ಕೊಚ್ಚಿ:ಸಾಕಷ್ಟು ಅಡಚಣೆಗಳನ್ನು ಮೆಟ್ಟಿನಿಂತು ಮೊನ್ನೆಯಷ್ಟೇ (ಫೆ.8) ಮಗುವಿಗೆ ಜನ್ಮ ನೀಡಿದ ಕೇರಳ ಮೂಲದ ತೃತೀಯಲಿಂಗಿ ದಂಪತಿಗೆ ಮತ್ತೊಂದು ಅಡ್ಡಿ ಮತ್ತು ಗೊಂದಲ ಎದುರಾಗಿದೆ. ಅದೇನೆಂದರೆ, ಸರ್ಕಾರಿ ದಾಖಲೆಗಳಲ್ಲಿ ಮಗುವಿನ ತಂದೆ ಮತ್ತು ತಾಯಿ ಯಾರಾಗಬೇಕು ಎಂಬುದು.
ಇಂದು ಜಿಯಾ ಪೊವೆಲ್, ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಕಾಲೇಜಿನ ತಾಯಿ ಮತ್ತು ಮಕ್ಕಳ ಆರೋಗ್ಯ ಸಂಸ್ಥೆಯ ಅಧೀಕ್ಷಕರಿಗೆ ಅರ್ಜಿ ಸಲ್ಲಿಸಲಿದ್ದು, ಮಗುವಿಗೆ ಜನ್ಮ ನೀಡಿದ ಜಹಾದ್ ಫಾಜಿಲ್​ ಅವರನ್ನು ತಂದೆಯನ್ನಾಗಿ ಮತ್ತು ತನ್ನನ್ನು ತಾಯಿಯನ್ನಾಗಿ ಸೇರಿಸಲು ಜಿಯಾ ಕೋರಿಕೊಳ್ಳಲಿದ್ದಾರೆ.
ಕೇಂದ್ರ ಸರ್ಕಾರದಿಂದ ಕೊಡಮಾಡುವ ತೃತೀಯಲಿಂಗಿ ಗುರುತಿನ ಚೀಟಿಯನ್ನು ನಾವು ಹೊಂದಿದ್ದೇನೆ. ಜಹಾದ್ ಮಗುವಿಗೆ ಜನ್ಮ ನೀಡಿದರು ಕೂಡ ಆತನೇ ತಂದೆಯಾಗಿರಬೇಕು. ಇದರು ನಮ್ಮಿಬ್ಬರ ಆಸೆಯು ಹೌದು. ಉಳಿವಿಗಾಗಿ ಹೋರಾಟ ಎಂಬಂತೆ ನಾವು ಪ್ರತಿ ಬಾಗಿಲು ಬಡಿಯಲು ರೆಡಿಯಾಗಿದ್ದೇವೆ. ಅಗತ್ಯಬಿದ್ದರೆ ಕಾನೂನು ಹೋರಾಟ ಸಿದ್ಧರಿದ್ದೇವೆ ಎಂದು ಜಿಯಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಗು ಜನಿಸಿರುವುದು ನಮಗೆ ಅತೀವ ಸಂತಸ ತಂದಿದೆ. ಸಿಹಿ ಕೊಡಲು ಹೋದಾಗ ಮೆಡಿಕಲ್ ಕಾಲೇಜು ಅಧೀಕ್ಷಕರಿಗೆ ನಾವು ಮೊಟ್ಟ ಮೊದಲು ಮಾಡಿದ ಮನವಿ ಏನೆಂದರೆ, ದಾಖಲೆಗಳಲ್ಲಿ ಜಹಾದ್​ನನ್ನು ತಂದೆ ಎಂದು ಸೇರಿಸಬೇಕೆನ್ನುವುದು. ಆಸ್ಪತ್ರೆಯ ಅಧಿಕಾರಿಗಳು ಮತ್ತು ಆರೋಗ್ಯ ಸಚಿವರು ಈ ವಿಷಯದಲ್ಲೂ ನಮಗೆ ಬೆಂಬಲ ನೀಡುತ್ತಾರೆ ಎಂದು ನಾನು ನಂಬುತ್ತೇನೆ ಎಂದು ಜಿಯಾ ತಿಳಿಸಿದರು.
ಹೆಣ್ಣಾಗಿ ಹುಟ್ಟಿ ಪುರುಷನಾಗಿ ಬದಲಾದ ಜಹಾದ್ ಮತ್ತು ಪುರುಷನಾಗಿ ಹುಟ್ಟಿ ಹೆಣ್ಣಾಗಿಯೇ ಬದುಕು ನಡೆಸುತ್ತಿರುವ ಜಿಯಾ, ಬುಧವಾರ ಬೆಳಗ್ಗೆ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿನ ಜನ್ಮ ನೀಡಿದರು. ತೃತೀಯಲಿಂಗಿಗಳ ಪಟ್ಟಿಯಲ್ಲಿದ್ದರೂ, ಅವರಿಬ್ಬರೂ ಸಂಪೂರ್ಣವಾಗಿ ಜೈವಿಕ ಪರಿವರ್ತನೆಗೆ ಒಳಗಾಗಿರಲಿಲ್ಲ. ಸದ್ಯ ಇಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ.
ಜಹಾದ್​​ ಫಾಜಿಲ್​​​ 8 ತಿಂಗಳ ಗರ್ಭ ಧರಿಸಿರುವುದಾಗಿ ಇತ್ತೀಚೆಗಷ್ಟೇ ಜಿಯಾ ಪೋವೆಲ್​ ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದರು. ತಾಯಿಯಾಗುವ ನನ್ನ ಕನಸಿನಂತೆ, ತಂದೆಯಾಗುವ ಅವನ ಕನಸಿನಂತೆ, ನಮ್ಮ ಸ್ವಂತದ ಹಂಬಲವೂ ಈಡೇರುತ್ತಿದೆ ಎಂದು ಬರೆದುಕೊಂಡಿದ್ದರು. ಅಂದಹಾಗೆ ಜಿಯಾ ಪೊವೆಲ್ ಓರ್ವ ಖ್ಯಾತ ಡಾನ್ಸರ್​. ಕೇರಳದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ತಮ್ಮ ಜೀವನ ಸಂಗಾತಿ ಜಹಾದ್ ಫಾಜಿಲ್ ಜೊತೆ ಮಗು ಹೊಂದುವುದರೊಂದಿಗೆ ಕೇರಳದಲ್ಲಿ ಮತ್ತೊಮ್ಮೆ ಭಾರಿ ಸುದ್ದಿಯಾಗಿದ್ದಾರೆ.(ಏಜೆನ್ಸೀಸ್​)
ಮಗುವಿಗೆ ಜನ್ಮ ನೀಡಿದ ಕೇರಳದ ತೃತೀಯಲಿಂಗಿ ದಂಪತಿ! ಇದು ದೇಶದಲ್ಲೇ ಮೊದಲ ಪ್ರಕರಣ

ಇಡಿ ಬಲೆಯಲ್ಲಿ ಸುಂದರಿ! ನಟಿಯಾಗಿ ಬದಲಾದ ಮಾಜಿ ತೆರಿಗೆ ಅಧಿಕಾರಿಯ ಮಹಾ ವಂಚನೆ ಬಯಲು

ಚಲಿಸುತ್ತಿದ್ದ ಬೈಕ್​ ಮೇಲೆ ಮಧ್ಯರಾತ್ರಿ ಪ್ರೇಮಿಗಳಿಬ್ಬರ ರೊಮ್ಯಾನ್ಸ್​! ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
