ಚೆನ್ನೈ:ತಮಿಳುನಾಡು ವಿಧಾನಸಭೆ ಚುನಾವಣೆ ಪ್ರಚಾರ ಜೋರಾಗಿದ್ದು, ರಾಜ್ಯದ ಪ್ರತಿ ಮೂಲೆ ಮೂಲೆಯನ್ನು ಪಕ್ಷಗಳ ನಾಯಕರು ಸುತ್ತಾಡುತ್ತಿದ್ದಾರೆ. ಪ್ರಚಾರದ ನಡುವೆ ಶನಿವಾರ ಮಾತನಾಡಿದ ಬಿಜೆಪಿ ನಾಯಕಿ ಖುಷ್ಬೂ ಸುಂದರ್, ಬಿಜೆಪಿ ಗೆದ್ದರೆ ಪ್ರತಿಯೊಬ್ಬ ಹೆಣ್ಣು ಮಗುವಿನ ಖಾತೆಗೆ ಒಂದೊಂದು ಲಕ್ಷ ರೂ. ಜಮಾ ಮಾಡುವುದಾಗಿ ಭರವಸೆ ನೀಡಿದರು.​ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಿರುವುದು ಬಹಳ ಮುಖ್ಯ. ಹುಟ್ಟಿದಾಗ ಆ ಹೆಣ್ಣು ಮಗುವಿನ ಖಾತೆಗೆ ನಾನು ಒಂದು ಲಕ್ಷ ರೂ. ಜಮಾ ಮಾಡುತ್ತೇನೆ. ಇದರಿಂದ ಅವರು ಸುಲಭವಾಗಿ ಬೆಳೆಯಬಹುದು. ಕನಿಷ್ಠ ಪಕ್ಷ ಹೆಣ್ಣು ಮಕ್ಕಳಿಗೆ ಸಹಾಯ ಮಾಡುವ ಸಾಮರ್ಥ್ಯವಿರಬೇಕು ಮತ್ತು ಹೆಣ್ಣು ಭ್ರೂಣ ಹತ್ಯೆಯನ್ನು ತಡೆಯಬೇಕೆಂದರು.
ಇದನ್ನೂ ಓದಿರಿ:‘ಸಂತ್ರಸ್ತೆ ಇನ್ನೂ ಸಿಕ್ಕಿಲ್ಲವೆಂದರೆ ನಾಚಿಕೆಗೇಡು, ಅವಳನ್ನ ಮೊದಲು ಹೊರಗೆ ಕರ್ಕೊಂಡು ಬನ್ನಿ..’
ಖುಷ್ಬೂ ಅವರು ನುಂಗಂಬಕ್ಕಂನ ಪಶ್ಚಿಮ ಮಾದಾ ರಸ್ತೆಯ ಥೌಸಂಡ್​ ಲೈಟ್ಸ್​ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ಭರ್ಜರಿಯಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಇಂದು ಬೆಳಗ್ಗೆಯಷ್ಟೇ ಖುಷ್ಬೂ ಅವರು ಚುನಾವಣಾ ಪ್ರಚಾರದ ಭಾಗವಾಗಿ ದೋಸೆ ಮಾಡಿ ಸುದ್ದಿಯಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಅಂದಹಾಗೆ ತಮಿಳುನಾಡು ಚುನಾವಣೆ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2ಕ್ಕೆ ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)​
VIDEO| ಚಿನ್ನದ ಸರವನ್ನು ಕದ್ದು ಸಾಗಿಸುತ್ತಿರುವ ಕಳ್ಳ ಇರುವೆಗಳು: ಐಪಿಎಸ್​ ಅಧಿಕಾರಿ ಅಚ್ಚರಿ ಹೇಳಿಕೆ!

ಬಿಜೆಪಿ ಸಂಸದೆ ಮೇಲೆ ವಿಷಕಾರಿ ಬಣ್ಣ ಎರಚಿದ ಟಿಎಂಸಿ! ಸೋಲುವ ಭಯದಿಂದ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದ ಬಿಜೆಪಿ

ಭಾರತದಲ್ಲಿ ಮತ್ತೆ ಕರೊನಾ ಸ್ಫೋಟ! ಒಂದೇ ದಿನದಲ್ಲಿ 62 ಸಾವಿರಕ್ಕೂ ಅಧಿಕ ಪ್ರಕರಣ ದೃಢ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + twelve =
Remember me
