ನವದೆಹಲಿ: ಕರೊನಾ ಸೋಂಕು ಹರಡದಂತೆ ತಡೆಯಲು ಘೋಷಿಸಿದ್ದ 21 ದಿನಗಳ ಲಾಕ್​ಡೌನ್​ ಅವಧಿಯ ಕೊನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಏನು ಹೇಳಲಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆಬಿದ್ದಿದೆ. ಇಂದು ಮುಕ್ತಾಯವಾಗುತ್ತಿರುವ ಮೊದಲ ಹಂತದ ಲಾಕ್​ಡೌನ್ ಮೊದಲು ಮತ್ತು ಅವಧಿಯ ನಡುವೆ ಪ್ರಧಾನಿ ನರೇಂದ್ರ ಮೋದಿ ಒಟ್ಟು ಮೂರು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ದೇಶದ ಜನರಿಗೆ ಧೈರ್ಯ ತುಂಬಿದ್ದರು. ನೈತಿಕ ಸ್ಥೈರ್ಯವನ್ನು ಉದ್ದೀಪಿಸಿದ್ದರು. ಕರೊನಾ ಸೋಂಕು ತಡೆಗೆ ಸಂಬಂಧಿಸಿದಂತೆ ಇಂದು ಅವರು ನಾಲ್ಕನೇ ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡುವುದಾಗಿ ಅವರು ಸೋಮವಾರ ಘೋಷಿಸಿದ್ದರು. ಅದರಂತೆ ಈಗ ಅವರು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದು ಅದರ ವಿವರ ಇಲ್ಲಿದೆ.
10:20 AM: ನಾವು ಹೊಸ ಮಾರ್ಗಸೂಚಿಯನ್ನು ಮಾಡುತ್ತಿದ್ದೇವೆ.  ಈ ಸಂದರ್ಭದಲ್ಲಿ ದೇಶದ ಎಲ್ಲ ಬಡವರ ಮತ್ತು ದಿನಗೂಲಿ ಕಾರ್ಮಿಕರ ಹಿತವನ್ನೂ ಗಮನದಲ್ಲಿ ಇರಿಸಿಕೊಂಡಿದ್ದೇವೆ. ದೇಶದಲ್ಲಿ ರಬಿ ಬೆಳೆ ಕೊಯ್ಲು ಪ್ರಗತಿಯಲ್ಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೃಷಿಕರು ಸಮಸ್ಯೆಗಳನ್ನು ಸಾಧ್ಯವಾದಷ್ಟೂ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ. ವಿಸ್ತೃತ ಮಾರ್ಗಸೂಚಿಯನ್ನು ಸದ್ಯವೇ ಬಿಡುಗಡೆ ಮಾಡುತ್ತೇವೆ. ದೇಶವಾಸಿಗಳು ಮುಂದಿನ ಅವಧಿಯಲ್ಲಿ ನಾನೀಗ ಹೇಳುವ ಸಪ್ತ ಸೂತ್ರಗಳನ್ನು ಪಾಲಿಸಬೇಕು. ಕಟ್ಟುನಿಟ್ಟಾಗಿ ಲಾಕ್​ಡೌನ್ ನಿಯಮ ಪಾಲಿಸಬೇಕು. ಮನೆಯಲ್ಲಿ ಇರುವ ಹಿರಿಯರನ್ನು ಹೆಚ್ಚುವರಿ ಕಾಳಜಿಯಿಂದ ನೋಡಿಕೊಳ್ಳಿ. ಸೋಷಿಯಲ್ ಡಿಸ್ಟೆನ್ಸಿಂಗ್ ಪಾಲಿಸಿ, ಮನೆಯಲ್ಲೇ ತಯಾರಿಸಿದ ಮುಖದ ಮಾಸ್ಕ್​ ಧರಿಸಿ, ಆಯುಷ್ ಸಚಿವಾಲಯದ ನಿರ್ದೇಶನಗಳನ್ನು ನಿಮ್ಮ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಲುವಾಗಿ ಪಾಲಿಸಬೇಕು. ಆರೋಗ್ಯ ಸೇತು ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಿ. ಯಾರಿಗೆ ನೆರವು ಬೇಕೋ ಅವರಿಗೆ ನೆರವು ನೀಡಿ. ನಿಮ್ಮಲ್ಲಿ ಕೆಲಸ ಮಾಡುವವರನ್ನು ವಜಾಗೊಳಿಸಬೇಡಿ. ಅವರ ಅಗತ್ಯಗಳಿಗೆ ಸೂಕ್ಷ್ಮವಾಗಿ ಸ್ಪಂದಿಸಿ. ಡಾಕ್ಟರ್ಸ್ ಮತ್ತು ನರ್ಸ್​​ಗಳಿಗೆ ಹಾಗೂ ಯಾರೆಲ್ಲ ಕರೊನಾ ಸೋಂಕು ಹರಡದಂತೆ ತಡೆಯಲು ಹೋರಾಡುತ್ತಿದ್ದಾರೋ ಅವರಿಗೆಲ್ಲ ಗೌರವ ಕೊಡಿ. ಧನ್ಯವಾದಗಳು.
