ನವದೆಹಲಿ:ಒಂದು ವರ್ಷದೊಳಗೆ ದೇಶವು ಮಧ್ಯಂತರ ಸಾರ್ವತ್ರಿಕ ಚುನಾವಣೆಗೆ ಸಾಕ್ಷಿಯಾಗಲಿದೆ ಎಂದು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಭವಿಷ್ಯ ನುಡಿದಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರು ನರೇಂದ್ರ ಮೋದಿ ಅವರನ್ನು ತಮ್ಮ ನಾಯಕ ಮತ್ತು ಮುಂದಿನ ಪ್ರಧಾನಿಯಾಗಿ ಆಯ್ಕೆ ಮಾಡಿದ ದಿನದಂದೇ ಬಘೇಲ್ ಅವರ ಈ ಹೇಳಿಕೆಗಳು ಇದೀಗ ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ:ಸ್ಟೇಡಿಯಂನಲ್ಲಿ ಜನರ ಮಧ್ಯೆ ಧೋನಿ? ಇದೇನಿದು ಆಶ್ಚರ್ಯ! ವೈರಲ್ ವಿಡಿಯೋ ಕಂಡು ದಂಗಾದ್ರು ನೆಟ್ಟಿಗರು
“ಪಕ್ಷದ ಕಾರ್ಯಕರ್ತರೆ ಸಿದ್ಧರಾಗಿರಿ. ಆರು ತಿಂಗಳಿಂದ ಒಂದು ವರ್ಷದೊಳಗೆ ಮಧ್ಯಂತರ ಚುನಾವಣೆ ಸಂಭವಿಸಲಿದೆ” ಎಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಭೂಪೇಶ್ ಬಘೇಲ್​, ತಮ್ಮ ಭಾಷಣದಲ್ಲಿ, ಹಿರಿಯ ಕಾಂಗ್ರೆಸ್ ನಾಯಕ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಭಜನ್ ಲಾಲ್ ಶರ್ಮಾ ಮತ್ತು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದರು.
“ಯೋಗಿ ಆದಿತ್ಯನಾಥ್ ಕುರ್ಚಿ ಈಗಾಗಲೇ ಅಲುಗಾಡಲು ಪ್ರಾರಂಭಿಸಿದೆ. ಭಜನ್ ಲಾಲ್ ಶರ್ಮಾ ಮತ್ತು ಫಡ್ನವಿಸ್​ ಕೂಡ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ” ಎಂದರು. ಇನ್ನು ಪ್ರಧಾನಿಯನ್ನು ಲೇವಡಿ ಮಾಡಿದ ಮಾಜಿ ಸಿಎಂ, “ಒಂಟೆಯೊಂದು ಇದೀಗ ಪರ್ವತದ ಕೆಳಗೆ ಬಂದು ನಿಂತಿದೆ. ದಿನಕ್ಕೆ ಮೂರು ಬಾರಿ ಬಟ್ಟೆ ಬದಲಾಯಿಸುತ್ತಿದ್ದವರು ಈಗ ಒಂದೇ ಉಡುಪಿನಲ್ಲಿ ಮೂರು ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದ್ಯಾವುದು ಸಹ ಇರುವುದಿಲ್ಲ” ಎಂದು ಹೇಳಿದ್ದಾರೆ,(ಏಜೆನ್ಸೀಸ್).
ಚಂದನ್ ಶೆಟ್ಟಿ ಮತ್ತು ನಾನು… ವಿಚ್ಛೇದನದ ಬಗ್ಗೆ ಕಡೆಗೂ ಮೌನ ಮುರಿದ ನಿವೇದಿತಾ ಗೌಡ

ಸ್ಟೇಡಿಯಂನಲ್ಲಿ ಜನರ ಮಧ್ಯೆ ಧೋನಿ? ಇದೇನಿದು ಆಶ್ಚರ್ಯ! ವೈರಲ್ ವಿಡಿಯೋ ಕಂಡು ದಂಗಾದ್ರು ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − three =
Remember me
