ನವದೆಹಲಿ:ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣಗಳಲ್ಲಿ ಹಿಡಿತ ಸಾಧಿಸುವ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಹಾಗೂ ಓಟಿಟಿಗಳಿಗೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗದರ್ಶಿ ಸಂಪೂರ್ಣವಾಗಿ ಜಾರಿಗೆ ಬಂದರೆ ವಾಟ್ಸ್​ಆ್ಯಪ್​, ಟೆಲಿಗ್ರಾಂ ಸೇರಿ ಅನೇಕ ಆ್ಯಪ್​ಗಳಿಗೆ ಹೊಡೆತ ಬೀಳಲಿದೆ ಎನ್ನಲಾಗಿದೆ.
ಒಂದು ವೇಳೆ ಯಾವುದೇ ಸಂದೇಶ ಭಾರತದ ಮೂಲದ್ದಲ್ಲದೇ ಬೇರೆ ದೇಶದಿಂದ ಭಾರತೀಯರಿಗೆ ಬಂದ್ದಿದ್ದರೆ, ಆ ಸಂದೇಶ ಯಾವ ಭಾರತೀಯನಿಗೆ ಮೊದಲು ಬಂದಿದೆ ಎನ್ನುವ ಮಾಹಿತಿಯನ್ನು ಆ್ಯಪ್​ಗಳು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ದೇಶದ ಸಮಗ್ರತೆ, ರಕ್ಷಣೆಯ ದೃಷ್ಟಿಯಿಂದ ಇದು ಅವಶ್ಯಕ ಎಂದು ತಿಳಿಸಲಾಗಿದೆ. ಆದರೆ ವಾಟ್ಸ್​ಆ್ಯಪ್​ ಸಂಸ್ಥೆಯು ಈ ಹಿಂದೆಯೇ ಇಂತಹ ಬೇಡಿಕೆಯನ್ನು ನಿರಾಕರಿಸಿತ್ತು. ನಮ್ಮ ಗ್ರಾಹಜಕರಿಗೆ ನಾವು ಎಂಡ್​ ಟು ಎಂಡ್​ ಎನ್​​ಕ್ರಿಪ್ಟೆಡ್​ ಸರ್ವೀಸ್​ ಕೊಡುತ್ತಿದ್ದೇವೆ. ಹಾಗಿದ್ದ ಮೇಲೆ ಯಾರು ಸಂದೇಶ ಕಳುಹಿಸಿದ್ದಾರೆ ಅಥವಾ ಯಾರಿಗೆ ಸಂದೇಶ ಹೋಗಿದೆ ಎನ್ನುವ ಮಾಹಿತಿ ನೀಡಿದರೆ ನಮ್ಮ ಸಂಸ್ಥೆಯ ಪಾಲಿಸಿಗೆ ನಾವು ಮೋಸ ಮಾಡಿದಂತಾಗುತ್ತದೆ ಎಂದು ವಾಟ್ಸ್​ಆ್ಯಪ್​ ಹೇಳಿತ್ತು.
ಹಾಗಿದ್ದರೂ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ತಾವು ಯಾವುದೇ ಆ್ಯಪ್​ನ ಎಂಡ್​ ಟು ಎಂಡ್​ ಎನ್​ಕ್ರಿಪ್ಷನ್​ಗೆ ತೊಂದರೆಯನ್ನುಂಟು ಮಾಡಲು ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಾವು ಸಂದೇಶ ಯಾವುದೆಂದು ಕೇಳುತ್ತಿಲ್ಲ ಬದಲಾಗಿ ಆ ರೀತಿಯ ಸಂದೇಶ ಯಾರಿಗೆ ಬಂದಿದೆ ಎನ್ನುವುದನ್ನು ಮಾತ್ರವೇ ಕೇಳುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಇದೀಗ ಮಾಡಲಾಗಿರುವ ಮಾರ್ಗಸೂಚಿಗಳಿಗೆ ವಾಟ್ಸ್​ಆ್ಯಪ್​ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ಕಾದು ನೋಡಬೇಕು. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಸೋಶಿಯಲ್ ಮೀಡಿಯಾಗಳಿಗೆ ಹಾಗೂ OTTಗೆ ಹೊಸ ಮಾರ್ಗದರ್ಶಿ ಸೂತ್ರಗಳು: ಪಟ್ಟಿ ಇಲ್ಲಿದೆ ನೋಡಿ…

ಕೇರಳದಲ್ಲಿ ಎಸ್​ಡಿಪಿಐ ಗೂಂಡಾಗಿರಿಗೆ ಆರ್​ಎಸ್​ಎಸ್​ ಕಾರ್ಯಕರ್ತ ಬಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − nine =
Remember me