10:18 AM:ದೇಶಾದ್ಯಂತ ಮೇ 3ರ ತನಕ ಲಾಕ್​ಡೌನ್ ಮುಂದುವರಿಯಲಿದೆ. ಇಡೀ ದೇಶ ಕರೊನಾ ವಿರುದ್ಧದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದ್ದು, ಹಾಟ್​ಸ್ಪಾಟ್​ಗಳಲ್ಲಿ ಕಠಿಣ ನಿಯಮಗಳ ಪಾಲನೆ ಮಾಡಬೇಕಾಗಿದೆ. ಈ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು.#COVID19ಟೆಸ್ಟ್​ಗಾಗಿ ದೇಶಾದ್ಯಂತ 220ಕ್ಕೂ ಹೆಚ್ಚು ಲ್ಯಾಬ್​ ಸ್ಥಾಪನೆ ಕೆಲಸ ಪ್ರಗತಿಯಲ್ಲಿದೆ. ಜಗತ್ತಿನ ವಿದ್ಯಮಾನಗಳ ಅನುಭವದ ಪ್ರಕಾರ ಪ್ರತಿ 10,000 ಕೇಸ್​ಗಳನ್ನು ನಿಭಾಯಿಸಲು 1,500-1,600 ಬೆಡ್​ಗಳ ಅವಶ್ಯಕತೆ ಇದೆ. ನಮಲ್ಲಿ ಈಗ 1 ಲಕ್ಷಕ್ಕೂ ಹೆಚ್ಚು ಬೆಡ್​ಗಳಿವೆ, 600ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವುಗಳನ್ನು ಇನ್ನೂ ವಿಸ್ತರಿಸಲಾಗುತ್ತಿದೆ.
10:15 AM: ಏಪ್ರಿಲ್​ 20ರ ತನಕ ನಾವು ಎಲ್ಲ ಜಿಲ್ಲೆಗಳು, ಪ್ರದೇಶಗಳು ಮತ್ತು ರಾಜ್ಯಗಳನ್ನು ಬಹಳ ಸೂಕ್ಷ್ಮವಾಗಿ ಗಮನಿಸುವೆವು. ಎಲ್ಲ ಕಡೆ ಯಾವ ರೀತಿ ಲಾಕ್​ಡೌನ್ ನಿಯಮಗಳನ್ನು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಪಾಲನೆ ಮಾಡಿದ್ದಾರೆ ಎಂಬುದನ್ನು ಅವಲೋಕಿಸುತ್ತೇವೆ. ಹಾಟ್​ಸ್ಪಾಟ್​ಗಳ ಸಂಖ್ಯೆ ಹೆಚ್ಚಳವಾಗದಂತೆ ಮಾಡುವಲ್ಲಿ ಯಾವ ರಾಜ್ಯಗಳು ಹೆಚ್ಚು ನಿಗಾ ವಹಿಸಿವೆಯೋ ಅಲ್ಲಿ ಕೆಲವು ಪ್ರಮುಖ ಚಟುವಟಿಕೆಗಳನ್ನು ನಡೆಸುವುದಕ್ಕೆ ಅವಕಾಶ ನೀಡಬಹುದು. ಆದರೆ, ಅದಕ್ಕೂ ಷರತ್ತುಗಳು ಅನ್ವಯ.
10.10 AM:ಭಾರತದಲ್ಲಿ#COVID19ಕೇಸ್​ಗಳು 100ಕ್ಕೆ ತಲುಪುವುದಕ್ಕೂ ಎಷ್ಟೋ ಮೊದಲೇ ವಿದೇಶದಿಂದ ಆಗಮಿಸಿದವರಿಗೆ 14 ದಿನಗಳ ಐಸೋಲೇಷನ್ ಜಾರಿಗೆ ತರಲಾಗಿತ್ತು. ನಾವು 21 ದಿನಗಳ ಲಾಕ್​ಡೌನ್ ಘೋಷಿಸಿದಾಗ ದೇಶದಲ್ಲಿ 550 ಕೇಸ್​ಗಳಿದ್ದವು.
