ನವದೆಹಲಿ:ಸದ್ಯ ದೆಹಲಿಯಲ್ಲಿ ಕರೊನಾ ಸೋಂಕಿನ ಆಟಾಟೋಪ ಮುಂದುವರಿದಿದೆ. ಇದರ ಮಧ್ಯೆ ಅಲ್ಲಿ ಕಳೆದ ಒಂದೂವರೆ ತಿಂಗಳಿಂದ ಲಘು ಭೂಕಂಪಗಳ ಸರಣಿಯೇ ಉಂಟಾಗಿದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ಅಲ್ಲಿ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಇದೆ ಎಂದು ಭೂಗರ್ಭಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ (ಜೂ.3) ಕೂಡ ನೋಯ್ಡಾದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಕ್ಕೂ ಮುನ್ನ ಏಪ್ರಿಲ್​ 12ರಿಂದ ಮೇ 29ರ ನಡುವೆ 10ಕ್ಕೂ ಹೆಚ್ಚುಬಾರಿ ಸರಣಿ ಲಘು ಭೂಕಂಪಗಳು ಸಂಭವಿಸಿದ್ದವು. ಈ ರೀತಿಯಾಗಿ ಸರಣಿ ಲಘು ಭೂಕಂಪಗಳು ಆದಾಗ ಮುಂದೆ ಪ್ರಬಲ ಭೂಕಂಪ ಆಗುವ ಸಂಭವ ಹೆಚ್ಚಾಗಿರುತ್ತದೆ ಎಂದು ಭೂಗರ್ಭಶಾಸ್ತ್ರಜ್ಞರು ವಿವರಿಸಿದ್ದಾರೆ.
ಇದನ್ನೂ ಓದಿ:ನಿಲ್ದಾಣ ಸ್ವಲ್ಪ ದೂರ ಇರುವಾಗಲೇ ತುರ್ತು ಸರಪಳಿ ಎಳೆದ ವಲಸೆ ಕಾರ್ಮಿಕರು ಅರೆಸ್ಟ್
ವಾಡಿಯಾ ಇನ್​ಸ್ಟಿಟ್ಯೂಟ್​ ಆಫ್​ ಹಿಮಾಲಯನ್​ ಜಿಯಾಲಜಿಯ ಮುಖ್ಯಸ್ಥ ಡಾ. ಕಾಲಚಂದ್​ ಸೈನ್​ ಈ ವಿಷಯ ತಿಳಿಸಿದ್ದು, ಎಂದು, ಎಲ್ಲಿ, ಎಷ್ಟೊತ್ತಿಗೆ, ಎಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸುತ್ತದೆ ಎಂದು ನಿಖರವಾಗಿ ಅಂದಾಜಿಸುವುದು ಕಷ್ಟ ಎಂದು ಹೇಳಿದ್ದಾರೆ.ರಾಷ್ಟ್ರರಾಜಧಾನಿ ನವದೆಹಲಿ ಫಾಲ್ಟ್​ 4ರ ವಲಯದಲ್ಲಿ ಸ್ಥಿತವಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ನಿರಂತರವಾಗಿ ಭೂಕಂಪಗಳು ಸಂಭವಿಸುತ್ತಲೇ ಇರುತ್ತವೆ.
ಭಾರಿ ಆಸ್ತಿ, ಪ್ರಾಣ ಹಾನಿ ನಿಶ್ಚಿತ:ನವದೆಹಲಿಯು ಭೂಕಂಪದ 4ನೇ ವಲಯದಲ್ಲಿ ಸ್ಥಿತವಾಗಿದೆ ನಿಜ. ಆದರೆ, ಒಂದು ವೇಳೆ ಪ್ರಬಲ ಭೂಕಂಪ ಏನಾದರೂ ಸಂಭವಿಸಿದರೆ, ಹೆಚ್ಚಿನ ಪ್ರಮಾಣದ ಆಸ್ತಿ ಮತ್ತು ಪ್ರಾಣ ಹಾನಿ ಸಂಭವಿಸುವುದು ನಿಶ್ಚಿತ ಎಂದು ಜಮ್ಮುವಿನ ಭಾರತೀಯ ತಾಂತ್ರಿಕ ಸಂಸ್ಥೆಯ (ಜೆಐಐಟಿ) ಪ್ರೊ. ಚಂದನ್​ ಘೋಷ್​ ಎಚ್ಚರಿಕೆ ನೀಡಿದ್ದಾರೆ.
ನವದೆಹಲಿ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಗಗನಚುಂಬಿ ಕಟ್ಟಡಗಳನ್ನು ಕಟ್ಟುತ್ತಿರುವ ಬಿಲ್ಡರ್​ಗಳು ಭೂಕಂಪ ತಾಳಿಕೊಳ್ಳುವ ರೀತಿಯಲ್ಲಿ ಭಾರತೀಯ ಮಾನಕ ಸಂಸ್ಥೆ (ಬಿಐಎಸ್​) ನಿಗದಿಪಡಿಸಿರುವ ಗುಣಮಟ್ಟವನ್ನು ಕಾಯ್ದುಕೊಳ್ಳದೇ ಹೋಗಿರುವುದು ಇದಕ್ಕೆ ಕಾರಣ ಎಂದು ವಿವರಿಸಿದ್ದಾರೆ.
ಸರ್ಕಾರದ ವಿಡಿಯೋ ಕಾನ್ಫರೆನ್ಸ್​ ವೇಳೆ ಟಾಪ್​ಲೆಸ್​ ಆದ ಮೆಕ್ಸಿಕೋ ಸಂಸದೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 1 =
Remember me
