ಅಮರಾವತಿ:ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ನೇತೃತ್ವದ ಸರ್ಕಾರಕ್ಕೆ ಸವಾಲೆಸೆದಿರುವ ತೆಲುಗು ದೇಶಂ ಪಕ್ಷ(ಟಿಡಿಪಿ)ದ ಮುಖ್ಯಸ್ಥ ಹಾಗೂ ಪ್ರತಿಪಕ್ಷ ನಾಯಕ ಎನ್​. ಚಂದ್ರಬಾಬು ನಾಯ್ಡು, ಮೂರು ರಾಜಧಾನಿ ಯೋಜನೆ ಕುರಿತು ಜನಾಭಿಪ್ರಾಯ ಸಂಗ್ರಹಿಸಿ, ಅದರ ಪರವಾಗಿ ಜನರು ಮತ ಚಲಾಯಿಸಿದರೆ ನಾನು ರಾಜಕೀಯವನ್ನೇ ಬಿಡುತ್ತೇನೆಂದು ಪ್ರತಿಜ್ಞೆ ಮಾಡಿದ್ದಾರೆ.
ರಾಜ್ಯ ರಾಜಧಾನಿಯನ್ನು ಸ್ಥಳಾಂತರ ಮಾಡಲು ಹೊರಟಿರುವ ಸರ್ಕಾರದ ಯೋಜನೆಯನ್ನು ಹಿಂತೆಗೆದುಕೊಂಡು ಜನರಲ್ಲಿ ಕ್ಷಮೆಯಾಚಿಸಿ ಎಂದು ಸಿಎಂ ಜಗನ್​ರನ್ನು ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಬಸ್​ಗೆ ಕಾಯುತ್ತಿದ್ದ ಯುವತಿ ಬಳಿ ಬಂದ ಆಟೋ ಚಾಲಕ: ಮಾತು ನಂಬಿದವಳಿಗೆ ಕಾದಿತ್ತು ಶಾಕ್!​
ರಾಜ್ಯ ರಾಜಧಾನಿಯನ್ನಾಗಿ ಅಮರಾವತಿಯನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ರೈತರ ಹೋರಾಟದ ಮೊದಲ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅಮರಾವತಿಯ ರಾಯಪುಡಿ ಗ್ರಾಮದಲ್ಲಿ ನಡೆದ ಅಮರಾವತಿ ಜನಭೇರಿ ಸಮಾವೇಶವನ್ನು ಉದ್ದೇಶಿಸಿ ಚಂದ್ರಬಾಬು ನಾಯ್ಡು ಮಾತನಾಡಿದರು.
ವಿವೇಕ ಉಳ್ಳಂತಹ ವ್ಯಕ್ತಿ ರಾಜಧಾನಿಯನ್ನು ಬದಲಾಯಿಸುವುದಿಲ್ಲ. ಒಂದು ವೇಳೆ, ನೀವು ಈ ವಿಷಯದ ಬಗ್ಗೆ ಜನಾಭಿಪ್ರಾಯ ಸಂಗ್ರಹಕ್ಕೆ ಸಿದ್ಧರಿದ್ದೀರಾ? ಜನರು ನಿಮಗೆ ಬೆಂಬಲವಾಗಿ ನಿಂತರೆ ನಾನು ರಾಜಕೀಯವನ್ನೇ ಬಿಟ್ಟುಬಿಡುತ್ತೇನೆಂದು ಜಗನ್​ಗೆ ನಾಯ್ಡು ಸವಾಲು ಹಾಕಿದರು. ಜಗನ್​ರನ್ನು ಒಂದು ಬಾರಿಯ ಸಿಎಂ ಎಂದು ಕರೆದ ನಾಯ್ಡು, ಮುಂದಿನ ಬಾರಿ ಅವರ ಯೋಜನೆಯ ಪತ್ರ ಕಸದಬುಟ್ಟಿಗೆ ಸೇರಲಿದೆ ಎಂದರು.
ಕೇವಲ ಒಂದು ಅವಕಾಶ ನೀಡಿ ಎಂದು ಕೇಳಿಕೊಂಡ ಬಳಿಕ ಜನರು ಜಗನ್​ಗೆ ಒಂದು ಅವಕಾಶ ನೀಡಿದ್ದಾರೆ. ಆದರೆ, ಇದೇ ಕೊನೆಯ ಅವಕಾಶ ಆಗಿರಲಿದೆ. ಏಕೆಂದರೆ ಜಗನ್​ ಜನರಿಗೆ ಸಂಪೂರ್ಣ ದ್ರೋಹವೆಸಗಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳ ಶಾಪದಿಂದ ಜಗನ್​ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಾಯ್ಡು ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ:ಹಣ ಕೊಡದಿದ್ದರೆ ಅನ್ನಕ್ಕೆ ವಿಷ ಹಾಕುವೆ: ಕಮಿಷನ್​ಗಾಗಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷನಿಂದ ಬೆದರಿಕೆ?
ನಾಯ್ಡು ಸರ್ಕಾರದ ಅವಧಿಯಲ್ಲಿ ಅಮರಾವತಿಯನ್ನು ರಾಜಧಾನಿಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ, ಸರ್ಕಾರ ಬದಲಾಗಿ ಜಗನ್​ ಸಿಎಂ ಆದ ಬಳಿಕ ಒಂದೇ ರಾಜಧಾನಿ ಬದಲಾಗಿ ಮೂರು ರಾಜಧಾನಿಗಳನ್ನಾಗಿ ವಿಂಗಡಿಸಿದ್ದಾರೆ. ವಿಶಾಖಪಟ್ಟಣವನ್ನು ಕಾರ್ಯಾಂಗ ರಾಜಧಾನಿ, ಕರ್ನೂಲ್​ ನ್ಯಾಯಾಂಗ ರಾಜಧಾನಿ ಮತ್ತು ಅಮರಾವತಿಯನ್ನು ಶಾಸಕಾಂಗ ರಾಜಧಾನಿಯನ್ನಾಗಿ ಮಾಡಲಾಗಿದೆ. ಹೀಗಾಗಿ ಪ್ರತಿಪಕ್ಷಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿವೆ.(ಏಜೆನ್ಸೀಸ್​)
ಪರಿಷತ್ ತಂತ್ರಗಾರಿಕೆಗೆ ಆಕ್ಷೇಪ; ಬಿಜೆಪಿಯಲ್ಲಿ ಅಸಮಾಧಾನ

ವಿಶ್ವದರ್ಜೆ ಬೆಂಗಳೂರಿಗೆ ಸಂಕಲ್ಪ; ಬೆಂಗಳೂರು ಮಿಷನ್-2022ಗೆ ಚಾಲನೆ

https://www.vijayavani.net/sslc-puc-starts-from-new-year/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven − 7 =
Remember me