10:07 AM:ಭಾರತದಲ್ಲಿ ಒಂದೇ ಒಂದು ಕರೊನಾ ರೋಗಿ ಇಲ್ಲದ ಆ ಸಂದರ್ಭದಲ್ಲಿಯೇ #COVID19 ಸೋಂಕು ಪೀಡಿತ ರಾಷ್ಟ್ರಗಳಿಂದ ಆಗಮಿಸುವವರ ಸ್ಕ್ರೀನಿಂಗ್ ಆರಂಭಿಸಿದ್ದೆವು. ಸಮಸ್ಯೆ ಬಿಗಡಾಯಿಸುವುದು ಭಾರತಕ್ಕೆ ಬೇಕಾಗಿರಲಿಲ್ಲ. ಅದರ ಬದಲು ಭಾರತ, ಯಾವಾಗ ಸಮಸ್ಯೆ ಕಾಣಿಸಿಕೊಂಡಿತೋ ಆಗಲೇ ತ್ವರಿತ ನಿರ್ಣಯಗಳ ಮೂಲಕ ಅದನ್ನು ತಡೆಯಲು ನಾವು ಪ್ರಯತ್ನಿಸಿದ್ದೇವೆ. ಒಂದೊಮ್ಮೆ ನಾವು ತ್ವರಿತ ನಿರ್ಣಯಗಳನ್ನು ತೆಗೆದುಕೊಳ್ಳದೇ ಹೋಗಿದ್ದರೆ ಆಗಬಹುದಾಗಿದ್ದ ಪರಿಸ್ಥಿತಿ, ಪರಿಣಾಮಗಳನ್ನು ನನಗೆ ಊಹಿಸುವುದಕ್ಕೂ ಆಗುತ್ತಿಲ್ಲ.
10.05 AM– ಬಾಬಾ ಸಾಹೇಬ್ ಡಾಕ್ಟರ್ ಬೀಮ್​ ರಾವ್ ಅಂಬೇಡ್ಕರ್ ಅವರ ಜಯಂತಿ ದಿನವಾದ ಇಂದು, ನಾವು ಭಾರತದ ಎಲ್ಲ ದೇಶವಾಸಿಗಳು ನಮ್ಮ ಸಾಮೂಹಿಕ ಶಕ್ತಿ ಪ್ರದರ್ಶನ, ಸಂಕಲ್ಪ ಸಾಧಿಸುವ ಮೂಲಕ ಅವರಿಗೆ ನಿಜವಾದ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದೇವೆ.
10.02 AM:ದೇಶವಾಸಿಗಳ ವಿವಿಧ ರೀತಿಯ ಕಷ್ಟಗಳ ಅರಿವು ನನಗೆ ಇದೆ. ದೇಶವನ್ನು ರಕ್ಷಿಸುವ ಸಲುವಾಗಿ ಎಲ್ಲರೂ ಬಹಳ ತಾಳ್ಮೆಯಿಂದ ಎಲ್ಲವನ್ನೂ ಸಹಿಸಿಕೊಂಡಿರುವುದೂ ನನ್ನ ಅರಿವಿನಲ್ಲಿ ಇದೆ. ಆಹಾರ, ಕೆಲಸಗಳ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಿ. ಆದರೂ, ಅವುಗಳನ್ನೆಲ್ಲ ಬಗೆಹರಿಸುವುದಕ್ಕೂ ಹೋರಾಡುತ್ತಿದ್ದೀರಿ. ನಿಮ್ಮೆಲ್ಲರ ತ್ಯಾಗಕ್ಕೆ ನಾನು ತಲೆಬಾಗುವೆ.
10 AM:ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳನ್ನು ಉದ್ದೇಶಿಸಿ ಮಾತು ಆರಂಭಿಸಿದ್ದು, 21 ದಿನಗಳ ಲಾಕ್​ಡೌನ್ ಸಂಪನ್ನಗೊಳ್ಳುವ ದಿನವಾಗಿದ್ದು ಎಲ್ಲರ ಗಮನಸೆಳೆದಿದ್ದಾರೆ.
https://www.vijayavani.net/lock-down-extended-till-may-3-govt-to-issue-guidelines-tomorrow/
ಒಂದೇ ಒಂದು ಆ್ಯಪಲ್​ – 2 ಕೋಟಿ ಪರಿಹಾರ!

Watch Live!https://t.co/QuaSv4YzaT
— PMO India (@PMOIndia)April 14, 2020

#WATCHPM Narendra Modi addresses the nation. (courtesy:DD)https://t.co/QXpcpKLh7X
— ANI (@ANI)April 14, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
