ನವದೆಹಲಿ:ವೀಕೆಂಡ್​ ಲಾಕ್​ಡೌನ್​ ಪಾಲಿಸದೆ ಕೋವಿಡ್​ ನಿಯಮಗಳನ್ನು ಉಲ್ಲಂಘಿಸಿದ ದಂಪತಿ ವಿರುದ್ಧ ದೆಹಲಿ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿದ್ದಾರೆ.
ಕಾರಿನ ಒಳಗೆ ಮಾಸ್ಕ್​ ಧರಿಸಿಲ್ಲ ಎಂದು ದಂಪತಿಯನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೆ, ಕರ್ಫ್ಯೂ ಪಾಸ್​ ಸಹ ಅವರ ಬಳಿಯಿರಲಿಲ್ಲ. ಈ ವೇಳೆ ತಾವು ಮಾಡಿದ ತಪ್ಪನ್ನು ತಿದ್ದುಕೊಂಡು ಸೌಮ್ಯವಾಗಿ ವರ್ತಿಸದ ದಂಪತಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
“ನಾನು ಇಲ್ಲಿಯೇ ನನ್ನ ಗಂಡನಿಗೆ ಕಿಸ್​ ಮಾಡುತ್ತೇನೆ. ನೀವು ನನ್ನನ್ನು ತಡೆಯಬಹುದೇ? ಎಂದು ಮಹಿಳೆ ಕೂಗಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿರಿ:ಅವನ ಕಥೆಯಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ!
ಈ ಘಟನೆ ದೆಹಲಿಯ ದರಿಯಾಗಂಜ್​ ಏರಿಯಾದಲ್ಲಿ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ನಮ್ಮ ಕಾರನ್ನೇಕೆ ನಿಲ್ಲಿಸಿದ್ದೀರಿ? ನಾನು ನನ್ನ ಪತ್ನಿಯ ಜತೆ ಕಾರಿನ ಒಳಗಡೆ ಇದ್ದೆನು ಎಂದು ವ್ಯಕ್ತಿ ಪೊಲೀಸರಿಗೆ ಹೇಳುವುದು ವಿಡಿಯೋದಲ್ಲಿದೆ.
ಕರೊನಾ ನಿಯಮ ಪಾಲಿಸಿಲ್ಲ ಎಂದು ಕಾರು ತಡೆದ ದೆಹಲಿ ಪೊಲೀಸರಿಗೆ ನಾನಿಲ್ಲಿಯೇ ನನ್ನ ಗಂಡನಿಗೆ ಕಿಸ್​ ಮಾಡ್ತೇನೆ, ತಾಕತ್ತಿದ್ರೆ ತಡೆಯಿರಿ ಎಂದು ಮಹಿಳೆ ಸವಾಲಾಕಿದ ಘಟನೆ ಭಾನುವಾರ ನಡೆದಿದೆ.#Wife#Husband#DelhiCouple#DelhiPolice#Misbehave#CovidRulespic.twitter.com/GOdHWb0i07
— Vijayavani (@VVani4U)April 19, 2021

ಕಾರಿನಲ್ಲಿದ್ದಾಗಲೂ ಮಾಸ್ಕ್​ ಧರಿಸಬೇಕೆಂದು ಇತ್ತೀಚೆಗೆ ಹೈಕೋರ್ಟ್​ ಸಹ ಆದೇಶದ ನೀಡಿದೆ ಎಂದು ಪೊಲೀಸರು ಮನವರಿಕೆ ಮಾಡಿದರೂ ಸುಮ್ಮನಾಗದ ದಂಪತಿ, ಅವರೊಂದಿಗೆ ವಾಗ್ವಾದ ಮುಂದುವರಿಸಿದರು. ಅಲ್ಲದೆ, ತಾಕತ್ತಿದ್ದರೆ ಕ್ರಮ ಕೈಗೊಳ್ಳುವಂತೆ ಸವಾಲು ಹಾಕಿದರು. ಬಳಿಕ ಮಹಿಳಾ ಪೊಲೀಸರನ್ನು ಕರೆಸಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಮಹಿಳೆಯನ್ನು ಹತ್ತಿರದ ಪೊಲೀಸ್​ ಠಾಣೆಗೆ ಕರೆದೊಯ್ಯಲಾಯಿತು. ಇದೀಗ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)
ಕಾರ್ತಿಕ್​ನನ್ನೂ ಕಾಡಬೇಡಿ!; ಕರಣ್​ಗೆ ಕಂಗನಾ ತರಾಟೆ

ಮತ್ತೆ ನಷ್ಟದ ಭೀತಿ; ಉದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಲಿ

ಮತ್ತೊಮ್ಮೆ ಕರೊನಾ ಸೋಲಿಸಿ, ನಾವು ಗೆಲ್ಲಬೇಕಿದೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 7 =
Remember me
