ಮುಂಬೈ:ಬಂಡಾಯ ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಶಿವಸೇನೆ, ಇದೀಗ ರೆಬೆಲ್​ ಶಾಸಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರೂ ಆಗಿರುವ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಬಂಡಾಯ ಶಾಸಕರ ವಿರುದ್ಧ ಗುಡುಗಿದ್ದಾರೆ.
ನಮ್ಮ ಸರ್ಕಾರದ ವಿರುದ್ಧ ಶಾಸಕರನ್ನು ಬಂಡಾಯವೆಬ್ಬಿಸಿದ ಏಕನಾಥ್ ಶಿಂಧೆ ಅವರು ಮಾಡಿರುವ ದ್ರೋಹವನ್ನು ಎಂದೂ ಮರೆಯಲ್ಲ, ಉಳಿದ ಶಾಸಕರಿಗೂ ಇದೇ ಮಾತನ್ನು ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.
Mumbai | You already know what was discussed in the meeting, the important thing is that we will not forget the betrayal done by rebel Shiv Sena MLAs. We (Shiv Sena) will win for sure: Maharashtra Minister Aaditya Thackeraypic.twitter.com/V2c83nd3U4
— ANI (@ANI)June 25, 2022

ಶಿವಸೇನ-ಕಾಂಗ್ರೆಸ್​ಎನ್​​ಸಿಪಿ ಮೈತ್ರಿ ಸರ್ಕಾರಕ್ಕೆ ಮುಂದೆಯೂ ಗೆಲುವಾಗಲಿದೆ. ಇವರು ಮಾಡಿರುವ ದ್ರೋಹ ಎಲ್ಲರಿಗೂ ಗೊತ್ತಿದೆ. ನಾವೂ ಕೂಡ ಅದನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.ಈ ಮಧ್ಯೆ ಬಂಡಾಯ ಶಾಸಕರಿಗೆ ಅನರ್ಹತೆಯ ನೊಟೀಸ್​ ನೀಡಲಾಗಿದ್ದು, ಸೋಮವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ಬಂಡಾಯವೆಬ್ಬಿಸಿದ ಏಕನಾಥ್​ ಶಿಂಧೆ ವಿರುದ್ಧವೂ ಕ್ರಮ ಕೈಗೊಂಡಿದೆ.
ಬಾಳಾಠಾಕ್ರೆ ಅವರ ಸಿದ್ಧಾಂತದ ಮೇಲೆಯೇ ಪಕ್ಷ ಮುನ್ನಡೆಯಲಿದೆ, ಹಿಂದುತ್ವ ಹಾಗೂ ಮರಾಠ ನಮ್ಮ ಹೆಮ್ಮೆ. ಇದನ್ನು ಇಬ್ಭಾಗ ಮಾಡಲು ಎಂದಿಗೂ ಶಿವಸೇನೆ ಬಯಸುವುದಿಲ್ಲ ಎಂದು ಸಂಸದ ಸಂಜಯ್​ ರಾವತ್​ ಹೇಳಿದ್ದಾರೆ.(ಏಜೆನ್ಸೀಸ್​)
ನೀವೇನಾದ್ರೂ ಮಾಡ್ಕೊಳಿ, ಆದರೆ ಬಾಳಾ​ಸಾಹೇಬ್​ಠಾಕ್ರೆ ಹೆಸರು ಬಳಸುವಂತಿಲ್ಲ: ರೆಬೆಲ್​ ಶಾಸಕರಿಗೆ ಉದ್ಧವ್​ ಎಚ್ಚರಿಕೆ

ನಿಮ್ಮ ಮಕ್ಕಳನ್ನು ಅಮೆರಿಕ ಕಳುಹಿಸಬೇಡಿ, ಈ ದೇಶದಲ್ಲಿ ಮಾತ್ರ ನೆಮ್ಮದಿಯಿಂದಿರಲು ಸಾಧ್ಯ: ಟಿ.ಬಿ.ಜಯಚಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
