ಬೆಂಗಳೂರು:ವಾಟ್ಸ್​ಆ್ಯಪ್​ನ ಖಾಸಗಿತನಕ್ಕೆ ಸಂಬಂಧಿಸಿದ ಹೊಸ ನಿಯಮದ ಬಗ್ಗೆ ಪೂರ್ತಿ ವಿಶ್ವವೇ ಪ್ರಶ್ನೆ ಕೇಳಿದೆ. ವಾಟ್ಸ್​ಆ್ಯಪ್​ನಲ್ಲಿ ಪ್ರೈವಸಿ ಮರೆಯಾಗಬಹುದು ಎನ್ನುವ ಭಯದಿಂದ ಅನೇಕರು ವಾಟ್ಸ್​ಆ್ಯಪ್​ ತ್ಯಜಿಸಿ, ಸಿಗ್ನಲ್​, ಟೆಲಿಗ್ರಾಂನಂತಹ ಪರ್ಯಾಯ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳಲಾರಂಭಿಸಿದ್ದಾರೆ. ಹೊಸ ಪಾಲಿಸಿಗೆ ಒಪ್ಪದಿದ್ದರೆ ಫೆಬ್ರವರಿ 8ಕ್ಕೆ ನಿಮ್ಮ ವಾಟ್ಸ್​ಆ್ಯಪ್​ ಸೇವೆ ಸ್ಥಗಿತವಾಗಲಿದೆ ಎಂದು ಈ ಹಿಂದೆ ಸಂಸ್ಥೆ ತಿಳಿಸಿತ್ತು. ನಾವು ಹೊಸ ನಿಯಮಕ್ಕೆ ಒಪ್ಪಿಲ್ಲ ಹಾಗಾದರೆ ನಮ್ಮ ವಾಟ್ಸ್​ಆ್ಯಪ್​ ಫೆ.8ಕ್ಕೆ ಕೊನೆಯಾಗುತ್ತದೆಯೇ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ವಾಟ್ಸ್​ಆ್ಯಪ್​ ತನ್ನ ನೂತನ ನಿಯಮದಿಂದಾಗಿ ಪೂರ್ತಿ ಜಗತ್ತಿನಿಂದಲೇ ಛೀಮಾರಿ ಹಾಕಿಸಿಕೊಂಡಿದೆ. ಅದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸಂಸ್ಥೆ ಫೆ. 8ಕ್ಕೆ ಸೇವೆ ಸ್ಥಗಿತ ಮಾಡುವ ನಿಯಮವನ್ನು ಕೈ ಬಿಟ್ಟಿದೆ. ಮೇ 15ರವರೆಗೆ ಯಾರ ಮೊಬೈಲ್​ನಲ್ಲೂ ವಾಟ್ಸ್​ಆ್ಯಪ್​ ಸೇವೆ ಸ್ಥಗಿತವಾಗುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
ನಮ್ಮ ಹೊಸ ನಿಯಮದ ಬಗ್ಗೆ ಅನೇಕ ಊಹಾಪೋಹಗಳು ಶುರುವಾಗಿದೆ. ಜನರಿಗೆ ನಿಯಮದ ಬಗ್ಗೆ ಇರುವ ಅಪನಂಬಿಕೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲ ಗೊಂದಲಗಳನ್ನು ನೀಗಿಸುವ ಪ್ರಯತ್ನದಲ್ಲಿದ್ದೇವೆ. ಸದ್ಯಕ್ಕೆ ಸೇವೆ ಸ್ಥಗಿತವಾಗುವುದಿಲ್ಲ. ಮೆ 15ರವರೆಗೆ ಈ ಹಿಂದಿನ ನಿಯಮವೇ ಇರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. (ಏಜೆನ್ಸೀಸ್​)
ಕೊನೆಯುಸಿರೆಳೆವ ಮುನ್ನ ಐವರಿಗೆ ಹೊಸ ಜೀವನ ಕೊಟ್ಟ 20 ತಿಂಗಳ ಮಗು

ಮದುವೆಯಾಗೋಕೆ ವರ್ಜಿನಿಟಿ ಟೆಸ್ಟ್ ಮಾಡಿಸಲೇಬೇಕು! ಈ ರಾಷ್ಟ್ರದಲ್ಲಿದೆ ವಿಚಿತ್ರ ರೂಲ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 5 =
Remember me
