ನವದೆಹಲಿ:ಡಿಸೆಂಬರ್ 13 ಅಥವಾ ಅದಕ್ಕಿಂತ ಮೊದಲು ಭಾರತೀಯ ಸಂಸತ್ತಿನ ಮೇಲೆ ದಾಳಿ ಮಾಡುತ್ತೇನೆ…
ಹೀಗೆ ಬೆದರಿಕೆ ಹಾಕಿರುವ ವಿಡಿಯೋವೊಂದನ್ನು ಖಲಿಸ್ತಾನಿ ಭಯೋತ್ಪಾದಕ ಗುರುಪತ್‌ವಂತ್ ಸಿಂಗ್ ಪನ್ನುನ್ ಬಿಡುಗಡೆ ಮಾಡಿದ್ದಾನೆ.
2001 ರಲ್ಲಿ ಭಯೋತ್ಪಾದಕರು ನಡೆಸಿದ ಸಂಸತ್ತಿನ ದಾಳಿಯ 22ನೇ ವರ್ಷವು ಡಿಸೆಂಬರ್ 13ರಂದೇ ಬರುತ್ತದೆ.
2001 ರ ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿನ ಪೋಸ್ಟರ್ ಅನ್ನು ಒಳಗೊಂಡಿರುವ ವೀಡಿಯೊದಲ್ಲಿ ‘ದೆಹಲಿ ಬನೇಗಾ ಖಲಿಸ್ತಾನ್’ (ದೆಹಲಿ ಖಲಿಸ್ತಾನ್ ಆಗಿ ಬದಲಾಗುತ್ತದೆ) ಎಂಬ ಶೀರ್ಷಿಕೆಯೊಂದಿಗೆ ಪನ್ನುನ್, ಭಾರತೀಯ ಏಜೆನ್ಸಿಗಳು ತನ್ನನ್ನು ಕೊಲ್ಲುವ ಸಂಚು ವಿಫಲವಾಗಿದೆ ಎಂದು ಹೇಳಿದ್ದಾನೆ. ಡಿಸೆಂಬರ್ 13 ಅಥವಾ ಅದಕ್ಕೂ ಮೊದಲು ಸಂಸತ್ತಿನ ಮೇಲೆ ದಾಳಿ ಮಾಡುವ ಮೂಲಕ ಇದಕ್ಕೆ ಉತ್ತರ ನೀಡುವುದಾಗಿ ಆತ ಹೇಳಿದ್ದಾನೆ.
ಸೋಮವಾರ ಆರಂಭವಾದ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿರುವಾಗಲೇ ಪನ್ನುನ್​ನ ಈ ಬೆದರಿಕೆ ಬಂದಿದೆ. ಡಿಸೆಂಬರ್ 22ರವರೆಗೆ ಅಧಿವೇಶನ ನಡೆಯಲಿದೆ.
ಪನ್ನೂನ್‌ನ ಬೆದರಿಕೆ ವಿಡಿಯೋ ಹೊರಬಿದ್ದ ನಂತರ ಭದ್ರತಾ ಸಂಸ್ಥೆ ಹೆಚ್ಚಿನ ಎಚ್ಚರಿಕೆ ವಹಿಸಿವೆ. ಭದ್ರತಾ ಸಂಸ್ಥೆಗಳು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐನ K-2 (ಕಾಶ್ಮೀರ-ಖಲಿಸ್ತಾನ್) ಡೆಸ್ಕ್ ಭಾರತ ವಿರೋಧಿ ನಿರೂಪಣೆಯನ್ನು ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿಯನ್ನು ಮುಂದುವರಿಸಲು ಪನ್ನುನ್‌ಗೆ ಸೂಚನೆಗಳನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ವಿಡಿಯೋ ಹೊರಬಿದ್ದ ನಂತರ ದೆಹಲಿ ಪೊಲೀಸರು ಕೂಡ ಕಟ್ಟೆಚ್ಚರ ವಹಿಸಿದ್ದಾರೆ. ಸಂಸತ್ತಿನ ಸುತ್ತಮುತ್ತ ಈಗಾಗಲೇ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
“ಸಂಸತ್ ನಡೆಯುತ್ತಿರುವಾಗ ನಾವು ಜಾಗರೂಕರಾಗಿರುತ್ತೇವೆ. ಯಾವುದೇ ಅಹಿತಕರ ಘಟನೆ ತಡೆಯಲು ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದ್ದಾರೆ.
ಅಮೆರಿಕ ಅಧಿಕಾರಿಗಳು ಪನ್ನುನ್‌ನನ್ನು ಕೊಲ್ಲುವ ಸಂಚನ್ನು ವಿಫಲಗೊಳಿಸಿದ್ದಾರೆ ಮತ್ತು ಸಂಚಿನಲ್ಲಿ ಭಾಗಿಯಾಗಿರುವ ಆತಂಕದ ಬಗ್ಗೆ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ಧಾರೆ. ಪನ್ನುನ್ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೆರಿಕ ಮೂಲದ ಸಿಖ್ಸ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥರಾಗಿದ್ದು, ಭಾರತೀಯ ತನಿಖಾ ಸಂಸ್ಥೆಗಳಿಗೆ ವಾಂಟೆಡ್​ ಆಗಿದ್ದಾನೆ ಎಂದು ಕಳೆದ ತಿಂಗಳು ಅಮೆರಿಕದ ಪತ್ರಿಕೆ ದ ಫೈನಾನ್ಷಿಯಲ್ ಟೈಮ್ಸ್ ವರದಿ ಮಾಡಿತ್ತು.
ಷೇರು ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ; ಬಿಎಸ್​ಇ ಸೂಚ್ಯಂಕ 70 ಸಾವಿರ ದಾಟುವುದು ಬಹುತೇಕ ನಿಶ್ಚಿತ

ಬಾಜಿ ಕಟ್ಟಿ ನೋಡಾ ಬಾರ ಮೀಸೆ ಮಾವ… ಅರ್ಧ ಮೀಸೆ- ತಲೆ ಬೋಳಿಸಿಕೊಂಡದ್ದು ಯಾಕೆ?

ಪಿಒಕೆ ಕಳೆದುಕೊಳ್ಳಲು ನೆಹರೂ ಮಾಡಿದ 2 ಪ್ರಮಾದಗಳೇ ಕಾರಣ: ಲೋಕಸಭೆಯಲ್ಲಿ ಅಮಿತ್​ ಶಾ ವಾಗ್ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + eleven =
Remember me
