ಚೆನ್ನೈ: ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ತಂಡ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಸರ್ವಾಂಗೀಣ ನಿರ್ವಹಣೆ ಮುಂದುವರಿಸುವ ಮೂಲಕ ಸತತ ಮೂರನೇ ಗೆಲುವಿನ ಸಂಭ್ರಮ ಕಂಡಿದೆ. ವೇಗಿಗಳ ಮಾರಕ ಬೌಲಿಂಗ್​ ದಾಳಿ ಮತ್ತು ನಾಯಕ ಕೇನ್​ ವಿಲಿಯಮ್ಸನ್​ (78 ರನ್​, 107 ಎಸೆತ, 8 ಬೌಂಡರಿ, 1 ಸಿಕ್ಸರ್​), ಡೆರಿಲ್​ ಮಿಚೆಲ್​ (89*ರನ್​, 67 ಎಸೆತ, 6 ಬೌಂಡರಿ, 4 ಸಿಕ್ಸರ್​) ಉಪಯುಕ್ತ ಬ್ಯಾಟಿಂಗ್​ ನಿರ್ವಹಣೆಯ ಬಲದಿಂದ ನ್ಯೂಜಿಲೆಂಡ್​ ತಂಡ ತನ್ನ 3ನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿತು.
ಚಿದಂಬರಂ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಬಾಂಗ್ಲಾ, ಆರಂಭಿಕ ಆಘಾತದ ನಡುವೆ 9 ವಿಕೆಟ್​ಗೆ 245 ರನ್​ ಪೇರಿಸಲಷ್ಟೇ ಶಕ್ತವಾಯಿತು. ಪ್ರತಿಯಾಗಿ ಕಿವೀಸ್​ 42.5 ಓವರ್​ಗಳಲ್ಲಿ 2 ವಿಕೆಟ್​ಗೆ 248 ರನ್​ ಪೇರಿಸಿ ಗೆಲುವಿನ ಓಟ ಮುಂದುವರಿಸಿತು. ವಿಲಿಯಮ್ಸನ್​ 2ನೇ ವಿಕೆಟ್​ಗೆ ಡೆವೊನ್​ ಕಾನ್​ವೇ (45) ಜತೆ 80 ಮತ್ತು ಮಿಚೆಲ್​ ಜತೆ 108 ರನ್​ ಸೇರಿಸಿ ಜಯದ ಹಾದಿ ಸುಲಭಗೊಳಿಸಿದರು.
Lockie Ferguson is awarded the@aramco#POTMfor his starring show with the ball, having returned excellent figures of 3/49 🌟#CWC23#NZvBANpic.twitter.com/BSeJrDlpgj
— ICC Cricket World Cup (@cricketworldcup)October 13, 2023

ಕಿವೀಸ್​ ವೇಗಿಗಳಿಂದ ಕಡಿವಾಣಪಂದ್ಯದ ಮೊದಲ ಎಸೆತದಲ್ಲೇ ಲಿಟನ್​ ದಾಸ್​ (0) ವಿಕೆಟ್​ ಕಬಳಿಸಿದ ವೇಗಿ ಟ್ರೆಂಟ್​ ಬೌಲ್ಟ್​ (45ಕ್ಕೆ 2) ಕಿವೀಸ್​ಗೆ ಕನಸಿನ ಆರಂಭ ಒದಗಿಸಿದರು. ಬಳಿಕ ಇನ್ನಿಬ್ಬರು ವೇಗಿಗಳಾದ ಮ್ಯಾಟ್​ ಹೆನ್ರಿ (58ಕ್ಕೆ 2) ಮತ್ತು ಲಾಕಿ ಫಗ್ಯುರ್ಸನ್​ (49ಕ್ಕೆ 3) ಕೂಡ ಬಿಗಿ ದಾಳಿ ಸಂಟಿಸಿದರು. ಇದರಿಂದ ಒಂದು ಹಂತದಲ್ಲಿ 56 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಪರದಾಡಿದ ಬಾಂಗ್ಲಾ, ನಾಯಕ ಶಕೀಬ್​ ಅಲ್​ ಹಸನ್​ (40), ಮುಶ್ಫೀಕರ್​ ರಹೀಂ (66) ಹೋರಾಟದಿಂದ ಗೌರವಯುತ ಮೊತ್ತ ಪೇರಿಸುವಲ್ಲಿ ಸಫಲವಾಯಿತು.
