ನವದೆಹಲಿ:ನೇಪಾಳದಲ್ಲಿ ಕೆ.ಪಿ. ಶರ್ಮ ಓಲಿ ನೇತೃತ್ವದ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ಸರ್ಕಾರವನ್ನು ಉಳಿಸಲು ಚೀನಾ ಶತಾಯಗತಾಯ ಪ್ರಯತ್ನಿಸುತ್ತಿದ್ದೆ. ಇದಕ್ಕಾಗಿ ಅದು ನೇಪಾಳದಲ್ಲಿನ ತನ್ನ ರಾಯಭಾರಿ ಹೌ ಯಾಂಕಿ ಅವರನ್ನು ಬಳಸಿಕೊಳ್ಳುತ್ತಿದೆ.
ಮಂಗಳವಾರದಿಂದ ಅಖಾಡಕ್ಕೆ ಇಳಿಸಿರುವ ಹೌ ಯಾಂಕಿ ಅವರು ನೇಪಾಳದ ಅಧ್ಯಕ್ಷೆ ಬಿದ್ಯಾ ಭಂಡಾರಿ ಸೇರಿ ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ವಿವಿಧ ಮುಖಂಡರ ಜತೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಓಲಿ ವಿರುದ್ಧ ಬಂಡಾಯ ಎದ್ದಿರುವವರನ್ನು ಓಲೈಸಲು ಶತಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎನ್ನಲಾಗಿದೆ.
ಚೀನಾಕ್ಕೆ ಪರಮಾಪ್ತರೆನಿಸಿರುವ ಕೆ.ಪಿ. ಓಲಿ ಕೂಡ ಪುಷ್ಪ ಕಮಾಲ್​ ಪ್ರಚಂಡಾ ಸೇರಿ ತಮ್ಮ ವಿರುದ್ಧ ಬಂಡಾಯ ಎದ್ದಿರುವವರನ್ನು ಓಲೈಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಇವರ ಈ ಪ್ರಯತ್ನಗಳು ಎಷ್ಟರ ಮಟ್ಟಿಗೆ ಸಫಲವಾಗಿವೆ ಎಂಬುದು ಬುಧವಾರ ನಿಗದಿಯಾಗಿರುವ ನೇಪಾಳ ಕಮ್ಯುನಿಷ್ಟ್​ ಪಾರ್ಟಿಯ ಸ್ಥಾಯಿ ಸಮಿತಿ ಸಭೆಯ ಆಗುಹೋಗುಗಳು ನಿರ್ಣಯಿಸಲಿವೆ.
ಇದನ್ನೂ ಓದಿ:ಚೀನಾ ವಿರುದ್ಧ ಸಮರಕ್ಕೆ ಅಮೆರಿಕ ಸೇನೆಯ ಬೆಂಬಲ ಭಾರತಕ್ಕೆ ಎಂದ ಟ್ರಂಪ್‌
ಭಂಡಾರಿ ಅಲ್ಲದೆ ನೇಪಾಳದ ಪ್ರಭಾವಿ ನಾಯಕರು ಎನಿಸಿಕೊಂಡಿರುವ ಮಾಜಿ ಪ್ರಧಾನಿ ಮಾಧವ್​ ನೇಪಾಳ ಮತ್ತು ಝಾಲಾನಾಥ್​ ಖನಾಲ್​ ಅವರನ್ನೂ ಹೌ ಯಾಂಕಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಪುಷ್ಪ ಕಮಾಲ್​ ದಹಾಲ್​ ಪ್ರಚಂಡಾ ಅವರನ್ನೂ ಭೇಟಿಯಾಗಲು ಹೌ ಯಾಂಕಿ ಬಯಸಿದ್ದು, ಅದು ಇನ್ನೂ ಸಾಧ್ಯವಾಗಿಲ್ಲ ಎನ್ನಲಾಗಿದೆ.
