ನವದೆಹಲಿ:ಸತಿ-ಪತಿ ಕಲಹ ದಾಂಪತ್ಯದಲ್ಲಿ ಸಹಜ. ಗಂಡ-ಹೆಂಡತಿ ನಡುವೆ ಜಗಳ ಇಲ್ಲದಿದ್ದರೆ ಅಲ್ಲಿ ಪ್ರೀತಿಯೇ ಇರುವುದಿಲ್ಲ ಎಂದು ಹೇಳುತ್ತಾರೆ. ಸಾಕಷ್ಟು ವಿಚಾರಗಳಿಗೆ ಇಬ್ಬರು ಕಿತ್ತಾಡಬಹುದು ಮತ್ತು ಮುನಿಸಿಕೊಳ್ಳಲುಬಹುದು. ಆದರೆ, ಇಬ್ಬರಲ್ಲಿ ಯಾರಿಗೆ ತೊಂದರೆ ಎದುರಾದರು ಕೂಡ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ. ಅದರಲ್ಲೂ ಗಂಡನ ವಿಚಾರಕ್ಕೆ ಯಾರಾದರೂ ಬಂದರೆ ಪತ್ನಿ ಹೆಮ್ಮಾರಿ ಆಗಿಬಿಡುತ್ತಾಳೆ. ಹೀಗಿರುವಾಗ ಗಂಡನ ಮೇಲೆ ಕೈ ಮಾಡಿದರೆ ಸುಮ್ಮನಿರುತ್ತಾಳಾ? ಸಾಧ್ಯವೇ ಇಲ್ಲ. ಇತ್ತೀಚೆಗಷ್ಟೇ ಮಹಿಳೆಯೊಬ್ಬರು ವೈನ್​ ಶಾಪ್​ನಲ್ಲಿ ಪತಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗೆ ಚಳಿಬಿಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್​ ಆಗುತ್ತಿದೆ.
ಹೈದರಾಬಾದ್‌ನ ಮಧುರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ರಮೇಶ್ ಎಂಬುವರು ಮದ್ಯ ಖರೀದಿಸಲು ಮಧುರಾನಗರದ ವೈನ್ ಶಾಪ್‌ಗೆ ಹೋಗಿದ್ದರು. ಆದರೆ, ಹಣ ಪಾವತಿ ವಿಚಾರವಾಗಿ ವೈನ್ ಶಾಪ್ ಸಿಬ್ಬಂದಿ ಹಾಗೂ ರಮೇಶ್ ನಡುವೆ ವಾಗ್ವಾದ ನಡೆದಿದೆ. ವೈನ್ ಶಾಪ್ ಸಿಬ್ಬಂದಿ ರಮೇಶ್ ಅವರ ತಲೆಗೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ.
ಗಂಡನಿಗೆ ವಿಪರೀತ ರಕ್ತಸ್ರಾವವಾಗುತ್ತಿರುವುದನ್ನು ನೋಡಿದ ಹೆಂಡತಿ ಏನಾಯಿತು ಎಂದು ವಿಚಾರಿಸಿದಳು. ಬಳಿಕ ರಮೇಶ್​ ಎಲ್ಲ ಘಟನೆಯನ್ನು ಹೆಂಡತಿ ಮುಂದೆ ವಿವರಿಸಿದನು. ಇದರಿಂದ ಕುಪಿತಗೊಂಡ ರಮೇಶ್​ ಪತ್ನಿ ನೇರವಾಗಿ ವೈನ್ ಶಾಪ್​ಗೆ ತೆರಳಿದಳು. ತನ್ನ ಫ್ರೆಂಡ್ಸ್​ ಜತೆ ಸೇರಿ ವೈನ್ ಶಾಪ್ ಮೇಲೆ ದಾಳಿ ಮಾಡಿದ ರಮೇಶನ ಪತ್ನಿ, ಗಂಡನ ಮೇಲೆ ಹಲ್ಲೆ ಮಾಡಿದ ಸಿಬ್ಬಂದಿಗೆ ಚಳಿಬಿಡಿಸಿದಳು. ಈ ವೇಳೆ ವೈನ್ ಶಾಪ್ ಸಿಬ್ಬಂದಿ ಯಾಕೆ ಥಳಿಸಿದ್ದಾರೆ ಎಂದು ಪ್ರಶ್ನಿಸಿದಾಗ, ರಕ್ತ ಬರುವವರೆಗೆ ಯಾಕೆ ಹೊಡೆಯಬೇಕು ಎಂದು ವಾಗ್ವಾದಕ್ಕಿಳಿದಳು.
ಮಹಿಳೆ ಸುಮಾರು ಒಂದು ಗಂಟೆಗಳ ಕಾಲ ವೈನ್​ ಶಾಪ್​ ಸಿಬ್ಬಂದಿ ಜತೆ ಜಗಳವಾಡಿದರು. ಬಾಟಲಿಗಳು ಒಡೆದು ಕ್ಯಾಶ್ ಕೌಂಟರ್​ನಲ್ಲಿ ಹೈಡ್ರಾಮ ಮಾಡಿದರು. ಈ ಸಂಬಂಧ ವೈನ್ ಶಾಪ್ ಸಿಬ್ಬಂದಿ ಮಧುರಾನಗರ ಪೊಲೀಸರಿಗೆ ಮಾಹಿತಿ ನೀಡಿದರು. ಈ ಸ್ಥಳಕ್ಕೆ ಬಂದ ಪೊಲೀಸರನ್ನೂ ಬಿಡದ ಮಹಿಳೆ ಅವರನ್ನೂ ತರಾಟೆಗೆ ತೆಗೆದುಕೊಂಡರು. ಗಂಡನ ಮೇಲೆ ಹಲ್ಲೆ ಮಾಡಿದವರನ್ನು ಬಿಟ್ಟು ನಮ್ಮನ್ನು ತಡೆಯುತ್ತಾರೆ ಎಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆ ದಾಳಿ ಮಾಡಿದನ್ನು ಯಾರೋ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಬಿಗ್​ ಟಿವಿ)

ಆರ್​ಸಿಬಿ ಆಟಗಾರರಿಗೆ ಎಂ.ಎಸ್​. ಧೋನಿ ಶೇಕ್​ ಹ್ಯಾಂಡ್​ ಮಾಡಲಿಲ್ಲ ಏಕೆ? ಕೊನೆಗೂ ಕಾರಣ ಬಹಿರಂಗ!

ಮಾದಕ ನೋಟದಿಂದಲೇ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಮೈಬಿಸಿಯೇರಿಸಿದ್ದ ಈ ಸೌತ್​ ಬ್ಯೂಟಿ ಯಾರು ಗೊತ್ತಾ?

ಆ 2 ಸಿನಿಮಾದಿಂದ… ತನ್ನ ಬೋಳು ತಲೆಗೆ ಕಾರಣ ಬಿಚ್ಚಿಟ್ಟ ಬಾಹುಬಲಿ ಕಟ್ಟಪ್ಪ ಅಲಿಯಾಸ್​ ಸತ್ಯರಾಜ್​​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