ಬಾಂಗ್ಲಾದೇಶ: 9 ವಿಕೆಟ್​ಗೆ 245(ಮೆಹಿದಿ ಹಸನ್​ 30, ಶಾಂಟೊ 7, ಶಕೀಬ್​ 40, ಮುಶ್ಫೀಕರ್​ 66, ಹೃದಯ್​ 13, ಮಹಮುದುಲ್ಲಾ 41*, ಟಸ್ಕಿನ್​ 17, ಫಗ್ಯುರ್ಸನ್​ 49ಕ್ಕೆ 3, ಹೆನ್ರಿ 58ಕ್ಕೆ 2, ಬೌಲ್ಟ್​ 45ಕ್ಕೆ 2, ಸ್ಯಾಂಟ್ನರ್​ 31ಕ್ಕೆ 1),ನ್ಯೂಜಿಲೆಂಡ್​: 42.5 ಓವರ್​ಗಳಲ್ಲಿ 2 ವಿಕೆಟ್​ಗೆ 248(ಕಾನ್​ವೇ 45, ರಚಿನ್​ 9, ವಿಲಿಯಮ್ಸನ್​ 78, ಮಿಚೆಲ್​ 89*, ಫಿಲಿಪ್ಸ್​ 16*, ಮುಸ್ತಾಫಿಜುರ್​ 36ಕ್ಕೆ 1, ಶಕೀಬ್​ 54ಕ್ಕೆ 1).ಪಂದ್ಯಶ್ರೇಷ್ಠ:ಲಾಕಿ ಫಗ್ಯುರ್ಸನ್​.
Flicked down the ground for a maximum 💫
This Kane Williamson six is one of the moments that could be featured in your@0xFanCrazeCrictos Collectible packs!
Visithttps://t.co/2yiXAnq84lto own iconic moments from the#CWC23pic.twitter.com/DoJG3Snn8e
— ICC Cricket World Cup (@cricketworldcup)October 13, 2023

ವಿಲಿಯಮ್ಸನ್​ಗೆ ಮತ್ತೆ ಗಾಯಮೊಣಕಾಲು ಗಾಯದಿಂದ ಚೇತರಿಸಿಕೊಂಡು ಸುಮಾರು 7 ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳಿದ ಕಿವೀಸ್​ ನಾಯಕ ಕೇನ್​ ವಿಲಿಯಮ್ಸನ್​ ಅರ್ಧಶತಕ ಬಾರಿಸುವ ಮೂಲಕ ಯಶಸ್ವಿ ಪುನರಾಗಮನ ಕಂಡರು. ಆದರೆ ವೇಗಿ ಟಸ್ಕಿನ್​ ಅಹ್ಮದ್​ ಓವರ್​ನಲ್ಲಿ ಮಿಡ್​&ಆನ್​ನತ್ತ ಚೆಂಡು ಬಾರಿಸಿ ಸಿಂಗಲ್ಸ್​ ಕಸಿಯುವ ವೇಳೆ ಬಂದ ಥ್ರೋ ಅವರ ಎಡಕೈಗೆ ತಾಗಿತು. ಇದರಿಂದ ಅವರ ಮೊಣಕೈಗೆ ಗಾಯವಾಯಿತು. ಬಳಿಕ ನೋವಿನ ನಡುವೆ ಕೆಲ ಎಸೆತ ಎದುರಿಸಿದ ಬಳಿಕ ನಿವೃತ್ತಿ ಹೊಂದಿ ಡ್ರೆಸ್ಸಿಂಗ್​ ರೂಂಗೆ ಮರಳಿ ಹೆಚ್ಚಿನ ಚಿಕಿತ್ಸೆ ಪಡೆದರು.
ವಿಶ್ವಕಪ್​ನಲ್ಲಿ ಮೊದಲ ವಾರವೇ ದಾಖಲೆಗಳ ಧಮಾಕಾ; ಶತಕಗಳ ಸುರಿಮಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − one =
Remember me
