ದಾರೆ.
ಪಾಕಿಸ್ತಾನ ಆಡಿದ ಒಂಬತ್ತು ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಗೆದ್ದಿತ್ತು. ಭಾರತದ ವಿರುದ್ಧವೂ ಹೀನಾಯ ಸೋಲುಂಡಿತ್ತು. ಹೀಗಾಗಿ ಸತತ ಮೂರನೇ ಬಾರಿಗೆ ಪಾಕ್‌ ತಂಡವು ಏಕದಿನ ವಿಶ್ವಕಪ್‌ ಸೆಮಿಫೈನಲ್‌ಗೆ ತಲುಪಲು ವಿಫಲವಾಯ್ತು. ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ಹೆಸರು ಪ್ರಸ್ತಾಪಿಸಿದ್ದಾರೆ.
What a terrible thing to say!That's why education and grooming is important. These 3 have travelled the world and yet, something like this is being said by Abdul Razzaq; endorsed by Umar Gull and Shahid Afridi. Very low.This would hurt Aishwarya, her lovely Bachchan family…pic.twitter.com/IPw3JWhhUd
— Basit Subhani (@BasitSubhani)November 13, 2023

“ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಮತ್ತು ಆಟಗಾರರ ಪ್ರದರ್ಶನಗಳ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ನಮ್ಮ ಆಟಗಾರರನ್ನು ತಿದ್ದಿ, ಅವರನ್ನು ಬೆಳೆಸುವ ಉದ್ದೇಶ ನಮಗಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಐಶ್ವರ್ಯಾ ರೈ ಅವರನ್ನು ಮದುವೆಯಾಗಿ ಮತ್ತು ನಂತರ ನಮಗೆ ಸುಂದರವಾದ ಮಕ್ಕಳಾಗುತ್ತವೆ ಎಂದು ನೀವು ಭಾವಿಸಿದರೆ, ಅದು ಸಾಧ್ಯವಾಗದ ಮಾತು. ಹೀಗಾಗಿ ಸರಿಯಾದ ಉದ್ದೇಶ ಇಟ್ಟುಕೊಳ್ಳಬೇಕು. ಮೊದಲು ನಿಮ್ಮ ಉದ್ದೇಶಗಳನ್ನು ಸರಿಪಡಿಸಿಕೊಳ್ಳಬೇಕು” ಎಂದು ರಜಾಕ್ ಹೇಳಿದ್ದಾರೆ. ಈ ಹೇಳಿಕೆ ಕುರಿತಾಗಿ ಆಕ್ರೋಶ ವ್ಯಕ್ತವಾಗಿದೆ.
ರಜಾಕ್ ಅವರು ಈ ಕಾಮೆಂಟ್​​ ಮಾಡುವ ವೇಳೆ ಪಾಕ್‌ನ ದಿಗ್ಗಜ ಆಟಗಾರರಾದ ಶಾಹಿದ್ ಅಫ್ರಿದಿ, ಯೂನಿಸ್ ಖಾನ್, ಮಿಸ್ಬಾ ಉಲ್-ಹಕ್, ಉಮರ್ ಗುಲ್, ಸಯೀದ್ ಅಜ್ಮಲ್, ಶೋಯೆಬ್ ಮಲಿಕ್ ಮತ್ತು ಕಮ್ರಾಲ್ ಅಕ್ಮಲ್ ಅವರಂಥ ದಿಗ್ಗಜ ಆಟಗಾರರು ಕೂಡಾ ವೇದಿಕೆ ಮೇಲಿದ್ದರು. ಅಫ್ರಿದಿ ಈವೆಂಟ್‌ನ ಭಾಗವಾಗಿದ್ದರು ಮತ್ತು ವೇದಿಕೆಯಲ್ಲಿ ರಝಾಕ್ ಅವರ ತಮಾಷೆಗೆ ನಕ್ಕರು. ಆದರೆ ರಝಾಕ್ ಹೇಳಿದ್ದನ್ನು ಕೇಳಿಲ್ಲ, ಕ್ಷಮಿಸಿ ಎಂದು ಕೇಳುತ್ತೇನೆ ಎಂದು ಅವರು ಈಗ ಸ್ಪಷ್ಟಪಡಿಸಿದ್ದಾರೆ.
https://twitter.com/SharyOfficial/status/1724065501712707996
ಪಾಕ್‌ನ ದಿಗ್ಗಜ ಆಟಗಾರರಾದ ಶಾಹಿದ್ ಅಫ್ರಿದಿ ಮಾಧ್ಯಮದವರೊಂದಿಗೆ ಮಾತನಾಡಿ, “ನಾವು ಕಾರ್ಯಕ್ರಮದ ಸಮಯದಲ್ಲಿ ವೇದಿಕೆಯ ಮೇಲೆ ಕುಳಿತಿದ್ದೆವು, ರಝಾಕ್ ಏನೋ ಹೇಳಿದಾಗ ನಾನು ನಗಲು ಪ್ರಾರಂಭಿಸಿದೆ, ನನಗೆ ಅವರು ಹೇಳಿದ್ದನ್ನು ಕೇಳಲು ಅಥವಾ ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ನಾನು ಮನೆಗೆ ಬಂದಾಗ ಯಾರೋ ನನ್ನೊಂದಿಗೆ ಆ ಕ್ಲಿಪ್ ಅನ್ನು ಹಂಚಿಕೊಂಡರು. ನಾನು ಅದನ್ನು ಸರಿಯಾಗಿ ಕೇಳಿದಾಗ ಅದು ತಪ್ಪಾಗಿದೆ ಎಂದು ನಾನು ಅರಿತುಕೊಂಡೆ. ನಾನು ಈಗ ರಜಾಕ್‌ಗೆ ಸಂದೇಶ ಕಳುಹಿಸುತ್ತೇನೆ ಮತ್ತು ಕ್ಷಮೆ ಹೇಳಲು ಕೇಳುತ್ತೇನೆ. ಇದು ಕೆಟ್ಟ ಜೋಕ್, ಅದು ಮಾಡಬಾರದು ಎಂದು ಹೇಳಿದ್ದಾರೆ.
ಪಾಕಿಸ್ತಾನ ತಂಡವು ಪಂದ್ಯಾವಳಿಯಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ನಾಲ್ಕರಲ್ಲಿ ಮಾತ್ರ ಗೆದ್ದಿದೆ. ಅತ್ತ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದೆ. ಹೀಗಾಗಿ ಸತತ ಮೂರನೇ ಬಾರಿಗೆ ಪಾಕ್‌ ತಂಡವು ಏಕದಿನ ವಿಶ್ವಕಪ್‌ ಸೆಮಿಫೈನಲ್‌ಗೆ ತಲುಪಲು ವಿಫಲವಾಯ್ತು.
ಐಶ್ವರ್ಯಾ ರೈ ಮದುವೆಯಾದ್ರೆ ಸುಂದರವಾದ ಮಕ್ಕಳಾಗುತ್ತವೆಂದು ಭಾವಿಸಿದ್ರೆ ಸಾಧ್ಯವಾಗದ ಮಾತು: ಪಾಕ್‌ ಮಾಜಿ ಕ್ರಿಕೆಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − four =
Remember me
