ಭೋಪಾಲ್: ಮದುವೆ ಎನ್ನುವುದು ತುಂಬಾ ಸೂಕ್ಷ್ಮ ವಿಷಯ. ಅದರಲ್ಲಿಯೂ ಹೊಸ ಪರಿಚಯದಲ್ಲಿ ಮದುವೆಯಾಗಬೇಕೆಂದರೆ ಒಬ್ಬರನ್ನೊಬ್ಬರು ಅರಿಯುವ ಮುನ್ನ ತುಂಬಾ ಜಾಗರೂಕರಾಗಿರಬೇಕು. ಏಕೆಂದರೆ ಯಾರ ಟೇಸ್ಟ್​ ಯಾವ ರೀತಿ ಇರುತ್ತದೆಯೋ ಎಂದು ಮೊದಲೇ ತಿಳಿದುಕೊಳ್ಳುವುದು ಕಷ್ಟ.
ಈಗಂತೂ ಮದುವೆ ಫಿಕ್ಸ್​ ಆದ ತಕ್ಷಣ ಭಾವಿ ಪತಿ-ಪತ್ನಿ ಮೆಸೇಜ್​ಗಳನ್ನು ಕಳುಹಿಸಿಕೊಳ್ಳುವುದು ಮಾಮೂಲು. ಕೆಲವೊಂದು ತಮಾಷೆ ಎನಿಸುವ ಜೋಕ್​ಗಳನ್ನೂ ಫಾರ್ವರ್ಡ್​ ಮಾಡುತ್ತಾರೆ. ಆದರೆ ಇದೇ ಜೋಕ್​ ಇಲ್ಲೊಂದು ವಿವಾಹವನ್ನು ಅಲ್ಲೋಲ ಕಲ್ಲೋಲ ಮಾಡಿ ಕೌಟುಂಬಿಕ ಕೋರ್ಟ್​ವರೆಗೂ ಹೋಗಿಬಂತು.
ಇದು ನಡೆದಿರುವುದು ಭೋಪಾಲ್​ನಲ್ಲಿ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಗಂಡಸರು ಅಡುಗೆ ಮಾಡುವಂಥ ಜೋಕ್​ಗಳು ಈಗ ವಾಟ್ಸ್​ಆ್ಯಪ್​ಗಳಲ್ಲಿ ಸಾಕಷ್ಟು ಹರಿದಾಡುತ್ತಿವೆ. ಅದೇ ರೀತಿ ಗಂಡ ಯಾವತ್ತೂ ಹೆಂಡತಿಯ ಗುಲಾಮನೇ ಎಂಬ ಜೋಕ್​ಗಳು ಸಾಕಷ್ಟು ಹಿಂದಿನಿಂದ ಕೇಳಿಕೊಂಡು ಬಂದಿದ್ದೇವೆ. ವಾಸ್ತವ ಏನೇ ಇದ್ದರೂ ಈ ಕುರಿತು ಬಗೆಬಗೆ ಜೋಕ್​ಗಳು ಮಾತ್ರ ನಗು ಉಕ್ಕಿಸುವುದು ದಿಟ.
ಇದನ್ನೂ ಓದಿ:ತಿರುಪತಿ ಭಕ್ತರ ಆಕ್ರೋಶಕ್ಕೆ ಮಣಿದ ಆಂಧ್ರ ಸರ್ಕಾರ: ಆಸ್ತಿ ಹರಾಜಿಗೆ ತಡೆ
ಇಂಥದ್ದೇ ಒಂದು ಜೋಕ್​ ಅನ್ನು ಯುವತಿಯೊಬ್ಬಳು ತನ್ನ ಭಾವಿ ಪತಿಗೆ ಕಳುಹಿಸಿದಳು. ಮದುವೆಯಾದ ಗಂಡ ಹೆಂಡತಿಯ ಗುಲಾಮನಾಗಿರುತ್ತಾನೆ ಎಂಬ ಅರ್ಥದಲ್ಲಿ ಈ ಜೋಕ್​ ಇತ್ತು. ಮದುವೆಯಾದ ಮೇಲೆ ಗಂಡನು ಹೆಂಡತಿಯ ಗುಲಾಮನಂತೆ ಕೆಲಸ ಮಾಡುವ ತಮಾಷೆಯ ವೀಡಿಯೋ ಅದಾಗಿತ್ತು.
