ನವದೆಹಲಿ:ಪಂಜಾಬ್​ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್ ಸಿಂಗ್​ ಅವರ ಮುಂದಿನ ರಾಜಕೀಯ ಹೆಜ್ಜೆ ಏನಾಗಬಹುದೆಂಬ ಕಾತರ ಎಲ್ಲರಲ್ಲೂ ಮೂಡಿದೆ. ಹೀಗಿರುವಾಗ, ತಾವು ಬಿಜೆಪಿ ಸೇರುವುದಿಲ್ಲ, ಆದರೆ ಕಾಂಗ್ರೆಸ್​ನಲ್ಲೂ ಉಳಿಯುವುದಿಲ್ಲ ಎಂದು ಗೊಂದಲಮಯ ಹೇಳಿಕೆಯನ್ನು ಅವರು ನೀಡಿದ್ದಾರೆಂದು ವರದಿಗಳು ತಿಳಿಸಿವೆ.​
ಬಿಜೆಪಿ ವರಿಷ್ಠ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಷಾರನ್ನು ಭೇಟಿಯಾದ ಮಾರನೇ ದಿನವಾದ ಇಂದು ಸಿಂಗ್ ಸಂದರ್ಶನವೊಂದರಲ್ಲಿ ನಾನು ಬಿಜೆಪಿ ಸೇರುವುದಿಲ್ಲ ಎಂದು ಹೇಳಿದ್ದಾರೆ. “ಈವರೆಗೂ, ನಾನು ಕಾಂಗ್ರೆಸ್​ನಲ್ಲಿದ್ದೇನೆ. ಆದರೆ ಕಾಂಗ್ರೆಸ್​ನಲ್ಲಿ ಉಳಿಯುವುದಿಲ್ಲ. ನನ್ನನ್ನು ಈ ರೀತಿ ನಡೆಸಿಕೊಳ್ಳಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.
ನಿನ್ನೆ ಅಮಿತ್​ ಷಾ ಅವರೊಂದಿಗೆ 45 ನಿಮಿಷಗಳ ಮೀಟಿಂಗ್​ ನಡೆಸಿದ್ದ ಬಳಿಕ ರೈತರ ಹೋರಾಟದ ಬಗ್ಗೆ ಚರ್ಚಿಸಿದ್ದಾಗಿ ಟ್ವಿಟರ್​ ಮೂಲಕ ತಿಳಿಸಿದ್ದ ಕ್ಯಾಪ್ಟನ್, ಬಿಜೆಪಿ ಸೇರಬಹುದೆಂಬ ಊಹೆಗಳಿಗೆ ಎಡೆಮಾಡಿಕೊಟ್ಟಿದ್ದರು. ಕಾಂಗ್ರೆಸ್​ ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಸಿಂಗ್​, ಜಿ-23 ಕಾಂಗ್ರೆಸ್​ ನಾಯಕರನ್ನೂ ಭೇಟಿ ಮಾಡಿ, ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.(ಏಜೆನ್ಸೀಸ್)
VIDEO| ಚಿರತೆಯೊಂದಿಗೆ ಮಹಿಳೆಯ ಸೆಣಸಾಟ! ಮೈನವಿರೇಳಿಸುತ್ತೆ ಈ ದೃಶ್ಯ!

‘ಹೈಕಮ್ಯಾಂಡ್’​ ವಿರುದ್ಧ ದನಿ ಎತ್ತಿದ ಕಾಂಗ್ರೆಸ್​ ನಾಯಕನ ಮನೆ ಮೇಲೆ ದಾಳಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
