ಮುಂಬೈ :ದೇಶದಲ್ಲಿ ಅತಿಹೆಚ್ಚು ಕರೊನಾ ಪ್ರಕರಣಗಳನ್ನು ವರದಿ ಮಾಡುತ್ತಿರುವ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ 10 ಐಪಿಎಲ್ ಕ್ರಿಕೆಟ್ ಪಂದ್ಯಗಳನ್ನು ಬಿಸಿಸಿಐ ಆಯೋಜಿಸಿದೆ. ಆದರೆ ಒಬ್ಬ ಆಟಗಾರ, 7 ಬೋರ್ಡ್​ ಸಿಬ್ಬಂದಿ ಮತ್ತು ವಾಂಖೆಡೆ ಸ್ಟೇಡಿಯಂನ 10 ಗ್ರೌಂಡ್ ಸಿಬ್ಬಂದಿಗೆ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದೇ ಎಂಬ ಪ್ರಶ್ನೆಗಳು ಕ್ರೀಡಾ ವಲಯದಲ್ಲಿ ಮೂಡಿವೆ.
ಐಪಿಎಲ್ ಪಂದ್ಯಾವಳಿಯಲ್ಲಿ ಎರಡನೇ ಪಂದ್ಯವಾದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವಿನ ಪಂದ್ಯ, ಏಪ್ರಿಲ್ 10 ರಂದು ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಏರ್ಪಟ್ಟಿದೆ. ಆದರೆ, ಕರೊನಾ ಆತಂಕಕಾರಿ ಸನ್ನಿವೇಶ ಸೃಷ್ಟಿಸಿದ್ದು, ಮುಂಬೈನಲ್ಲಿ ನಿನ್ನೆ ಒಂದೇ ದಿನದಲ್ಲಿ 9,000 ಹೊಸ ಕರೊನಾ ಪ್ರಕರಣಗಳು ವರದಿಯಾಗಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್​ರೌಂಡರ್ ಅಕ್ಸರ್ ಪಟೇಲ್​ಗೆ ಕರೊನಾ ಪಾಸಿಟೀವ್ ಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್​ನ ಸಿಬ್ಬಂದಿಯೊಬ್ಬರಿಗೆ ಪಾಸಿಟೀವ್ ಬಂದಿದೆ ಎನ್ನಲಾಗಿದೆ.
ಇದನ್ನೂ ಓದಿ:ಸಚಿನ್ ತೆಂಡುಲ್ಕರ್​ ಅವರ ಹೊಸ ವಿಡಿಯೋ ನೋಡಿದ್ದೀರಾ ?!
ಆದರೆ, ಈ ಅಂತಿಮ ಕ್ಷಣಗಳಲ್ಲಿ ಪಂದ್ಯವನ್ನು ಬೇರೆ ಜಾಗಕ್ಕೆ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. “ಈಗ ಪಂದ್ಯವನ್ನು ಬೇರೆ ಕಡೆ ನಡೆಸಬೇಕೆಂದರೆ, ಮತ್ತೆ ಅಲ್ಲಿ ಬಯೋಬಬಲ್​ ರಚಿಸಬೇಕಾಗುತ್ತದೆ. ತಂಡಗಳು ಕೂಡ ಒಂದು ನಗರದಿಂದ ಇನ್ನೊಂದಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಇದಕ್ಕಾಗಿ ನಮ್ಮ ಬಳಿ ಸಮಯವಿಲ್ಲ ಮತ್ತು ಹೆಲ್ತ್ ರಿಸ್ಕ್​ ಕೂಡ. ಆದ್ದರಿಂದ ಪಂದ್ಯಗಳನ್ನು ಮುಂಬೈನಲ್ಲೇ ಆಡಲಾಗುವುದು. ಎಲ್ಲರ ಸುರಕ್ಷೆಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ” ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ ಎನ್ನಲಾಗಿದೆ.
ಬಿಸಿಸಿಐ ತನ್ನ ಕಚೇರಿಯನ್ನು ತಾತ್ಕಾಲಿಕವಾಗಿ ಮುಂಬೈನ ಒಂದು ಹೋಟೆಲ್​ಗೆ ಶಿಫ್ಟ್​ ಮಾಡಿದ್ದು, ಬಯೋಬಬಲ್ ಇಂಟಿಗ್ರಿಟಿ ಮ್ಯಾನೇಜರ್​ಗಳನ್ನು ನೇಮಕ ಮಾಡಿದೆ. ಏಪ್ರಿಲ್ 10 ರ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯ ಗ್ರೌಂಡ್ ಸ್ಟಾಫ್​ಅನ್ನು ಕರೆಸಿಕೊಳ್ಳಲಾಗುವುದು ಎನ್ನಲಾಗಿದೆ. ಐಪಿಎಲ್​ನ ಮೊದಲ ಪ್ರಾಕ್ಟೀಸ್ ಸೆಷನ್ ವಾಂಖೇಡೆ ಸ್ಟೇಡಿಯಂನಲ್ಲಿ ಏಪ್ರಿಲ್ 7 ಕ್ಕೆ ನಡೆಯಲಿದೆ.(ಏಜೆನ್ಸೀಸ್)
ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಜನ್ಮದಿನಕ್ಕೆ ಸ್ವಿಸ್ ಜನರ ಕಾಣಿಕೆ ಏನು ಗೊತ್ತೆ ?!
ಬೇಸಿಗೆ ರಜೆಯಲ್ಲಿ ನವೀನ ಅವಕಾಶ : ಶಾಲಾ ಮಕ್ಕಳಿಗಾಗಿ ‘ಇನ್ನೋವೇಷನ್ ಅವಾರ್ಡ್ 2021’ ಸ್ಪರ್ಧೆ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 7 =
Remember me