ಅದನ್ನು ನೋಡಿದ ವರ, ನಾನು ಅಂತಹ ವರ್ಗಕ್ಕೆ ಸೇರಿದವನಲ್ಲ ಎಂದು ಸ್ವಲ್ಪ ಮುನಿಸಿನಿಂದ ರಿಪ್ಲೈ ಮಾಡಿದ. ಇದನ್ನು ನೋಡಿದ ಯುವತಿಯ ಸಿಟ್ಟು ನೆತ್ತಿಗೇರಿಬಿಟ್ಟಿದೆ. ಇಂಥ ಗಂಡ ನನಗೆ ಬೇಡವೇ ಬೇಡ ಎಂದು ಅವಳು ಮದುವೆಯನ್ನು ಕ್ಯಾನ್ಸಲ್​ ಮಾಡಿಬಿಟ್ಟಳು. ಮೇ 20ರಂದು ಇವರ ವಿವಾಹ ನಿಶ್ಚಯವಾಗಿತ್ತು. ಏನು ಮಾಡಿದರೂ ಹುಡುಗಿ ಮಾತ್ರ ಮದುವೆಗೆ ಸುತರಾಂ ಒಪ್ಪಲಿಲ್ಲ.
ನಂತರ ಇಷ್ಟು ಚಿಕ್ಕ ವಿಷಯಕ್ಕೆ ಮದುವೆ ರದ್ದು ಮಾಡುವುದು ಸರಿಯಲ್ಲ ಎಂದು ಮನೆಯವರು ಹೇಳಿದಾಗ, ಯುವತಿ ಒತ್ತಾಯದ ಮದುವೆ ಮಾಡುತ್ತಿರುವುದಾಗಿ ಕೌಟುಂಬಿಕ ಕೋರ್ಟ್​ಗೆ ಹೋದಳು. ಎಲ್ಲ ವಿಷಯ ಕೇಳಿದ ಮೇಲೆ ನ್ಯಾಯಾಧೀಶರು ಯುವತಿ ಮತ್ತು ಯುವಕನನ್ನು ಕರೆದು ಆಪ್ತ ಸಮಾಲೋಚನೆ ನಡೆಸಿದರು.
ಇದನ್ನೂ ಓದಿ:ಆರೋಗ್ಯವಾಗಿದ್ದ ಮದುಮಗಳಿಗೆ ವೈದ್ಯರು ಕೊಟ್ಟರು ಕರೊನಾ ಪಾಸಿಟಿವ್ ರಿಪೋರ್ಟ್​​: ಮುಂದೇನಾಯ್ತು?
ಯುವತಿಯ ಕೋಪವನ್ನು ತಣ್ಣಗಾಗಿಸಿದರು. ಭಾವಿ ಪತಿಯ ಪ್ರತಿಕ್ರಿಯೆ ನನಗೆ ಬಹಳ ನೋವು ಉಂಟುಮಾಡಿತ್ತು ಎಂದಳು ಯುವತಿ. ನಂತರ ಯುವಕ, ತಾನು ಕೋಪ ಮಾಡಿಕೊಂಡಿದ್ದು ಸರಿಯಲ್ಲ ಎಂದು ಹೇಳಿ, ಬಹಿರಂಗವಾಗಿ ಕ್ಷಮೆ ಕೋರಿದ.
‘ಮೈ ಜೋರು ಕಾ ಗುಲಾಮ್ ಬಂಕೆ ರಾಹುಂಗಾ’ (ನಾನು ಗುಲಾಮನಾಗಿಯೇ ಇರುತ್ತೇನೆ) ಎಂದು ತಮಾಷೆಯಾಗಿ ಹೇಳಿದಾಗ ಯುವತಿಯೂ ನಾಚಿ ನೀರಾದಳು. ಈಗ ಮದುವೆಯನ್ನು ಜೂನ್ 10ಕ್ಕೆ ನಿಗದಿ ಮಾಡಲಾಗಿದೆ!
ಸಿರಿವಂತ ವಿದೇಶಿ ಹುಡುಗನೆಂದು ನಂಬಿ ಐದೂವರೆ ಲಕ್ಷ ಕಳಕೊಂಡ ಬೆಂಗಳೂರು ಮಹಿಳೆ!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × 5 =
Remember me