ನೇಪಾಳ ಕಮುನಿಸ್ಟ್​ ಪಾರ್ಟಿಯ ಅತ್ಯಂತ ಪ್ರಭಾವಿ ಎನಿಸಿರುವ 44 ಸದಸ್ಯ ಬಲದ ಸ್ಥಾಯಿ ಸಮಿತಿಯಲ್ಲಿ 30 ಸದಸ್ಯರು ಓಲಿಯ ರಾಜೀನಾಮೆಗೆ ಒತ್ತಡ ಹೇರುತ್ತಿದ್ದಾರೆ. ಆದರೂ ಓಲಿ ಬಗ್ಗುತ್ತಿಲ್ಲ. ಹೀಗಾಗಿ ರಾಜೀನಾಮೆಗೆ ಒತ್ತಡ ಹೇರುವ ಜತೆಗೆ ಓಲಿಯನ್ನು ಕೆಳಗಿಳಿಸಲು ಪ್ರಚಂಡಾ, ನೇಪಾಳ್​ ಮತ್ತು ಖನಾಲ್​ರಂಥ ನಾಯಕರು ಇನ್ನೂ ಹೆಚ್ಚಿನ ರಾಜಕೀಯ ಕಾರ್ಯತಂತ್ರ ರೂಪಿಸುವ ಅವಶ್ಯಕತೆ ಇದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ.
ಒಂದು ವೇಳೆ ರಾಜೀನಾಮೆ ಕೊಡಬೇಕು ಎಂಬ ಪಕ್ಷದ ಸ್ಥಾಯಿ ಸಮಿತಿಯ ನಿರ್ಧಾರವನ್ನು ಓಲಿ ಪಾಲಿಸಲು ನಿರಾಕರಿಸಿದರೆ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಬಹುದಾಗಿದೆ. ಆದರೆ, ಪ್ರಚಂಡಾ ಮತ್ತಿತರರು ಈ ಕ್ರಮ ಕೈಗೊಳ್ಳುತ್ತಾರಾ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ:ವಿಶ್ವ ಆರೋಗ್ಯ ಸಂಸ್ಥೆಗೆ ಭಾರಿ ಆಘಾತ- ಸದಸ್ಯತ್ವದಿಂದ ಹಿಂದಕ್ಕೆ ಸರಿದ ಅಮೆರಿಕ
ಪಕ್ಷವನ್ನು ವಿಭಜಿಸಿದ ಆರೋಪವನ್ನು ಹೊತ್ತುಕೊಳ್ಳಲು ಯಾವೊಬ್ಬ ಮುಖಂಡರೂ ಸಿದ್ಧರಿಲ್ಲ. ಅಲ್ಲದೆ, ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳು ಮೇಲ್ನೋಟಕ್ಕೆ ತೋರುತ್ತಿರುವಂತೆ ತುಂಬಾ ಗಂಭೀರವಾದದ್ದೂ ಏನಲ್ಲ. ಕುಳಿತು ಚರ್ಚಿಸಿದರೆ ಅವು ಕ್ಷಣಾರ್ಧದಲ್ಲಿ ಬಗೆಹರಿಯುತ್ತವೆ ಎಂದು ನೇಪಾಳ ಕಮ್ಯುನಿಸ್ಟ್​ ಪಾರ್ಟಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಕೆ.ಪಿ. ಶರ್ಮ ಓಲಿ ಕೂಡ ಪಕ್ಷವನ್ನು ವಿಭಜಿಸಿ, ಪ್ರಮುಖ ಪ್ರತಿಪಕ್ಷ ನೇಪಾಳಿ ಕಾಂಗ್ರೆಸ್​ ಬೆಂಬಲದೊಂದಿಗೆ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವ ಚಿಂತನೆ ನಡೆಸಿದ್ದಾರೆ. ಆದರೆ, ಓಲಿ ಅವರ ಅಪ್ರಬುದ್ಧ ವಿದೇಶಾಂಗ ನೀತಿಯಿಂದಾಗಿ ನೆರೆಹೊರೆಯ ರಾಷ್ಟ್ರಗಳೊಂದಿಗೆ ನೇಪಾಳದ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ನೇಪಾಳಿ ಕಾಂಗ್ರೆಸ್​ ಕೂಡ ಓಲಿಯನ್ನು ಬೆಂಬಲಿಸಲು ಹಿಂದೇಟು ಹಾಕುತ್ತಿದೆ. ಜನತಾ ಸಮಾಜವಾದಿ ಪಕ್ಷದ ಮನೋಭಾವವೂ ಇದೇ ಆಗಿದೆ ಎನ್ನಲಾಗಿದೆ.
ವರ್ಕ್ ಫ್ರಮ್ ಹೋಂ ನೀತಿಗೆ ಹೆಚ್ಚಿದ ಒತ್ತಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − seven =
Remember me
