ಕಲ್ಕತ್ತಾ:ಪ್ರಸ್ತುತ ನಡೆಯುತ್ತಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಮೆಂಟ್​ನಲ್ಲಿ ಕೊಲ್ಕತ್ತಾ ನೈಟ್​ರೈಡರ್ಸ್​ ಪರ ಯುವ ಬ್ಯಾಟ್ಸ್​​ಮ್ಯಾನ್​ ರಿಂಕು ಸಿಂಗ್​ ಅದ್ಭುತವಾದ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಗುಜರಾತ್​​ ಟೈಟಾನ್ಸ್​ ವಿರುದ್ಧ ಕಡೇ ಓವರ್​ನ ಐದು ಎಸೆತಗಳನ್ನು ಸಿಕ್ಸರ್​​ಗಟ್ಟಿದ ನಂತರ ತೀವ್ರ ಖ್ಯಾತಿಯನ್ನು ಗಳಿಸಿರುವ ರಿಂಕು ಸಿಂಗ್​ಗೆ ಬಾಲಿವುಡ್​ ನಟ, ಕೊಲ್ಕತ್ತಾ ನೈಟ್​ರೈಡರ್ಸ್​​ ತಂಡದ ಮಾಲೀಕ ಶಾರುಖ್​ ಖಾನ್​ ಕರೆ ಮಾಡಿದ್ದರಂತೆ.
ಈ ಕುರಿತು ಮಾತನಾಡಿರುವ ರಿಂಕು ಸಿಂಗ್​ ಅಂದು ಪಂದ್ಯ ಮುಗಿದ ಬಳಿಕ ನನಗೆ ಖುದ್ದು ಶಾರುಖ್​ ಖಾನ್​ ಅವರಿಂದ ಕರೆ ಬಂದಿತ್ತು ಮತ್ತು ಅವರು ನನ್ನ ಆಟವನ್ನು ಶ್ಲಾಘಿಸಿ ಅಭಿನಂದಿಸಿದರು.
ಮಾತನಾಡುತ್ತಾ ನನ್ನ ಮದುವೆಗೆ ಬರುವುದಾಗಿಯೂ ಶಾರುಖ್​ ಖಾನ್​ ಅವರು ಹೇಳಿದ್ದಾರೆ ಎಂದು ರಿಂಕು ಸಿಂಗ್​ ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ; ಚೀನಾ ಮೂಲದ ಶಿಕ್ಷಣ ಸಂಸ್ಥೆ ಮೇಲೆ ದಾಳಿ
ನನ್ನ ಮುದುವೆಯ ಬಗ್ಗೆ ಮಾತನಾಡುತ್ತಾ ಶಾರುಖ್​ ಖಾನ್​ ಅವರು ಎಲ್ಲರೂ ನನ್ನನ್ನು ಅವರ ಮದುವೆಗೆ ಆಮಂತ್ರಿಸುತ್ತಾರೆ. ಆದರೆ, ನಾನು ಹೋಗುವುದಿಲ್ಲ ನಿನ್ನ ಮದುವೆಗೆ ಬಂದು ಕುಣಿಯುತ್ತೇನೆ ಎಂದು ದುರವಾಣಿ ಕರೆಯಲ್ಲಿ ನನ್ನ ಜೊತೆ ಮಾತನಾಡುವ ವೇಳೆ ಹೇಳಿದ್ದರು ಎಂದು ರಿಂಕು ತಿಳಿಸಿದ್ಧಾರೆ.
When SRK Called Rinku Singh!#ShahRukhKhan𓀠#RinkuSinghpic.twitter.com/rC2Ki7eHwl
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 13 =
Remember me
