ನವದೆಹಲಿ:ದಿನದಿಂದ ದಿನಕ್ಕೆ ಕರೊನಾ ಸೋಂಕಿನ ಮತ್ತೊಂದು ಬೃಹತ್​ ಅಲೆಯ ಸಾಧ್ಯತೆ ಕ್ಷೀಣಿಸುತ್ತಿದೆ. ಮೊದಲೆರಡು ಅಲೆಗಳ ಪ್ರಮಾಣದ ಮೂರನೇ ಅಲೆಯನ್ನು ಭಾರತದಲ್ಲಿ ನೋಡುತ್ತೇವೆ ಅನ್ನಿಸುತ್ತಿಲ್ಲ ಎಂದು ಏಮ್ಸ್​ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಅವರು ಮಂಗಳವಾರ ಐಸಿಎಂಆರ್​ನ ಡೈರೆಕ್ಟರ್​ ಜನರಲ್ ಡಾ.ಬಲರಾಂ ಭಾರ್ಗವ ಬರೆದಿರುವ ‘ಗೋಯಿಂಗ್​ ವೈರಲ್: ಮೇಕಿಂಗ್​ ಆಫ್ ಕೋವಾಕ್ಸಿನ್​ – ದ ಇನ್​ಸೈಡ್​ ಸ್ಟೋರಿ’ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ತೀವ್ರ ಮಟ್ಟದ ಸೋಂಕು ಮತ್ತು ಆಸ್ಪತ್ರೆಗೆ ಸೇರುವಂತಹ ಸ್ಥಿತಿಗಳು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕರೊನಾ ಲಸಿಕೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಯುತ್ತದೆ ಎಂದರು.
ಇದನ್ನೂ ಓದಿ:ಮಂಗಳೂರು ಸ್ಮಾರ್ಟ್ ಸಿಟಿ ಅಧಿಕಾರಿ ಮನೆಗೆ ಎಸಿಬಿ ದಾಳಿ
“ಲಸಿಕೆಯ ರೂಪದಲ್ಲಿ ನಮಗೆ ಉತ್ತಮ ರಕ್ಷಣೆ ಸಿಕ್ಕಿದೆ. ಹೆಚ್ಚು ಹೆಚ್ಚು ಜನರು ಎರಡೂ ಡೋಸ್ ಲಸಿಕೆಗಳನ್ನು ಪಡೆಯುವಂತೆ ಗಮನಹರಿಸಬೇಕು. ಸೋಂಕು ಪ್ರಕರಣದಲ್ಲಿ ಏರಿಕೆಯಿಲ್ಲದ್ದರಿಂದ ಸದ್ಯಕ್ಕೆ ಲಸಿಕೆಯ ಬೂಸ್ಟರ್​ ಡೋಸ್ ಅಥವಾ ಮೂರನೇ ಡೋಸ್​ನ ಅವಶ್ಯಕತೆಯೂ ಇಲ್ಲ” ಎಂದು ಗುಲೇರಿಯ ಹೇಳಿದ್ದಾರೆ.
ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್​ ಮಾತನಾಡಿ, ಎಲ್ಲ ಅರ್ಹ ಜನಸಂಖ್ಯೆಗೆ ಮೊದಲನೇ ಮತ್ತು ಎರಡನೇ ಡೋಸ್​ ಕರೊನಾ ಲಸಿಕೆ ನೀಡುವುದು ಪ್ರಸ್ತುತ ಸರ್ಕಾರದ ಆದ್ಯತೆಯಾಗಿದೆ. “ಸಾಂಕ್ರಾಮಿಕ ರೋಗವು ಮುಗಿದಿಲ್ಲ ಮತ್ತು ಸದ್ಯಕ್ಕೆ ಅದು ಅಂತ್ಯಗೊಳ್ಳುವುದಿಲ್ಲ. ಆದರೆ ಸ್ಥಳೀಯವಾಗಿ ಹರಡುವ ರೋಗದ ರೂಪವನ್ನು ತಲುಪಬಹುದು… ಈಗ ಆರೋಗ್ಯ ಮೂಲಸೌಕರ್ಯದ ವಿಚಾರದಲ್ಲಿ ನಾವು ಉತ್ತಮವಾಗಿ ಸಜ್ಜಾಗಿದ್ದೇವೆ. ಆದರೆ, ಮೈಮರೆಯುವಂತಿಲ್ಲ, ಕೋವಿಡ್​ ಸೂಕ್ತ ನಡವಳಿಕೆಯನ್ನು ಮುಂದುವರೆಸಬೇಕು” ಎಂದು ಎಚ್ಚರಿಸಿದರು.(ಏಜೆನ್ಸೀಸ್)
VIDEO| ಮದುವೆ ಹುಡುಗೀಗೆ ಶಿಳ್ಳೆ ಹೊಡೆದು ಸ್ವಾಗತಿಸಿದ ‘ರಾಜಕುಮಾರ’!
ಸಿಧುವಿನಿಂದಾಗಿ ನನ್ನ ಕ್ಷೇತ್ರವನ್ನು ಬಿಡುವುದಿಲ್ಲ! ಚುನಾವಣಾ ಕಣವನ್ನು ಘೋಷಿಸಿದ ಕ್ಯಾಪ್ಟನ್​


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
