ಜೈಪುರ:ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರದ ಬಿಕ್ಕಟ್ಟು ದಿನೇದಿನೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಲೇ ಇದೆ.
ನಿನ್ನೆಯಷ್ಟೇ ಸಿಎಂ ಅಶೋಕ್​ ಗೆಹ್ಲೋಟ್​ 109 ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಶಕ್ತಿ ಪ್ರದರ್ಶಿಸಿದ್ದರು. ಶಾಸಕರು ರಾಜಭವನದ ಹುಲ್ಲುಹಾಸಿನ ಮೇಲೆಯೇ ಧರಣಿ ನಡೆಸಿ ಅಧಿವೇಶನಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು.
ಇದನ್ನೂ ಓದಿ;ಭಾರತದಲ್ಲಿ ಅಡಗಿದ್ದಾಳೆ ಶ್ರೀಲಂಕಾ ಆತ್ಮಹತ್ಯಾ ಬಾಂಬರ್​​ನ ಪತ್ನಿ?
ಕಾನೂನು ಅನ್ವಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದ ರಾಜ್ಯಪಾಲರು ಇಂದು ಕೂಡ ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಇದರ ನಡುವೆ ಅಧಿವೇಶನ ಆರಂಭಕ್ಕೆ ಮತ್ತೊಮ್ಮೆ ಅನುಮತಿ ಕೋರಿ ಸಿಎಂ ಗೆಹ್ಲೋಟ್​ ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ರಾಷ್ಟ್ರಪತಿ ಭವನಕ್ಕೂ ಜನಪ್ರತಿನಿಧಿಗಳನ್ನು ಕರೆದೊಯ್ಯಲು ಸಿದ್ಧವಿರುವುದಾಗಿ ಸಿಎಂ ಅಶೋಕ್​ ಗಹ್ಲೋಟ್​ ಶಾಸಕರಿಗೆ ತಿಳಿಸಿದ್ದಾರೆ. ಬಿಜೆಪಿಯ ಷಡ್ಯಂತ್ರವನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಪ್ರತಿಭಟಿಸಲು ಸಜ್ಜಾಗಿರುವುದಾಗಿ ಗೆಹ್ಲೋಟ್​ ಸವಾಲೆಸೆದಿದ್ದಾರೆ.
ಇದನ್ನೂ ಓದಿ;ಕರೊನಾ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿಗೆ ಇದೆಂಥ ಹಿನ್ನಡೆ?
ಮಧ್ಯಾಹ್ನ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂ ಈ ಮಾತನ್ನು ಹೇಳಿದ್ದಾಗಿ ಕಾಂಗ್ರೆಸ್​ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲ ಕಲ್ರಾಜ್​ ಮಿಶ್ರಾ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲು ತೆರಳುವ ಮುನ್ನ ಈ ಘೋಷಣೆ ಮಾಡಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯ ಬೆಳವಣಿಗೆ ದೆಹಲಿ ಅಂಗಳಕ್ಕೆ ತೆರಳುತ್ತಾ ಎಂಬ ಕುತೂಹಲ ಮನೆ ಮಾಡಿದೆ.
ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 16 =
Remember me
