ಭೋಪಾಲ್​:ಮಧ್ಯಪ್ರದೇಶದಲ್ಲಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಕಾಂಗ್ರೆಸ್​ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್​ ಮುಖಂಡ ಹಾಗೂ ಮಾಜಿ ಸಿಎಂ ದಿಗ್ವಿಜಯ್​ ಸಿಂಗ್​ ಪುತ್ರ ಜೈವರ್ಧನ್ ಕಮಲ್​ನಾಥ ಸಂಪುಟದಲ್ಲಿ ಕಿರಿಯ ಸಚಿವ ಎಂಬ ಹೆಗ್ಗಳಿಕೆ ಪಡೆದಿದ್ದರು.
ಇದೀಗ ಮಗನ ರಾಜಕೀಯ ಜೀವನದ ಬಗ್ಗೆ ಮಾತನಾಡಿದ್ದಾರೆ ದಿಗ್ವಿಜಯ್​ ಸಿಂಗ್​. ಆತ ರಾಜಕೀಯಕ್ಕೆ ಬರುವುದನ್ನು ಬಯಸಿರಲಿಲ್ಲ. ಐದು ವರ್ಷಕ್ಕೊಮ್ಮೆ ಜನಾದೇಶ ಪಡೆದುಕೊಳ್ಳಬೇಕಾಗುತ್ತದೆ. ಜತೆಗೆ, ರಾಜಕೀಯದಿಂದಾಗಿ ನಮ್ಮ ಕುಟುಂಬವೇ ಮೊದಲ ಬಲಿಪಶುವಾಗುತ್ತದೆ ಎಂದು ಆತನಿಗೆ ಹೇಳಿದ್ದೆ ಎಂದರು.
ಇದನ್ನೂ ಓದಿ;ಕರೊನಾ ಲಸಿಕೆ ತಯಾರಿಕೆಗೆ ರಷ್ಯಾ ಜತೆ ಡೀಲಿಗಿಳಿದ ಭಾರತೀಯ ಕಂಪನಿಗಳು; ಔಷಧ ಕ್ಷೇತ್ರದಲ್ಲಿ ದೇಶದ ಸಾಮರ್ಥ್ಯವೇ ಹೆಚ್ಚುಗಾರಿಕೆ
ರಾಜಕೀಯ ರಂಗದಲ್ಲಿ ಯಾವುದು ಖಾಲಿ ಇರುವುದಿಲ್ಲ. ರಾಘೋಘರ್​ ಕ್ಷೇತ್ರದಿಂದ ನನ್ನ ಮಗ ಜೈವರ್ಧನ್​ ಸ್ಪರ್ಧಿಸದಿದ್ದರೆ ಬೇರೆ ಯಾರಾದರೂ ಸ್ಪರ್ಧಿಸುತ್ತಿದ್ದರು ಎಂಬುದು ಪುತ್ರ ವ್ಯಾಮೋಹದ ಬಗ್ಗೆ ಅವರ ಉತ್ತರ.
ಕಮಲ್​ನಾಥ್​ ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವನಾಗಿದ್ದ ಜೈವರ್ಧನ್​ ಒಂದು ವೇಳೆ ಮತ್ತೆ ಬಿಜೆಪಿ ಸೇರಿ ಮತ್ತೆ ಸಚಿವನಾಗುತ್ತೇನೆ ಎಂದು ಮಗನೇನಾದರೂ ನಿಮಗೆ ಹೇಳಿದರೆ ಎಂಬ ಪ್ರಶ್ನೆಗೆ ಉತ್ತರಿಸಿದ ದಿಗ್ವಿಜಯ್​ ಸಿಂಗ್​. ಮಗನಾದರೂ ಆತನನ್ನು ನಾನು ಬಿಡುವುದಿಲ್ಲ. ನಂತರದ ಚುನಾವಣೆಯಲ್ಲಿ ಖಂಡಿತ ಆತನನ್ನು ಸೋಲಿಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ;ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!
ಇನ್ನೊಂದೆಡೆ, ನಮ್ಮದು ತಂದೆ-ಮಗನಿಗಿಂತ ಹೆಚ್ಚಾಗಿ ಗುರು- ಶಿಷ್ಯರ ಸಂಬಂಧ ಎಂದು ಪುತ್ರ ಜೈವರ್ಧನ್​ ವ್ಯಾಖ್ಯಾನಿಸಿದ್ದಾರೆ. ಕಾಂಗ್ರೆಸ್​ನಲ್ಲಿ ಉಜ್ವಲ ಭವಿಷ್ಯವಿದೆ ಎಂಬ ವಿಶ್ವಾಸವನ್ನು ಜೈವರ್ಧನ್​ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
